ಅನಿಲ್ ಎಚ್.ಟಿ.
ಮಡಿಕೇರಿ, ಜು. ೨೪: ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಟ್ರಾವಲ್ ಫಾರ್ ಲೈಫ್ (ಜೀವನಕ್ಕಾಗಿ ಪ್ರವಾಸ) ಎಂಬ ಘೋಷವಾಕ್ಯದೊಂದಿಗೆ ಕೊಡಗಿಗೆ ಪ್ರವಾಸಿಗರನ್ನು ಸೆಳೆಯುವ ಅಭಿಯಾನವನ್ನು ಸೆಪೆÀ್ಟಂಬರ್ ತಿಂಗಳಿನಿAದ ಜಾರಿಗೊಳಿಸಲು ಕೊಡಗು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ಧತೆ ಕೈಗೊಂಡಿದೆ.
ಸ್ಥಳೀಯ ಪ್ರವಾಸೋದ್ಯಮಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪರಿಸರ ಸಂರಕ್ಷಣೆಯ ಜಾಗೃತಿ ನಿಟ್ಟಿನಲ್ಲಿಯೂ ಟ್ರಾವಲ್ ಫಾರ್ ಲೈಫ್ ಅಭಿಯಾನ ವಿಶೇಷ ಯೋಜನೆ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯವನ್ನು ಕೊಡಗು ಜಿಲ್ಲೆಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರಾವಲ್ ಫಾರ್ ಲೈಫ್ ಸಂದೇಶ ದೊಂದಿಗೆ ಅಭಿಯಾನ ಹಮ್ಮಿಕೊಳ್ಳ ಲಾಗುತ್ತಿದೆ. ಸ್ಥಳೀಯ ಖಾದ್ಯಗಳನ್ನು ಸೇವಿಸುವಂತೆ ಪ್ರಚಾರ ಮಾಡಲಾ ಗುತ್ತದೆ. ಏಕಬಳಕೆಯ ಪ್ಲಾಸ್ಟಿಕ್ ಅನ್ನು ಬಳಸದಂತೆ ಮನವಿ ಮಾಡಲಾಗುತ್ತದೆ. ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಮೂಲಕ ಕಳೆದ ಹಲವು ತಿಂಗಳಿನಿAದ ಕೊಡಗಿಗೆ ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿ ಗರಿಗೆ ಅಗತ್ಯ ಸೌಲಭ್ಯ ಕಲ್ಪಿಸು ವಲ್ಲಿಯೂ ಕೊಡಗು ಪ್ರವಾಸೋದ್ಯಮ ಇಲಾಖೆ ಸಿದ್ಧವಾಗುತ್ತಿದೆ ಎಂದರು.
೨೦೨೩ರಲ್ಲಿ ಕೊಡಗು ಜಿಲ್ಲೆಗೆ ದಾಖಲೆಯ ೪೨ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ, ೨೦೧೮ ರಲ್ಲಿ ೩೪ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದ ಅಂಕಿಗೆ ಹೋಲಿಸಿದರೆ ಈ ಪ್ರಮಾಣ ಶೇ. ೭೩ ರಷ್ಟು ಏರಿಕೆ ಕಂಡಿದೆ ಎಂದೂ ಅನಿತಾ ಭಾಸ್ಕರ್ ತಿಳಿಸಿದರು, ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡಗಿನಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಅವರ
(ಮೊದಲ ಪುಟದಿಂದ) ಸೂಕ್ತ ಮಾರ್ಗದರ್ಶನದಂತೆ ಅನೇಕ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸುತ್ತಿದೆ ಎಂದೂ ಅವರು ಹೇಳಿದರು.
ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉಪಯೋಗವಾಗು ವಂತೆ ಹೆದ್ದಾರಿ ಬದಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಫಲಕ ಅಳವಡಿಕೆ, ಪ್ರವಾಸಿ ತಾಣಗಳಲ್ಲಿ ಸೂಕ್ತ ಜಾಗೃತಿ ಫಲಕ ಮತ್ತು ಸಂಜ್ಞೆಗಳನ್ನು ಅಳವಡಿಸುವುದು, ಕೊಡಗಿನ ಸಂಸ್ಕೃತಿ, ಪ್ರವಾಸಿ ತಾಣಗಳ ಬಗ್ಗೆ ಕಾಫಿ ಟೇಬಲ್ ಬುಕ್ ಮುದ್ರಿಸುವುದು, ಸಾಕ್ಷö್ಯಚಿತ್ರ ನಿರ್ಮಾಣ ಇತ್ಯಾದಿ ಹಲವಾರು ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ.
೨೦೧೮ ಮತ್ತು ೨೦೧೯ ರ ಮಹಾಮಳೆಯಿಂದಾಗಿ ಆ ಎರಡೂ ವರ್ಷಗಳಲ್ಲಿ ಕೊಡಗು ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಮಹಾಮಳೆ, ಭೂಕುಸಿತ, ಪ್ರವಾಹದಿಂದ ಕೊಡಗು ಜಿಲ್ಲೆ ಮುಳುಗಿಯೇ ಹೋಯಿತು ಎಂಬ ವದಂತಿಗಳು ಕೂಡ ದೇಶವಿದೇಶಗಳ ಪ್ರವಾಸಿಗರನ್ನು ಕೊಡಗು ಜಿಲ್ಲೆಯ ಭೇಟಿಯಿಂದ ದೂರವಿಟ್ಟಿತ್ತು.
ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ೨೦೨೦ ಮತ್ತು ೨೦೨೧ ರಲ್ಲಿ ಕೋವಿಡ್ ಲಾಕ್ಡೌನ್ ಸಂಕಷ್ಟ ಎದುರಾಯಿತು. ಹೀಗಾಗಿ ಸತತ ೪ ವರ್ಷಗಳ ಕಾಲ ಕೊಡಗು ಪ್ರವಾಸೋದ್ಯಮ ಸಂಕಷ್ಟದ ಸುಳಿಯಲ್ಲಿ ಸಿಲುಕಿದ ಪರಿಣಾಮ ಅನೇಕ ಲಾಡ್ಜ್ಗಳು, ರೆಸ್ಟೋರೆಂಟ್, ರೆಸಾರ್ಟ್, ಹೋಂಸ್ಟೇಗಳು ಬಾಗಿಲು ಮುಚ್ಚುವ ಅನಿವಾರ್ಯ ಸ್ಥಿತಿ ತಲುಪಿತ್ತು.
ಹೀಗಿದ್ದರೂ ೨೦೨೩ ಮತ್ತು ೨೪ ನೇ ವರ್ಷ ಕೊಡಗು ಪ್ರವಾಸೋದ್ಯ ಮದ ಪಾಲಿಗೆ ಚೇತರಿಕೆಯ ವರ್ಷ ಗಳಾಗಿ ಪರಿಣಮಿಸಿದೆ. ಇಂದಿಗೂ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಿನ ಜಿಲ್ಲೆಯಾಗಿದೆ ಎಂದು ಕಳೆದ ಕೆಲವು ತಿಂಗಳಿನಿAದ ಕೊಡಗಿಗೆ ಬರುತ್ತಿರುವ ಅತ್ಯಧಿಕ ಪ್ರವಾಸಿಗರನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ,
ಮದ ಪಾಲಿಗೆ ಚೇತರಿಕೆಯ ವರ್ಷ ಗಳಾಗಿ ಪರಿಣಮಿಸಿದೆ. ಇಂದಿಗೂ ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಿನ ಜಿಲ್ಲೆಯಾಗಿದೆ ಎಂದು ಕಳೆದ ಕೆಲವು ತಿಂಗಳಿನಿAದ ಕೊಡಗಿಗೆ ಬರುತ್ತಿರುವ ಅತ್ಯಧಿಕ ಪ್ರವಾಸಿಗರನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ,
ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಕೊಡಗಿನ ಪ್ರಕೃತಿ, ಸಂಸ್ಕೃತಿಯ ಸಂರಕ್ಷಣೆಯ ಜತೆಗೇ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರಾವಲ್ ಫಾರ್ ಲೈಫ್ ಯೋಜನೆ ರೂಪು ಗೊಳ್ಳುತ್ತಿದೆ. ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಮಾಹಿತಿ, ಜಾಗೃತಿ ಮತ್ತು ಸೌಹಾರ್ಧತೆಯ ಬೆಸುಗೆಯಾಗಿ ಕೊಡಗು ಪ್ರವಾಸೋದ್ಯಮ ಇಲಾಖೆ ಈ ಯೋಜನೆ ಮೂಲಕ ಕಾರ್ಯನಿರ್ವಹಿಸಲಿದೆ,