ಮಡಿಕೇರಿ, ಜು. ೨೫: ಕರ್ನಾಟಕ ಜೂನಿಯರ್ ಫುಟ್ಬಾಲ್ ತಂಡಕ್ಕೆ ವೀರಾಜಪೇಟೆಯ ಹೆಚ್.ಕೆ ಆದಿ ಆಯ್ಕೆಯಾಗಿದ್ದಾರೆ. ತಾ. ೨೭ ರಿಂದ ಆಗಸ್ಟ್ ೧೨ ರವರೆಗೆ ಛತ್ತೀಸ್‌ಗಢದಲ್ಲಿ ನಡೆಯಲಿರುವ ರಾಷ್ಟಿçÃಯ ಫುಟ್ಬಾಲ್ ಚಾಂಪಿಯನ್‌ಶಿಪ್ ‘ಬಿ.ಸಿ ರಾಯ್ ಟ್ರೋಫಿ’ ಪಂದ್ಯಾವಳಿಯಲ್ಲಿ ಕೊಡಗಿನ ಆದಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಛತ್ತೀಸ್‌ಗಢದಲ್ಲಿ ನಡೆಯಲಿರುವ ಜೂನಿಯರ್ ಅಂಡರ್ ೧೫ ರಾಷ್ಟಿçÃಯ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಕೊಡಗಿನಿಂದ ಏಕೈಕ ಆಟಗಾರ ಆದಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಡತನದಲ್ಲಿಯೇ ಬೆಳೆದು ಬಂದ ಆದಿಗೆ ತಾಯಿಯೇ ಆಸರೆ. ತಂದೆಯಿಲ್ಲದ ಕಾರಣ ತಾಯಿ ಆದಿಯನ್ನು ಕಷ್ಟದಿಂದಲೇ ಕೂಲಿ ಕೆಲಸ ಮಾಡಿ ಓದಿಸಿದ್ದರು. ೧ನೇ ತರಗತಿಯಿಂದ ೭ನೇ ತರಗತಿಯವರೆಗೆ ವೀರಾಜಪೇಟೆಯ ಪ್ರಗತಿ ಶಾಲೆಯಲ್ಲಿ ಆದಿ ಶಿಕ್ಷಣವನ್ನು ಪಡೆದಿದ್ದರು. ಆದಿಯ ಕುಟುಂಬದ ಬಡತನವನ್ನು ಕಂಡು, ಮಾಜಿ ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ, ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರಗತಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಆದಿಗೆ ಬೇಕಾದ ಎಲ್ಲಾ ಕ್ರೀಡಾ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದರು. ಬೆಂಗಳೂರಿನ ವಿದ್ಯಾನಗರದಲ್ಲಿರುವ ಕ್ರೀಡಾ ಶಾಲೆಗೆ ೮ನೇ ತರಗತಿಗೆ ಸೇರಿಸಿ ಆದಿಗೆ ಬೇಕಾದ ಎಲ್ಲಾ ರೀತಿಯ ಆರ್ಥಿಕ ನೆರವನ್ನು ಮಾದಂಡ ತಿಮ್ಮಯ್ಯ ಅವರೇ ನೀಡಿದ್ದಾರೆ.

ಮೂರು ಬಾರಿ ರಾಷ್ಟçಮಟ್ಟಕ್ಕೆ ಆಯ್ಕೆ

ಆದಿ ಮೂರು ಬಾರಿ ಅಂಡರ್ ೧೭ ರಾಷ್ಟçಮಟ್ಟದ ಫುಟ್ಬಾಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಅದಲ್ಲದೇ ಡಿವೈಇಎಸ್ ತಂಡದ ಪರವಾಗಿ ಎರಡು ಬಾರಿ ರಾಜ್ಯಮಟ್ಟದ ಫುಟ್ಬಾಲ್‌ನಲ್ಲಿ ಕೂಡ ಭಾಗವಹಿಸಿದ್ದರು. ಮಹಾರಾಷ್ಟç, ಚೆನ್ನೆöÊ ಹಾಗೂ ದೆಹಲಿಯಲ್ಲಿ ನಡೆದ ಅಂಡರ್ ೧೭ ರಾಷ್ಟçಮಟ್ಟದ ಫುಟ್ಬಾಲ್‌ನಲ್ಲಿ ಆದಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ‘ಸಿ' ಪೂಲ್‌ನಲ್ಲಿ ಕರ್ನಾಟಕ ತಂಡ

ತಾ. ೨೭ ರಂದು ಆರಂಭಗೊಳ್ಳಲಿರುವ ಜೂನಿಯರ್ ರಾಷ್ಟಿçÃಯ ಫುಟ್ಬಾಲ್ ಚಾಂಪಿಯನ್ ಶಿಫ್‌ನಲ್ಲಿ ಒಟ್ಟು ೨೨ ಆಟಗಾರರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಕೊಡಗಿನ ಏಕೈಕ ಆಟಗಾರ ಹೆಚ್.ಕೆ ಆದಿ ಆಯ್ಕೆಯಾಗಿರುವುದು ವಿಶೇಷ. ಕರ್ನಾಟಕ ತಂಡವು ‘ಸಿ’ ಪೂಲ್‌ನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯವು ತಾ. ೨೮ ರಂದು ಪಂಜಾಬ್, ತಾ. ೩೦ ರಂದು ಚಂಡೀಗಢ ಹಾಗೂ ಆಗಸ್ಟ್ ೧ ರಂದು ಮೇಘಾಲಯ ತಂಡದ ವಿರುದ್ಧ ಆಡಲಿದೆ.