ಮಡಿಕೇರಿ, ಜು. ೨೫: ಕೊಡಗು ಜಿಲ್ಲೆ ಪ್ರಸ್ತುತ ಮುಂಗಾರಿನ ಪರ್ವ ಕಾಲದಲ್ಲಿದ್ದು ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳನ್ನು ನೆನಪಿಸುವ ರೀತಿಯಲ್ಲಿ ಅಬ್ಬರದ ಮಳೆಯಾಗುತ್ತಿದೆ. ಧಾರಾಕಾರ ಮಳೆಯೊಂದಿಗೆ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಜಿಲ್ಲೆಯಲ್ಲಿ ಸರಾಸರಿ ಸುಮಾರು ೪೦ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಪುನರ್ವಸು ಬಳಿಕ ಇದೀಗ ಪುಷ್ಯ ಮಳೆಯೂ ರಭಸ ತೋರುತ್ತಿದೆ. ದಕ್ಷಿಣ ಕೊಡಗಿನ ಕುಟ್ಟ, ಬಿರುನಾಣಿ, ಶ್ರೀಮಂಗಲ ಗ್ರಾ.ಪಂ., ವ್ಯಾಪ್ತಿಯ ಗ್ರಾಮಗಳು, ಬಿ.ಶೆಟ್ಟಿಗೇರಿ, ಗ್ರಾ.ಪಂ., ನಾಪೋಕ್ಲು ವಿಭಾಗ, ಭಾಗಮಂಡಲ, ಸೋಮವಾರಪೇಟೆ, ಶಾಂತಳ್ಳಿ ವಿಭಾಗ, ಸೂರ್ಲಬ್ಬಿ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ

(ಮೊದಲ ಪುಟದಿಂದ) ಮಳೆಯ ಅಬ್ಬರ ಇತರೆಡೆಗಳಿಗಿಂತ ಹೆಚ್ಚಾಗಿದೆ. ಈಗಾಗಲೇ ಜಿಲ್ಲೆಯ ಹಲವೆಡೆಗಳಲ್ಲಿ ೧೦೦ ಇಂಚುಗಳಿಗೂ ಅಧಿಕ ಮಳೆ ದಾಖಲಾಗಿದೆ. ಬಿರುನಾಣಿ, ಪರಕಟಗೇರಿ, ತೆರಾಲು ವಿಭಾಗದಲ್ಲಿ ೧೦೦ ರಿಂದ ೧೧೦ ಇಂಚು, ತಲಕಾವೇರಿ, ಭಾಗಮಂಡಲ, ಶಾಂತಳ್ಳಿ, ಕೊತ್ತನಹಳ್ಳಿ, ಸೂರ್ಲಬ್ಬಿ, ತೋಳೂರುಶೆಟ್ಟಳ್ಳಿ, ಕುಡಿಗಾಣ, ಗರ್ವಾಲೆ, ಶಿರಂಗಳ್ಳಿ, ಬೆಂಕಳ್ಳಿ, ಮುಟ್ಲು, ಕುಂದಳ್ಳಿ ವಿಭಾಗಳಲ್ಲಿ ೧೦೦ ರಿಂದ ೧೧೦ ಇಂಚುಗಳಷ್ಟು ಮಳೆಯಾಗಿದೆ. ಪ್ರಸ್ತುತ ಜುಲೈ ವಾರಾಂತ್ಯದಲ್ಲಿದ್ದು, ಇನ್ನು ಹಲವು ಸಮಯ ಮಳೆಗಾಲ ಮುಂದುವರಿಯಲಿದ್ದು, ಈ ಬಾರಿ ದಾಖಲೆಯ ಮಳೆಯಾಗುವ ಸಾಧ್ಯತೆಯಿದೆ.

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಯ ತೀವ್ರತೆಯಿಂದಾಗಿ ಹಲವಷ್ಟು ಹಾನಿಗಳು ಉಂಟಾಗುತ್ತಿವೆ. ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಇನ್ನೂ ಸರಿಯಾಗಿಲ್ಲ. ಈಗಲೂ ಹಾನಿ ಸಂಭವಿಸುತ್ತಿರುವುದು ಮತ್ತಷ್ಟು ಸಮಸ್ಯೆಯಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೨.೫೩ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೧೬, ವೀರಾಜಪೇಟೆ ೧.೭೮, ಪೊನ್ನಂಪೇಟೆ ೨.೮೭, ಸೋಮವಾರಪೇಟೆ ೫.೨೦, ಕುಶಾಲನಗರ ತಾಲೂಕಿನಲ್ಲಿ ೦.೬೧ ಇಂಚು ಮಳೆಯಾಗಿದೆ.

ಹೋಬಳಿವಾರು ವಿವರ

ಕಳದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ೮.೬೪, ಭಾಗಮಂಡಲ ಹೋಬಳಿಯಲ್ಲಿ ೪.೨೫ ಇಂಚು ಮಳೆಯಾಗಿದೆ. ಮಡಿಕೇರಿ ೧, ನಾಪೋಕ್ಲು ೨.೭೬, ಸಂಪಾಜೆ ೦.೮೦, ವೀರಾಜಪೇಟೆ ೧.೭೨, ಅಮ್ಮತ್ತಿ ೧.೮೪, ಹುದಿಕೇರಿ ೪.೯೨, ಶ್ರೀಮಂಗಲ ೩.೮೦, ಪೊನ್ನಂಪೇಟೆ ೧.೮೦, ಬಾಳೆಲೆ ೧.೧೦, ಸೋಮವಾರಪೇಟೆ ೪.೪೦, ಶನಿವಾರಸಂತೆ ೩.೪೪, ಕೊಡ್ಲಿಪೇಟೆ ೪.೧೨, ಸುಂಟಿಕೊಪ್ಪ ೧.೧೦ ಇಂಚು ಮಳೆಯಾಗಿದೆ.ಕರಿಕೆ, ಜು. ೨೫: ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಅಪಾರ ಪ್ರಮಾಣದ ಕೃಷಿ ನಷ್ಟವಾಗಿ ಹಲವಾರು ವಿದ್ಯುತ್ ಕಂಬಗಳು ಉರುಳಿ ಬಿದ್ದ ಘಟನೆ ನಡೆದಿದೆ. ನಾಲ್ಕು ದಿನಗಳಿಂದ ಕ್ಷೀಣಗೊಂಡ ಪುಷ್ಯ ಮಳೆಯು ಮಂಗಳವಾರದಿAದ ಬಿರುಸುಗೊಂಡು ಬಿರುಗಾಳಿ ಸಹಿತವಾದ ಮಳೆಯಾಗುತ್ತಿದ್ದು, ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅಡಿಕೆ, ಗೇರು, ಬಾಳೆ, ರಬ್ಬರ್ ಬೆಳೆಗಳು ಮರ ಉರುಳಿ ಬಿದ್ದ ಪರಿಣಾಮ ನಾಶವಾಗಿವೆ.

ಅಂತರರಾಜ್ಯ ಹೆದ್ದಾರಿ ಬಂದ್: ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿಯ ಕರಿಕೆಯ ತಿರುವು ಬಳಿ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿದ ಪರಿಣಾಮ ತಡರಾತ್ರಿಯಿಂದ ರಸ್ತೆ ಸಂಚಾರ ಬಂದ್ ಆಗಿ ವಾಹನ ಸವಾರರು ರಸ್ತೆಯಲ್ಲಿ ಹಾಗೂ ಸಮೀಪದ ಅರಣ್ಯ ಇಲಾಖೆಯ ಶಿಬಿರದಲ್ಲಿ ಆಶ್ರಯ ಪಡೆಯುವಂತಾಯಿತು. ನಂತರ ಭಾಗಮಂಡಲ ಪ್ರಾದೇಶಿಕ ವಲಯದ ಕರಿಕೆ ಉಪ ವಲಯಾರಣ್ಯಾಧಿಕಾರಿ ಸಚಿನ್ ಬಿರಾದಾರ ಹಾಗೂ ಸಿಬ್ಬಂದಿ ಯಂತ್ರದ ಸಹಾಯದಿಂದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಡಿಕೇರಿ, ಜು. ೨೫: ಮಾದಾಪುರ ಪಂಚಾಯತ್ ಜಂಬೂರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮನೆಗಳಿಗೆ ಗ್ರಾಮೀಣ ಕುಡಿಯುವ ನೀರು ಇಲಾಖೆ ವತಿಯಿಂದ ೨ ಟ್ಯಾಂಕರ್ ಕುಡಿಯುವ ನೀರನ್ನು ಒದಗಿಸಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತೆAದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡಿಗೆ, ಜು. ೨೫: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಾದಂತೆ ಒಳ ನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟದ ಅಧಾರದ ಮೇಲೆ ನದಿಗೆ ೧೨ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದರೆ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ವೃತ್ತ ಅಧೀಕ್ಷಕ ಅಭಿಯಂತರರ ಸೂಚನೆಯಂತೆ ಒಳಹರಿವಿನ ಮಟ್ಟದ ಆಧಾರದ ಮೇಲೆ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.ಕರಿಕೆ, ಜು. ೨೫: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಹಳೆಮನೆ ಬಳಿ ಗಾಳಿ ಮಳೆಗೆ ಮರ ಉರುಳಿ ಬಿದ್ದ ಪರಿಣಾಮ ವಾಸದ ಮನೆಗೆ ಹಾನಿಯಾದ ಘಟನೆ ವರದಿಯಾಗಿದೆ.

ಅಲ್ಲಿನ ನಿವಾಸಿ ಜಾರ್ಜ್ ಕುಟ್ಟಿ ಎಂಬವರ ಮನೆಗೆ ಹಲಸಿನ ಮರವೊಂದು ಉರುಳಿ ಬಿದ್ದ ಪರಿಣಾಮ ಛಾವಣಿಯ ಸಿಮೆಂಟ್ ಶೀಟ್‌ಗಳು, ಕಂಬಗಳು ತುಂಡಾಗಿ ನಷ್ಟ ಉಂಟಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಕುಂಡತ್ತಿಕಾನದ ಕೆ.ಎಸ್. ಗಂಗಾಧರ್ ಎಂಬವರ ಮನೆಯ ಮೇಲೆ ಅಡಿಕೆ ಮರ ತುಂಡಾಗಿ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.ಸುಂಟಿಕೊಪ್ಪ, ೨೫: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿ ಹಾನಿಯಾಗಿದ್ದು, ವಿದ್ಯುತ್ ಕಂಬ, ತಂತಿಗಳು ನೆಲಕ್ಕುರುಳಿ ಇದರಿಂದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದೆ. ಈಗಾಗಲೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಧಿಕ ಮಳೆÀಯಾಗುತ್ತಿದ್ದು ನಾಕೂರು ಕೆದಕಲ್ ಭಾಗದಲ್ಲಿ ಗಾಳಿ ಮಳೆಗೆ ೮ ಕಂಬಗಳು ನೆಲಕಚ್ಚಿವೆ. ಸುಂಟಿಕೊಪ್ಪದಲ್ಲಿ ಟಿಸಿ ಮೇಲೆ ಮರ ಬಿದ್ದು ಟ್ರಾನ್ಸ್ಫಾರ್ಮರ್ ಹಾಳಾಗಿದ್ದು ಇಲಾಖೆಗೆ ಸುಮಾರು ೫ ಲಕ್ಷದಷ್ಟು ನಷ್ಟವಾಗಿದೆ ಎಂದು ಸುಂಟಿಕೊಪ್ಪ ಸೆಸ್ಕ್ ಅಭಿಯಂತರ ಲವಕುಮಾರ್ ಮಾಹಿತಿ ನೀಡಿದ್ದಾರೆ. ವಿದ್ಯುತ್ ಇಲ್ಲದ ಪರಿಣಾಮ ನೀರಿಲ್ಲದೆ ಕೆÀಲವು ಗ್ರಾಮೀಣದ ಪ್ರದೇಶ ಜನರು ಪರದಾಡುವಂತಾಗಿದೆ. ಶಾಂತಿಗೇರಿ ತೋಟದಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಬಿ.ಕೆ. ಶಶಿಕುಮಾರ್, ಸಂಜೀವ, ಗುರು, ವಿಶ್ವನಾಥ ರೈ, ಮೋಹನ್ ದಾಸ್ ಅವರ ಮನೆ ಸರ್ವಿಸ್ ವಯರ್ ತುಂಡಾಗಿ ಕಳೆದ ಒಂದು ವಾರದಿಂದ ವಿದ್ಯುತ್ ವ್ಯತ್ಯಯವುಂಟಾಗಿದೆ. ಸೆಸ್ಕ್ ಇಲಾಖೆ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸ ಪಡುತ್ತಿದ್ದು, ಅತಿಯಾದ ಗಾಳಿಯಿಂದ ತೊಡಕುಂಟಾಗಿದೆ. ಮಡಿಕೇರಿ, ಜು. ೨೫: ಹೆಚ್ಚಿನ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ. ಈ ಸಂಬAಧ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯಿ ಅವರು ಇಂದು ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಮಾದಾಪುರ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಆಲಿಸಿದರು. ಕೂಡಿಗೆ, ಜು. ೨೫: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಾದಂತೆ ಒಳ ನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟದ ಅಧಾರದ ಮೇಲೆ ನದಿಗೆ ೧೨ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದರೆ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ವೃತ್ತ ಅಧೀಕ್ಷಕ ಅಭಿಯಂತರರ ಸೂಚನೆಯಂತೆ ಒಳಹರಿವಿನ ಮಟ್ಟದ ಆಧಾರದ ಮೇಲೆ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.ಕರಿಕೆ, ಜು. ೨೫: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಹಳೆಮನೆ ಬಳಿ ಗಾಳಿ ಮಳೆಗೆ ಮರ ಉರುಳಿ ಬಿದ್ದ ಪರಿಣಾಮ ವಾಸದ ಮನೆಗೆ ಹಾನಿಯಾದ ಘಟನೆ ವರದಿಯಾಗಿದೆ.

ಅಲ್ಲಿನ ನಿವಾಸಿ ಜಾರ್ಜ್ ಕುಟ್ಟಿ ಎಂಬವರ ಮನೆಗೆ ಹಲಸಿನ ಮರವೊಂದು ಉರುಳಿ ಬಿದ್ದ ಪರಿಣಾಮ ಛಾವಣಿಯ ಸಿಮೆಂಟ್ ಶೀಟ್‌ಗಳು, ಕಂಬಗಳು ತುಂಡಾಗಿ ನಷ್ಟ ಉಂಟಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಕುಂಡತ್ತಿಕಾನದ ಕೆ.ಎಸ್. ಗಂಗಾಧರ್ ಎಂಬವರ ಮನೆಯ ಮೇಲೆ ಅಡಿಕೆ ಮರ ತುಂಡಾಗಿ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.