ಮಡಿಕೇರಿ, ಜು. ೨೩: ಜುಲೈ ೨೦ ರಿಂದ ಪುಷ್ಯ ಮಳೆ ನಕ್ಷತ್ರ ಆರಂಭಗೊAಡಿದ್ದು, ಆರಂಭದ ದಿನಗಳಲ್ಲಿ ಮಳೆ ಒಂದಷ್ಟು ಇಳಿಮುಖಗೊಂಡಿತ್ತು. ಆದರೆ ಇದೀಗ ಪುಷ್ಯಮಳೆಯೂ ರಭಸ ತೋರುವ ಲಕ್ಷಣಗಳು ಕಂಡು ಬರುತ್ತಿವೆ. ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಕಳೆದ ರಾತ್ರಿಯಿಂದ ಮಳೆ ಒಂದಷ್ಟು ಬಿರುಸು ತೋರಿದ್ದು, ಇಂದೂ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಮಳೆಯಾಗಿದೆ.
ಕೆಲ ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಜಿಲ್ಲೆಯ ಜನತೆ ತತ್ತರಿಸುವಂತಾಗಿತ್ತು. ಶನಿವಾರದಿಂದ ಈತನಕ ಸ್ವಲ್ಪಮಟ್ಟಿಗೆ ವಿರಾಮದಂತಿದ್ದರಿAದ ಚೇತರಿಸಿಕೊಳ್ಳುತ್ತಿದ್ದ ಜನತೆ ಇದೀಗ ಮತ್ತೆ ಮಳೆ ಹೆಚ್ಚಾಗುವ ಆತಂಕ ಎದುರಿಸುವಂತಾಗಿದೆ. ಹುದಿಕೇರಿ - ಕುಟ್ಟ ರಸ್ತೆಯಲ್ಲಿ ಹುದಿಕೇರಿ ಪೆಟ್ರೋಲ್ ಬಂಕ್ನ ಸನಿಹದ ಮೋರಿಯ ಬಳಿ ರಸ್ತೆ ಒಂದು ಭಾಗ ಕುಸಿತವಾದಂತಿದ್ದು, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್ ಅಳವಡಿಸಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಹೆಚ್ಚಿನ ರಭಸ ತೋರುತ್ತಿಲ್ಲವಾದರೂ ಗಾಳಿ ಅಧಿಕವಾಗಿದೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೧.೨೮ ಇಂಚು ಮಳೆಯಾಗಿದೆ.