ವೀರಾಜಪೇಟೆ, ಜು. ೨೪: ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವÀತಿಯಿಂದ ತಾ. ೨೬ರಂದು ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರ ಸ್ಮಾರಕ ಸ್ತಂಭಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮ ಶಾಲಾ -ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ, ಹಾಗೂ ದೇಶ ಭಕ್ತರು ಸೇರಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿ¸ Àಲಾಗುವುದು ಎಂದು ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು ತಾ. ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಹೃದಯ ಭಾಗವಾದ ಗಡಿಯಾರ ಕಂಬದಿAದ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆಯ ಮೂಲಕ ಪಥಸಂಚಲನ ನಡೆಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಭಾಗ ಇರುವ ಹುತಾತ್ಮ ಯೋಧರ ಸ್ಮಾರಕ ಸ್ತಂಭಕ್ಕೆ ಗೌರವ ಸಮರ್ಪಿಸ ಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ರಾಜ ಚಂದ್ರಶೇಖರ್ ಮಾತನಾಡಿ, ಪ್ರತಿ ವರ್ಷ ಸಾತಂತ್ರö್ಯ ದಿನಾಚರಣೆಯಂದು ಸೇನೆಯಲ್ಲಿ ವಿಶಿಷ್ಟ ಸಾಧನೆ, ಯುದ್ಧದಲ್ಲಿ ಪಾಲ್ಗೊಂಡ ಮಾಜಿ ಯೋಧರನ್ನು ಗೌರವಿಸಲಾಗುತ್ತದೆ. ೭೦ ವರ್ಷ ಮೇಲ್ಪಟ್ಟ ಮಾಜಿ ಸೈನಿಕರು ತಮ್ಮ ಅರ್ಜಿಯನ್ನು ಆಗಸ್ಟ್ ೧೦ ರೊಳಗೆ ಸಂಘದ ಕಚೇರಿಗೆ ತಲುಪಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಪುಗ್ಗೇರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರಾದ ಸಲಾಂ ಎಂ.ಕೆ ಕಡಂಗ, ಕೊಂಗAಡ ಭೀಮಯ್ಯ, ಕಬ್ಬಚಿರ ರತ್ನ ಬೋಪಯ್ಯ, ಬಾಳೆಕುಟ್ಟಿರ ದಿನಿ ಬೋಪಯ್ಯ ಉಪಸ್ಥಿತರಿದ್ದರು.