ಮಡಿಕೇರಿ, ಜು. ೨೫: ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿಯಿಂದ ಆಗಿರುವ ಹಾಗೂ ಆಗುತ್ತಿರುವ ಹಾನಿಯ ಕುರಿತಾಗಿ ವಿಧಾನಪರಿಷತ್‌ನಲ್ಲಿ ಕೊಡಗಿನ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಪ್ರಸ್ತಾಪಿಸಿ ಸೂಕ್ತ ಪರಿಹಾರ ಹಾಗೂ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಶೂನ್ಯವೇಳೆಯಲ್ಲಿ ಜಿಲ್ಲೆಯಲ್ಲಿನ ಪ್ರಸಕ್ತದ ಸನ್ನಿವೇಶದ ಬಗ್ಗೆ ‘ಶಕ್ತಿ’ಯಲ್ಲಿ ಪ್ರÀಕಟವಾಗಿರುವ ವರದಿಯನ್ನು ವಿವರವಾಗಿ ಪ್ರಸ್ತಾಪಿಸಿದ ಅವರು ಈ ಬಗ್ಗೆ ಬೆಳಕು ಚೆಲ್ಲಿದರು.

‘ವರುಣಾರ್ಭಟಕ್ಕೆ ನಲುಗಿದ ಜಿಲ್ಲೆ - ರೂ. ೩೫ ಕೋಟಿಗೂ ಅಧಿಕ ನಷ್ಟ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟವಾಗಿತ್ತು. ಜಿಲ್ಲೆಯಲ್ಲಿ ಮಳೆಗಾಲ ಬಂತೆAದರೆ ಆತಂಕ ಮನೆ ಮಾಡುತ್ತದೆ. ಅನಾಹುತಗಳ ಕರಿನೆರಳಿನಲ್ಲಿ ದಿನದೂಡುವ ಸ್ಥಿತಿ ಎದುರಾಗುತ್ತದೆ. ಈ ಬಾರಿಯೂ ಮಳೆ ಜಿಲ್ಲೆಯಲ್ಲಿ ಬಿರುಸು ಪಡೆದುಕೊಂಡಿದ್ದು, ವರುಣಾರ್ಭಟ ಜೋರಾಗಿದೆ. ನದಿ, ಹಳ್ಳ-ಕೊಳ್ಳ, ಜಲಪಾತ, ಜಲಾಶಯಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಹದ ಭಯವೂ ಸೃಷ್ಟಿಯಾಗುತ್ತಿದೆ. ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗುತ್ತಿದ್ದು, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅನೇಕ ಕಡೆಗಳಲ್ಲಿ ಬೆಳೆನಾಶ, ಕೊಳೆರೋಗ, ಕಾಫಿ ಉದುರುವಿಕೆ ಉಂಟಾಗಿರುತ್ತದೆ. ನದಿ ಅಂಚಿನ ಗ್ರಾಮಗಳಲ್ಲಿ ಪ್ರವಾಹದ ಭಯ ಅವರಿಸಿದ್ದರೆ, ಬರೆ ಪ್ರದೇಶದಲ್ಲಿರುವ ನಿವಾಸಿಗಳಿಗೆ ಗುಡ್ಡ ಕುಸಿತದ ಆತಂಕ ಉಂಟಾಗಿದೆ. ಭಾರಿ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರತಿಕೂಲ ಹವಾಮಾನದಿಂದ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಜೀವನ ದೂಡಬೇಕಾಗಿದೆ. ಜೂನ್ ೧ ರಿಂದ ಜುಲೈ ೧೮ ರ ತನಕ ಜಿಲ್ಲೆಯಲ್ಲಿ ರೂ. ೩೫ ಕೋಟಿಗೂ ಅಧಿಕ ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ಜಿಲ್ಲಾಡಳಿತ ತಿಳಿಸಿದೆ. ಒಂದು ಕಡೆ ಭೂ ಕುಸಿತ. ೫ ಕಡೆ ಅಲ್ಪಪ್ರಮಾಣದ ಬರೆ ಜರಿತ ಘಟನೆಗಳು ವರದಿಯಾಗಿರುತ್ತದೆ. ಮೈಸೂರು-ಮಾಣಿ ರಾಷ್ಟಿçÃಯ ಹೆದ್ದಾರಿ ೨೭೫ ನಡುವಿನ ಕರ್ತೋಜಿ ಬಳಿ ಬರೆ ಜರಿದು ರಸ್ತೆ ಹಾನಿಗೀಡಾಗಿದೆ. ಹಲವು ಗ್ರಾಮೀಣ

(ಮೊದಲ ಪುಟದಿಂದ) ಭಾಗದ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಸಂಚಾರ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಮತ್ತು ಚೆಸ್ಕಾಂ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಗೆ ಈ ಬಾರಿ ಅಧಿಕ ಮಳೆಯಾಗಿದೆ ಎಂದು ಸುಜಾ ಗಮನ ಸೆಳೆದರು.

ಪ್ರತಿ ಬಾರಿಯೂ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗುತ್ತಿದ್ದು ಆಗಿರುವ ನಷ್ಟಗಳನ್ನು ಭರಿಸಲು ಕೂಡಲೇ ಇಲಾಖೆಯು ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುತ್ತದೆ. ಈ ಬಾರಿ ಮಳೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವ ನಿರೀಕ್ಷೆಗಳಿದ್ದು ಈಗಾಗಲೇ ಆಗಿರುವ ನಷ್ಟವನ್ನು ಭರಿಸಲು ಬೆಳೆನಾಶ ಮತ್ತು ಕೊಳೆರೋಗದ ಕುರಿತು ಸಮೀಕ್ಷೆ ನಡೆಸಿ ಬೆಳೆಗಾರರಿಗೆ ಮತ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಕಂದಾಯ ಸಚಿವರ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಜಿಲ್ಲೆಯಲ್ಲಿ ಈ ಬಾಗಿ ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಬೆಳೆ ನಷ್ಟ ಪರಿಹಾರ, ರಸ್ತೆ ಸಮಸ್ಯೆ ವಿದ್ಯುತ್ ಸಮಸ್ಯೆ ಬಗ್ಗೆ ವಿಶೇಷ ಗಮನ ಹರಿಸಲು ಸೂಚಿಸಲಾಗಿದೆ. ಈ ಬಗ್ಗೆ ಸರಕಾರವೂ ಗಮನ ಹರಿಸಲಿದ್ದು, ಮುಖ್ಯಮಂತ್ರಿಗಳೂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಗಮನ ಹರಿಸಲಿರುವುದಾಗಿ ಉತ್ತರಿಸಿದರು.