ಸುಂಟಿಕೊಪ್ಪ, ಜು. ೨೪: ಹರದೂರು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಪೌಂಢೇಶನ್ ವತಿಯಿಂದ ಇಂಟಲಿಜೆನ್ಸ್ ಫಾರ್ ಅಪ್ ಸ್ಕಿಲ್ಲಿಂಗ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹರದೂರು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯದಲ್ಲಿ ನಡೆದ ತರಬೇತಿ ಶಿಬಿರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ. ಉಷಾ ಉದ್ಘಾಟಿಸಿದರು. ತರಬೇತಿ ಬಗ್ಗೆ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ರಕ್ಷಿತ್ ಹಾಗೂ ಜಿಲ್ಲಾ ವ್ಯವಸ್ಥಾಪಕ ದಿಲೀಫ್ ಮಾಹಿತಿ ನೀಡಿದರು. ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಬಿ. ಪೂರ್ಣಿಮ, ಸದಸ್ಯೆ ಬೋಜಮ್ಮ ಉಪಸ್ಥಿತರಿದ್ದರು. ಪೂರ್ಣಿಮ ಪ್ರಾರ್ಥಿಸಿ, ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮೇಲ್ವಿಚಾರಕಿ ಸಂದ್ಯಾ ಸ್ವಾಗತಿಸಿ, ನಿರೂಪಿಸಿದರು.