ವೀರಾಜಪೇಟೆ, ಜು. ೨೪: ವೀರಾಜಪೇಟೆಯ ಶ್ರೀ ಕಾವೇರಿ ಭಕ್ತ ಜನಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ‘ಶ್ರೀ ಕಾವೇರಿ ಆಶ್ರಮದ ಪುನಶ್ಚೇತನಕ್ಕೆ ಅಖಿಲ ಕೊಡವ ಸಮಾಜ ತೀರ್ಮಾನಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಈ ಹಿನ್ನೆಲೆಯಲ್ಲಿ ಭಕ್ತ ಜನಸಂಘವನ್ನು ಹೊಸ ಪದಾಧಿಕಾರಿಗಳೊಂದಿಗೆ ಪುನಶ್ಚೇತನಗೊಳಿಸಲು ಮುಂದಾಗಲಾಗಿದೆ. ಸಂಘದ ಸದಸ್ಯರೂ ಆಗಿರುವ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿಕೊಂಡು ಮುಂದುವರೆಯುವAತೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಭಾವಿತ ಪದಾಧಿಕಾರಿಗಳಾಗಿ, ಅಧ್ಯಕ್ಷರಾಗಿ ಬಾಚರಣಿಯಂಡ ಪಿ.ಅಪ್ಪಣ್ಣ (ಭಕ್ತ ಜನ ಸಂಘದ ಸದಸ್ಯರು), ಗೌರವ ಅಧ್ಯಕ್ಷರಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷರಾಗಿ ವೀರಾಜಪೇಟೆ ಕೊಡವ ಸಮಾಜ, ಮೈಸೂರು ಕೊಡವ ಸಮಾಜ ಹಾಗೂ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರುಗಳೊಂದಿಗೆ ಕೊಲ್ಲಿರ ಉಮೇಶ್, ರಾಜೀವ್ ಬೋಪಯ್ಯ, ಕಾರ್ಯದರ್ಶಿಯಾಗಿ ನಾಯಕಂಡ ಯು.ಅರುಣ್ ಅಪ್ಪಯ್ಯ (ಹಾಲಿ ಕಾರ್ಯದರ್ಶಿ), ತಾತ್ಕಾಲಿಕ ಗೌರವ ಕಾರ್ಯದರ್ಶಿಯಾಗಿ ಅಖಿಲ ಕೊಡವ ಸಮಾಜ ಕಾರ್ಯದರ್ಶಿ ಹಾಗೂ ಮತ್ತೊಬ್ಬರನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ.

ಕೊಡವ ಸಮಾಜಗಳ ಪರ ಸದಸ್ಯರಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರು, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರು, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರು, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರು, ದಾನಿಗಳ ಪರ ಭಾವಿ ಭಕ್ತ ಜನ ಸಂಘದ ಸದಸ್ಯರಾಗಿ ನೆಲ್ಲಮಕ್ಕಡ ಲೋಕೇಶ್ ಬೋಪಣ್ಣ, ಕುಟ್ಟಂಡ ಅಜಿತ್, ಪುಗ್ಗೆರ ಕುಟುಂಬ, ಮಾಳೇಟಿರ ಕುಟುಂಬ, ಪಳಂಗAಡ ಕುಟುಂಬ, ನಂಬುಡುಮಾಡ ಕುಟುಂಬ, ತಾತಂಡ ಕುಟುಂಬ, ಕೊಂಗAಡ ಕುಟುಂಬ, ಪಟ್ಟಡ ಕುಟುಂಬ ಹಾಗೂ ಪಟ್ರಪಂಡ ಕುಟುಂಬದಿAದ ತಲಾ ಒಬ್ಬರು, ಹಾಲಿ ಎಲ್ಲಾ ಟ್ರಸ್ಟಿಗಳು ಮತ್ತು ಉಳ್ಳಿಯಡ ಎಂ.ಪೂವಯ್ಯ (ಸಂಪಾದಕರು, ಬ್ರಹ್ಮಗಿರಿ ವಾರಪತ್ರಿಕೆ) ಅವರಿಗೆ ವಿಶೇಷ ಸ್ಥಾನ ನೀಡುವಂತೆ ತೀರ್ಮಾನಿಸಲಾಗಿದೆ ಎಂದು ಪರದಂಡ ಸುಬ್ರಮಣಿ ಅವರು ತಿಳಿಸಿದ್ದಾರೆ.