ಕುಶಾಲನಗರ, ಜು. ೨೪: ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಕುಶಾಲನಗರ ಸಂಚಾರಿ ಪೊಲೀಸ್ ನಡುವೆ ಶೀತಲ ಮುನಿಸಿನ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪಟ್ಟಣದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕುಶಾಲನಗರ ಪಟ್ಟಣದಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಚಾರಿ ಠಾಣೆ ಆರಂಭವಾಗಿದ್ದು, ಪಟ್ಟಣದಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ನಿರ್ಮಿಸಲು ಪೊಲೀಸರು ನಿಯಮ ಉಲ್ಲಂಘಿಸುವ ಸವಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕಾಯಕದಲ್ಲಿ ತೊಡಗಿದ್ದರು.

ಹೆಲ್ಮೆಟ್ ಧರಿಸದೆ ಪ್ರಯಾಣ, ಪಟ್ಟಣದ ಮೂಲಕ ಹಾದು ಹೋಗುವ ವಾಹನಗಳನ್ನು ರಾಷ್ಟಿçÃಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ನಿಲುಗಡೆಗೊಳಿಸುವುದು, ಸುಗಮ ಸಂಚಾರಕ್ಕೆ ಅಡ್ಡಿ ಮಾಡುವುದು, ದ್ವಿಚಕ್ರ ವಾಹನದಲ್ಲಿ ಮೂರು ಮೂರು ಮಂದಿ ಪ್ರಯಾಣ... ಈ ರೀತಿಯ ಸಂಚಾರ ನಿಯಮ ಉಲ್ಲಂಘನೆ ಕಂಡುಬAದಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ವಾಹನ ಸವಾರರಿಗೆ ದಂಡ ವಿಧಿಸುತ್ತಿರುವ ಕ್ರಮವನ್ನು ಸ್ಥಳೀಯ ಕೆಲವು ವ್ಯಾಪಾರಿಗಳು ವಿರೋಧಿಸುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಉಪ ವಿಭಾಗಾಧಿಕಾರಿಗಳು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಅಮೃತರಾಜ್ ಮತ್ತು ಡಿ.ಕೆ. ತಿಮ್ಮಪ್ಪ ಅವರುಗಳು ಈ ಕ್ರಮವನ್ನು ವಿರೋಧಿಸಿ ಸಭೆ ಗಮನಕ್ಕೆ ತಂದಿದ್ದರು.

ಸAಚಾರಿ ಠಾಣೆಯ ನೂತನ ಕಟ್ಟಡಕ್ಕೆ ಅಗತ್ಯ ಇರುವ ಜಾಗದ ಬಗ್ಗೆ ಚರ್ಚೆ ಬಂದ ಸಂದರ್ಭ ಸದಸ್ಯ ಅಮೃತ್ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯನ್ನು ರದ್ದುಗೊಳಿಸಬೇಕು ಎಂದು ಪ್ರಸ್ತಾಪಿಸಿ ಪೊಲೀಸರು ಪಟ್ಟಣದಲ್ಲಿ ವಾಹನಗಳಿಗೆ ದಂಡ ಹಾಕುವ ಕಾರಣ ವ್ಯಾಪಾರಸ್ಥರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಮೂಲಕ ವ್ಯಾಪಾರ ವಹಿವಾಟಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು. ಪಕ್ಕದ ಕೊಪ್ಪ ಗ್ರಾಮದಲ್ಲಿ ಇಲ್ಲದಿರುವ ನಿಯಮ ಕುಶಾಲನಗರದಲ್ಲಿ ಯಾಕೆ? ಎಂಬ ಚರ್ಚೆಗಳು ಕೂಡ ನಡೆದವು.

ಇದಕ್ಕೆ ಪೂರಕವಾಗಿ ಸದಸ್ಯರಾದ ಡಿ.ಕೆ. ತಿಮ್ಮಪ್ಪ ಅವರು ಧ್ವನಿಗೂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತು ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಬಗಲಿ ಅವರು ಈ ಸಂದರ್ಭ ಸಭೆಗೆ ಸಮಜಾಯಿಸಿಕೆ ನೀಡಿ ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ದಿನದ ೨೪ ಗಂಟೆಗಳ ಕಾಲ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಲವು ಬಾರಿ ಸೂಚನೆ ನೀಡಿದರೂ ಉದ್ದೇಶಪೂರ್ವಕವಾಗಿ ಸಂಚಾರಿ ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ಹಾಕುತ್ತಿದ್ದೇವೆ. ಯಾವುದೇ ರೀತಿಯಲ್ಲಿ ನಿಯಮಬಾಹಿರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಭೆಯಲ್ಲಿ ಸ್ಪಷ್ಟನೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದು ಕೂಡಾ ಕಂಡುಬAದಿತ್ತು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು ಕರ್ತವ್ಯ ಸಂದರ್ಭ ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡು ಹೋಗಿ ಎಂದು ಹೇಳಿದ್ದು ಕೇಳಿ ಬಂದಿತ್ತು.

ಇದೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಕುಶಾಲನಗರ ಪಟ್ಟಣ ಸಂಚಾರ ವ್ಯವಸ್ಥೆ ಸಂಪೂರ್ಣ ಅನಾಥವಾಗಿದೆ. ಪಟ್ಟಣದ ಹೃದಯ ಭಾಗದ ರಸ್ತೆ ಬದಿಯ ಸಂಚಾರಿ ಕೇಂದ್ರಗಳಲ್ಲಿ ಮಂಗಳವಾರ ಪೊಲೀಸರ ಗೈರು ಎದ್ದು ಕಂಡು ಬಂತು.

ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಎರಡು ಕಡೆ ಸಂಚಾರಿ ಪೊಲೀಸ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಇಲ್ಲದೆ ವಾಹನ ಸಂಚಾರ ಬಹುತೇಕ ಹದಗೆಟ್ಟಿತ್ತು.

ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರನ್ನು ಪಟ್ಟಣದಲ್ಲಿ ನಿಯೋಜಿಸಲು ಸಂಬAಧಿಸಿದ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಮೂಲಕ ಪುರಸಭೆಗೆ ೨೩ ಲಕ್ಷ ರೂ.ಗಳನ್ನು ಪಾವತಿಸಿ ನಾಲ್ಕು ವರ್ಷಗಳು ಸಂದಿವೆ. ಪುರಸಭೆಯ ಕೆಲವು ಸದಸ್ಯರ ಅಸಹಕಾರದಿಂದ ಈ ಪ್ರಕ್ರಿಯೆ ವಿಳಂಬವಾಗಿದೆ ಎನ್ನುವುದು ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ ಅವರ ಪ್ರತಿಕ್ರಿಯೆಯಾಗಿದೆ.

ಕುಶಾಲನಗರ ಚಿಕ್ಕಣ್ಣ ಬಡಾವಣೆಯಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಸ್ಥಳ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಮೂಲಕ ದೊರೆತಿರುವ ಸುಮಾರು ರೂ. ೨.೫೦ ಕೋಟಿ ಕಟ್ಟಡ ನಿಧಿ ವರ್ಗಾವಣೆಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಸಂಚಾರಿ ಪೊಲೀಸ್ ಠಾಣೆಗೆ ಅಗತ್ಯವಿರುವ ಸ್ಥಳದ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಇದೀಗ ಕುಶಾಲನಗರ ಪಟ್ಟಣದಲ್ಲಿ ಸಂಚಾರಿ ಪೊಲೀಸರ ಕಾರ್ಯಾಚರಣೆ ಇಲ್ಲದೆ ಪಟ್ಟಣದಲ್ಲಿ ಸಮರ್ಪಕ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಇನ್ನೊಂದೆಡೆ ಕುಶಾಲನಗರ ಮೈಸೂರು ಹೆದ್ದಾರಿಯಲ್ಲಿರುವ ವಾರದ ಸಂತೆ ಮಾರುಕಟ್ಟೆಯಲ್ಲಿ ಕೂಡ ಪೊಲೀಸರ ಉಪಸ್ಥಿತಿ ಇಲ್ಲದೆ ಹೆದ್ದಾರಿ ಬಳಿ ಮತ್ತೆ ಸಂಚಾರ ವ್ಯವಸ್ಥೆ ಏರುಪೇರಾದ ದೃಶ್ಯ ಕಂಡುಬAತು. ಆದಷ್ಟು ಬೇಗನೆ ಈ ಮುನಿಸಿಗೆ ಶಾಶ್ವತ ವಿರಾಮ ಹಾಕುವ ಮೂಲಕ ಕುಶಾಲನಗರದ ಸುಗಮ ಸಂಚಾರಕ್ಕೆ ಮತ್ತು ಪಟ್ಟಣದ ವ್ಯಾಪಾರಿಗಳ ಸಮಸ್ಯೆಯ ಪರಿಹಾರಕ್ಕೆ ಅನುವು ಮಾಡಿಕೊಡಬೇಕಿದೆ. -ಚಂದ್ರಮೋಹನ್