ಮಡಿಕೇರಿ, ಜು. ೨೪ : ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಒತ್ತಾಯಿಸಿದರು. ಸಿದ್ದಾಪುರದ ಖಾಸಗಿ ತೋಟದ ಹಾಗೂ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಸಿಎನ್ಸಿ ವತಿಯಿಂದ ವೀರಾಜಪೇಟೆ ಗಡಿಯಾರ ಕಂಬದ ಬಳಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂಪರಿವರ್ತನೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಆದರೆ ಭೂಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಒತ್ತಡಕ್ಕೆ ಮಣಿದು ಬೃಹತ್ ಭೂಪರಿವರ್ತನೆ ಮಾಡಿಕೊಡಲಾಗುತ್ತಿದೆ. ತಡಿಯಂಡ್ಮೋಲ್ನಿAದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವರೆಗೆ ನಿಷೇಧಿತ ಪ್ರದೇಶದಲ್ಲಿ ಭೂಪರಿವರ್ತನೆಯಾಗುತ್ತಿದೆ.
ತಲಕಾವೇರಿ, ಭಾಗಮಂಡಲ ಕೊಡವ ಟ್ರಸ್ಟ್ಗೆ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ನಿರಾಕರಣೆ ಮಾಡಿರುವುದು ಸಂವಿಧಾನದ ೫೧ ಎ ಮತ್ತು ೨೫, ೨೬ ವಿಧಿಯ ಉಲ್ಲಂಘನೆಯಾಗಿದೆ. ಅತ್ಯಂತ ಸಣ್ಣ ಸಮುದಾಯವೊಂದು ಧಾರ್ಮಿಕ ಆಚಾರ, ವಿಚಾರಗಳನ್ನು ಮುಕ್ತವಾಗಿ ಆಚರಣೆ ಮಾಡಲು ಅಡ್ಡಿಪಡಿಸಿದಂತಾಗಿದೆ. ಕೊಡವರು ತಮ್ಮ ಜನ್ಮಭೂಮಿಯಲ್ಲಿ ನ್ಯಾಯಸಮ್ಮತವಾಗಿ ಮನೆ ನಿರ್ಮಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಇಲ್ಲಸಲ್ಲದ ನಿಯಮಗಳನ್ನು ರೂಪಿಸಿ ಕಿರುಕುಳ ನೀಡಲಾಗುತ್ತಿದೆ. ಭೂಕುಸಿತವಾದ ಮಗ್ಗುಲದ ಮಲೆತಿರಿಕೆ ಬೆಟ್ಟದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣಗೊಂಡಿದೆ. ಬಿಟ್ಟಂಗಾಲ ಬಾಳುಗೋಡು ಬಳಿ ದೇವರಕಾಡು ಲೂಟಿ ಮಾಡಿ ಕೊಡವರ ಪವಿತ್ರ ದೇವನೆಲೆ ಬಳಿಯಲ್ಲಿ ರೆಸಾರ್ಟ್ ಮಾಫಿಯಾ ಮತ್ತು ಡೆವಲಪರ್ಗೆ ಟೌನ್ ಶಿಪ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಕೊಡವ ಲ್ಯಾಂಡ್ನ ಸಂರಕ್ಷಣೆಗಾಗಿ ಸರ್ವ ಕೊಡವರು ಭೂಮಾಫಿಯಾದ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದು ಈ ಸಂದರ್ಭ ಕರೆ ನೀಡಿದರು. ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ನಾಚಪ್ಪ ಹೇಳಿದರು.
ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕರ್ನಲ್ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಮನೆಯಪಂಡ ಕಾಂತಿ ಸತೀಶ್, ಬಲ್ಲಡಿಚಂಡ ಬೇಬಿ ಮೇದಪ್ಪ, ಮಾಳೇಟಿರ ಶ್ರೀನಿವಾಸ್, ಮಾಚೇಟಿರ ಚೋಟು ಕಾವೇರಿಪ್ಪ, ಮಾಳೇಟಿರ ಕುಶಾಲಪ್ಪ, ಬಲ್ಲಚಂಡ ರವಿ, ಸೋಮೆಯಂಡ ಬೋಸು, ಕೇಟೋಳಿರ ಸೋಮಣ್ಣ, ಉದಿಯಂಡ ಚೆಂಗಪ್ಪ, ಸೋಮೆಯಂಡ ರೇಶ, ಮಾತಂಡ ಕಂಬ ಉತ್ತಯ್ಯ, ಬಾಳೆಯಡ ಮಂದಪ್ಪ, ಐತಿಚಂಡ ಬನ್ಸಿ, ಪಾಲೆಕಂಡ ಪ್ರತಾಪ್, ಅಪ್ಪಾರಂಡ ವಿವೇಕ್, ಪಟ್ರಪಂಡ ರಮೇಶ್, ನೆರ್ಪಂಡ ಜಿಮ್ಮಿ, ಅಜ್ಜಿನಿಕಂಡ ಪ್ರಭು ಮೊಣ್ಣಯ್ಯ, ಮಂಡೇಪAಡ ರಾಜೇಶ್, ಉದ್ದಪಂಡ ಕಾರ್ತಿಕ್, ಪೊರ್ಕೊಂಡ ನಾಚಪ್ಪ, ಕಾಳೇಂಗಡ ರಮೇಶ್, ಪುಟ್ಟಿಚಂಡ ನವೀನ್, ಪುಟ್ಟಿಚಂಡ ನರು, ಐಚೆಟ್ಟೀರ ರಂಜಿ ಕುಟ್ಟಯ್ಯ, ಐಚೆಟ್ಟೀರ ಮೋಹನ್, ಅಪ್ಪನೆರವಂಡ ರಾಮು ಮೇದಪ್ಪ, ಚಂಗAಡ ಚಾಮಿ, ಪಾಲೆಕಂಡ ರಮೇಶ್, ಪಾಲೆಕಂಡ ರತ್ನ, ಕಾಣತಂಡ ರಮೇಶ್, ಅಮ್ಮಂಡ ವಾಸು, ಸೋಮೆಯಂಡ ಮನು, ಬೇಪಡಿಯಂಡ ಅಮಿತ್, ಬೇಪಡಿಯಂಡ ಪೊನ್ನಣ್ಣ, ಬೇಪಡಿಯಂಡ ವಿವಿನ್, ಚಂಬಾAಡ ಸಂತೋಷ, ಕಾಂಡೇರ ಸುರೇಶ್, ಮೂಕೊಂಡ ದಿಲೀಪ್, ಚಂಬಾAಡ ಜನತ್, ಅಜ್ಜಿಕುಟ್ಟಿರ ಲೋಕೇಶ್, ಅಪ್ಪಾರಂಡ ಪ್ರಸಾದ್, ಕಿರಿಯಮಾಡ ಶರೀನ್, ಪಾರ್ವಂಗಡ ನವೀನ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಅಪ್ಪೆಂಗಡ ಮಾಲೆ, ಅಪ್ಪಾರಂಡ ತಿಮ್ಮಯ್ಯ, ನಂದೇಟಿರ ರವಿ, ಪುದಿಯೋಕ್ಕಡ ಕಾಶಿ, ಜಮ್ಮಡ ಮೋಹನ್, ಪುಟ್ಟಿಚಂಡ ಡಾನ್, ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಕೊಡವಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ತಾ.೨೯ ರಂದು ಟಿ.ಶೆಟ್ಟಿಗೇರಿಯಲ್ಲಿ, ಆಗಸ್ಟ್ ೧೦ ರಂದು ಮಾದಾಪುರದಲ್ಲಿ ಹಾಗೂ ಆಗಸ್ಟ್ ೧೮ ರಂದು ಸುಂಟಿಕೊಪ್ಪದಲ್ಲಿ ಸಿ.ಎನ್.ಸಿ ವತಿಯಿಂದ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.