ಪೊನ್ನಂಪೇಟೆ: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರು ಪೂರ್ಣಿಮೆಯನ್ನು ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು. ಆಶ್ರಮದ ಭಾವೈಕ್ಯ ಮಂದಿರದಲ್ಲಿ ಬೆಳಗ್ಗೆ ೫.೩೦ಕ್ಕೆ ವೇದಘೋಷ, ೮ ಗಂಟೆಗೆ ವಿಶೇಷ ರಾಮಕೃಷ್ಣ ಪೂಜೆ, ನಂತರ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಅಧ್ಯಕ್ಷರಾದ ಪರಹಿತಾನಂದ ಸ್ವಾಮೀಜಿಯವರಿಂದ ದಿನದ ಮಹತ್ವದ ಬಗ್ಗೆ ಪ್ರವಚನ ನಡೆಯಿತು.

ನಂತರ ವಿಶೇಷ ದೀಪ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ ಬಾಳೆಲೆಯ ಕಾವೇರಿ ಕಲಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಸಂಜೆ ೫ ಗಂಟೆಗೆ ಮಠದ ಸ್ವಾಮೀಜಿಗಳಿಂದ ಭಜನೆ, ಆರತಿ ಕಾರ್ಯಕ್ರಮದೊಂದಿಗೆ ಗುರುಪೂರ್ಣಿಮೆ ವಿಶೇಷ ಕಾರ್ಯಕ್ರಮಗಳು ಮುಕ್ತಾಯಗೊಂಡವು.ಕುಶಾಲನಗರ: ಗುರು ಪೂರ್ಣಿಮೆ ಅಂಗವಾಗಿ ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಮತ್ತು ನಮಾಮಿ ಕಾವೇರಿ ತಂಡದಿAದ ಐವರನ್ನು ಸನ್ಮಾನಿಸಲಾಯಿತು.

ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದ ಬಳಿ ನಡೆದ ೧೬೧ನೇ ಮಹಾ ಆರತಿ ಕಾರ್ಯಕ್ರಮದ ಸಂದರ್ಭ ನಿವೃತ್ತ ಶಿಕ್ಷಕರುಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ, ರಾಣು ಅಪ್ಪಣ್ಣ, ಎಂ.ಹೆಚ್. ನಜೀರ್ ಅಹ್ಮದ್, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಎ.ಪಿ. ಸುಬ್ಬಯ್ಯ ಮತ್ತು ಹಿರಿಯ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಬಳಗದ ಪ್ರಮುಖರಾದ ಡಿ.ಆರ್. ಸೋಮಶೇಖರ್, ಮಂಡೆಪAಡ ಬೋಸ್ ಮೊಣ್ಣಪ್ಪ, ಸುದೀಪ್, ಅಣ್ಣಯ್ಯ, ಶಿವಕುಮಾರ್, ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಚೈತನ್ಯ, ಧರಣಿ ಸೋಮಣ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಇತರರು ಇದ್ದರು.ನಾಪೋಕ್ಲು: ಗುರು ಪೂರ್ಣಿಮೆ ಅಂಗವಾಗಿ ಕಕ್ಕಬ್ಬೆಯಲ್ಲಿ ಕಾವೇರಿ ಮಾತೆಗೆ ಹಾಲೆರೆದು ಆರತಿ ಬೆಳಗಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಮಾಲಕ್ಷ್ಮಿ, ಸುಧಾ, ಅಶ್ವಿನಿ, ಜ್ಯೋತಿ, ಸರಸ್ವತಿ, ಲೀಲಾ, ಬಿಂದು, ಮನೋಜ್, ಡಾಲಿ, ಕೋಮಲ್ ಮತ್ತಿತರರಿದ್ದರು.ಕಣಿವೆ: ಪ್ರತಿಯೊಬ್ಬರು ಉತ್ತಮವಾದ ಗುಣಸ್ವಭಾವಗಳನ್ನು ಬೆಳೆಸಿಕೊಂಡಲ್ಲಿ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ರಣರಾಗಿಣಿ ಬೆಂಗಳೂರು ಶಾಖೆಯ ಮುಖ್ಯಸ್ಥೆ ಭವ್ಯಗೌಡ ಹೇಳಿದರು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕುಶಾಲನಗರ ಗೌಡ ಸಮಾಜದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಭೂಮಿಯ ಮೇಲೆ ಯಾರೂ ಕೂಡ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಂದಲ್ಲ ಒಂದು ದೋಷಗಳಿರುತ್ತವೆ. ಈ ದೋಷಗಳ ನಿರ್ಮೂಲನಕ್ಕೆ ಗುರುಗಳ ಕೃಪೆ ಬೇಕಿದೆ ಎಂದರು.

ಹಿAದೂ ಯುವಕರು ಬಹಳಷ್ಟು ಮಂದಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧಿಸಿದ ಭವ್ಯಗೌಡ, ಮಕ್ಕಳಿಗೆ ಚಿಕ್ಕಂದಿನಿAದಲೇ ಉತ್ತಮ ಸಂಸ್ಕಾರ ಕಲಿಸುವ ಕೆಲಸ ಇನ್ನಾದರೂ ಆಗಬೇಕಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪದ ಉದ್ಯಮಿ ಕೊಲ್ಲಿರ ಧರ್ಮಜ ಮಾತನಾಡಿ, ಹಿಂದೂ ಯುವಕರಿಗೆ ಯಾವುದೇ ಸಿನಿಮಾ ನಟ ಆದರ್ಶವಾಗದೇ ಹಿಂದೂ ಸನಾತನ ಪರಂಪರೆಯ ಶ್ರೇಷ್ಠರಾದ ಶ್ರೀಕೃಷ್ಣ, ಶ್ರೀರಾಮ, ಸೀತಾಮಾತೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಬಸವಣ್ಣ ಮೊದಲಾದವರು ಆದರ್ಶವಾಗಬೇಕೆಂದರು.

ಮರಡಿಯೂರಿನ ಆಶಾ ಬಾಲಕೃಷ್ಣ ಹಾಗೂ ಕುಶಾಲನಗರದ ಡಾ. ವಿನಯ್ ಕಾರ್ಯಕ್ರಮ ಆಯೋಜಿಸಿದ್ದರು.ಕುಶಾಲನಗರ: ಕುಶಾಲನಗರ ಸಾಯಿ ಬಡಾವಣೆಯ ಶ್ರೀ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ೬.೩೦ ಗಂಟೆಗೆ ಕಾಕಡ ಆರತಿ ನಂತರ ಏಳು ಗಂಟೆಗೆ ಗಣಪತಿ ಹೋಮ ನಡೆಯಿತು. ೭.೩೦ಕ್ಕೆ ಸಾಯಿ ಹೋಮ ನಂತರ ಪಂಚಾಮೃತ ಅಭಿಷೇಕ ಜರುಗಿತು.

ಭಕ್ತಾದಿಗಳಿಂದ ಕ್ಷೀರಾಭಿಷೇಕ ನಡೆಯಿತು. ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.

ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗವಿತ್ತು. ಈ ಸಂದರ್ಭ ಶ್ರೀ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು, ಉಪಾಧ್ಯಕ್ಷರಾದ ಎಸ್.ಎಲ್. ಶ್ರೀಪತಿ, ಕಾರ್ಯದರ್ಶಿ ರವಿಕುಮಾರ್, ಟ್ರಸ್ಟಿಗಳಾದ ಮುನಿಸ್ವಾಮಿ, ನಂಜುAಡಸ್ವಾಮಿ, ಒಬಲ್ ರೆಡ್ಡಿ ಇದ್ದರು.ಕುಶಾಲನಗರ: ಕುಶಾಲನಗರ ಸಾಯಿ ಬಡಾವಣೆಯ ಶ್ರೀ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ೬.೩೦ ಗಂಟೆಗೆ ಕಾಕಡ ಆರತಿ ನಂತರ ಏಳು ಗಂಟೆಗೆ ಗಣಪತಿ ಹೋಮ ನಡೆಯಿತು. ೭.೩೦ಕ್ಕೆ ಸಾಯಿ ಹೋಮ ನಂತರ ಪಂಚಾಮೃತ ಅಭಿಷೇಕ ಜರುಗಿತು.

ಭಕ್ತಾದಿಗಳಿಂದ ಕ್ಷೀರಾಭಿಷೇಕ ನಡೆಯಿತು. ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.

ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗವಿತ್ತು. ಈ ಸಂದರ್ಭ ಶ್ರೀ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು, ಉಪಾಧ್ಯಕ್ಷರಾದ ಎಸ್.ಎಲ್. ಶ್ರೀಪತಿ, ಕಾರ್ಯದರ್ಶಿ ರವಿಕುಮಾರ್, ಟ್ರಸ್ಟಿಗಳಾದ ಮುನಿಸ್ವಾಮಿ, ನಂಜುAಡಸ್ವಾಮಿ, ಒಬಲ್ ರೆಡ್ಡಿ ಇದ್ದರು.