ಗೋಣಿಕೊಪ್ಪಲು, ಜು. ೨೪: ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷರಾಗಿ ಕಳೆ ೧೨ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಾಡ್ಯಮಾಡ ಮನು ಸೋಮಯ್ಯನವರನ್ನು ಇತ್ತೀಚೆಗೆ ರಾಜ್ಯ ರೈತ ಸಂಘದ ಶಿಸ್ತು ಸಮಿತಿಯು ಪದಚ್ಯುತಿಗೊಳಿಸಿದ ಹಿನ್ನಲೆಯಲ್ಲಿ ತುರ್ತು ಸಭೆ ಸೇರಿದ ಕೊಡಗು ಜಿಲ್ಲೆಯ ೫ ತಾಲೂಕಿನ ಪದಾಧಿಕಾರಿಗಳು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ರೈತ ಸಂಘದ ನಿರ್ಧಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವ ಮೂಲಕ ಕ್ಷಿಪ್ರಗತಿಯಲ್ಲಿ ಬೆಳವಣಿಯ ಹಿನ್ನಲೆಯ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲು ನಿರ್ಣಯ ಕೈಗೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಗೋಣಿಕೊಪ್ಪಲುವಿನ ಕೇಂದ್ರ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ತುರ್ತು ಸಭೆಯಲ್ಲಿ ನೆರೆದಿದ್ದ ರೈತ ಸಂಘದ ಪದಾಧಿಕಾರಿಗಳು ಕಾಡ್ಯಮಾಡ ಮನು ಸೋಮಯ್ಯ ನಿಷ್ಠಾವಂತ ಕಾರ್ಯಕರ್ತರಾಗಿ ಕೊಡಗಿನಲ್ಲಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಆರಂಭದಲ್ಲಿ ಕೊಡಗು ಜಿಲ್ಲೆಗೆ ರೈತ ಚಳುವಳಿಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆ ಬಲಿಷ್ಠಗೊಳ್ಳುತ್ತಿದ್ದಂತೆಯೇ ರೈತ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷರನ್ನಾಗಿಯೂ ರಾಜ್ಯ ಸಮಿತಿಯು ಇವರನ್ನು ನೇಮಕಗೊಳಿಸಿತ್ತು ಎಂದು ವಿವರಿಸಿದರು.

ಇದೀಗ ರಾಜ್ಯ ರೈತ ಸಂಘದ ಶಿಸ್ತುಪಾಲನ ಸಮಿತಿ ಹಲವು ಆರೋಪಗಳನ್ನು ಮನು ಸೋಮಯ್ಯ ನವರ ಮೇಲೆ ಹೊರಿಸಿ ಪದಾಧಿ ಕಾರದಿಂದ ಪದಚ್ಯುತಗೊಳಿಸಿರುವುದು ಸರಿಯಾದ ಕ್ರಮವಲ್ಲ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಸೋಮವಾರಪೇಟೆ ತಾಲೂಕಿನ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಹೂವಯ್ಯನವರು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಈ ಬಗ್ಗೆ ಜಿಲ್ಲೆಯ ವಿವಿಧ ತಾಲೂಕಿನ ಪದಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸುವಂತೆ ಸಭೆಗೆ ತಿಳಿಸಿದರು.

ಅಂತಿಮವಾಗಿ ಜಿಲ್ಲಾಧ್ಯಕ್ಷರಾಗಿ ಮನು ಸೋಮಯ್ಯನವರೇ ಮುಂದು ವರೆಯುವಂತೆ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರೈತ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮುಂದು ವರೆಯುವಂತೆ ಸದಸ್ಯರು ಹಾಗೂ ಪದಾಧಿಕಾರಿಗಳು ಒಮ್ಮತದ ನಿರ್ಧಾರ ಕೈಗೊಂಡು ನಿರ್ಣಯವನ್ನು ಕೈಗೊಂಡರು. ನಿರ್ಣಯದ ಪ್ರತಿಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಗೆ ರವಾನಿಸುವಂತೆ ತಿಳಿಸಲಾಯಿತು.

ರಾಜ್ಯ ರೈತ ಸಂಘವು ಕೈಗೊಂಡ ತೀರ್ಮಾನದ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಜಿಲ್ಲಾಧ್ಯಕ್ಷರಾದ ಮನು ಸೋಮಯ್ಯನವರನ್ನು ಸಭೆಯು ಆಗ್ರಹಿಸಿತ್ತು. ಈ ವೇಳೆ ಮಾತನಾಡಿದ ಮನು ಸೋಮಯ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ರೈತ ಸಂಘದ ಕೆಲವು ಪದಾಧಿಕಾರಿಗಳು ಒಂದು ರಾಷ್ಟಿçÃಯ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ಕಾಣದ ಕೈಗಳು ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿವೆ. ಇದನ್ನು ತಾನು ರಾಜ್ಯ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಈ ಕಾರಣವನ್ನು ಮುಂದಿಟ್ಟುಕೊAಡು ರಾಜ್ಯ ಸಮಿತಿಯ ಪದಾಧಿಕಾರಿಗಳು ಶಿಸ್ತು ಸಮಿತಿಯ ಮೂಲಕ ನೋಟಿಸ್ ನೀಡಿ ಸಮಜಾಯಿಸಿಕೆ ಬಯಸಿದ್ದರು. ಅದರಂತೆ ವಿವರ ನೀಡಿದ್ದೇನೆ.

ಆದರೆ, ವಿವರಣೆಗೆ ಮಾನ್ಯತೆ ನೀಡಿರುವುದಿಲ್ಲ. ಇದನ್ನೇ ಮುಂದಿಟ್ಟುಕೊAಡು ಇದೀಗ ಸಮಿತಿಯಿಂದ ಪದಚ್ಯುತಿಗೊಳಿಸಿದಲ್ಲದೆ. ಕೊಡಗು ಜಿಲ್ಲೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಪದಚ್ಯುತಗೊಳಿ ಸಿದ್ದಾರೆ ಎಂದು ವಿವರಿಸಿದರು.

ಸಭೆಯಲ್ಲಿ ರೈತ ಸಂಘದ ಪೊನ್ನಂಪೇಟೆ ತಾಲೂಕಿನ ಅಧ್ಯಕ್ಷ ಆಲೆಮಾಡ ಮಂಜುನಾಥ್, ವೀರಾಜ ಪೇಟೆ ತಾಲೂಕಿನ ಅಧ್ಯಕ್ಷ ಬಾಚಮಾಡ ಭವಿಕುಮಾರ್, ಶ್ರೀಮಂಗಲ ಹೋಬ ಳಿಯ ಅಧ್ಯಕ್ಷ ಕಂಬ ಕಾರ್ಯಪ್ಪ, ಮಹಿಳಾ ಅಧ್ಯಕೆÀ್ಷ ಮಿದೇರಿರ ಕವಿತ ರಾಮು ಸೇರಿದಂತೆ ಅನೇಕ ಹಿರಿಯ ನಾಯಕರು ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಇಟ್ಟೀರ ಸಬಿತಾ ಭೀಮಯ್ಯ, ಸಿದ್ದಾಪುರ ಅಧ್ಯಕ್ಷ ವಜ್ರು ಬೋಪಣ್ಣ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ತಿತಿಮತಿ ಭಾಗದ ಚೆಪ್ಪುಡೀರ ಕಾರ್ಯಪ್ಪ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್