ಸುಂಟಿಕೊಪ್ಪ, ಜು. ೨೫: ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಫಸಲುಭರಿತ ಬೆಳೆಗಳನ್ನು ತಿಂದು ತುಳಿದು ನಾಶ ಪಡಿಸುತ್ತಿವೆ.

೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು- ಉಪ್ಪುತೋಡು ನಿವಾಸಿ ಜೈ ಜವಾನ್ ಜೈ ಕಿಸಾನ್ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವನ್ ಎಂಬವರ ತೋಟಕ್ಕೆ ಕಳೆದ ಮೂರು ದಿನಗಳಿಂದ ಕಾಡಾನೆಯೊಂದು ತೆಂಗಿನ ಮರಗಳನ್ನು, ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿದೆ.

ಸಮೀಪದ ಕಾನ್‌ಬೈಲ್ ಬೈಚನಹಳ್ಳಿಯ ನೆಟ್ಲಿ 'ಬಿ' ತೋಟದಲ್ಲಿ ಹಗಲು ವೇಳೆಯಲ್ಲಿ ಕಾಫಿ ಗಿಡದ ನಡುವೆ ನಿಂತಿದ್ದು, ಕಾರ್ಮಿಕರೊಬ್ಬರು ನೋಡಿದ್ದಾರೆ.

ಸಮೀಪದ ಕೆಳಪನ್ಯ ತೋಟದಲ್ಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ವಿಷಯವರಿತ ತೋಟದ ಮಾಲೀಕರು ಕೆಲಸದಿಂದ ವಾಪಸಾಗುವಂತೆ ಕಾರ್ಮಿಕರಿಗೆ ತಿಳಿಸಿದ ಕೂಡಲೇ ಕಾರ್ಮಿಕರು ಅಲ್ಲಿಂದ ಮನೆಯತ್ತ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಸುAಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಮತ್ತು ದಾಂಧಲೆ ಮಿತಿಮೀರಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.