೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಕಾಲು ಕೆರೆದುಕೊಂಡು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನಕ್ಕೆ ತಕ್ಕಶಾಸ್ತಿಯೊಂದಿಗೆ ಈ ದಿನವನ್ನು ಇಡೀ ಭಾರತದ ಜನಕೋಟಿ ವಿಜಯ ದಿನವಾಗಿ ಆಚರಣೆ ಮಾಡುವಂತೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರೆ ನೀಡಿದರು. ಆದರೆ ಇದು ಕೇವಲ ಇತರ ಆಚರಣೆಗಳಂತೆ ಆಗಿರುವುದಿಲ್ಲ.

ಇತಿಹಾಸದ ನೆನಪು.....

ಅಟಲ್ ಜೀ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರ ಭೇಟಿಯಾಗಿ ಆ ದಿನಗಳಲ್ಲಿ ಆತ್ಮಸ್ಥೆöÊರ್ಯವನ್ನು ತುಂಬಿದ್ದರು. ಈ ವೇಳೆ ಗಾಯಾಳು ಯೋಧನೊಬ್ಬ ಅಟಲ್ ಜೀ ಬಳಿ ಹೇಳಿದ್ದರು. "ಅಟಲ್ ಜೀ ನೀವು ದೇಶದ ಜನತೆಗೆ ತಿಳಿಸಿ... ಇಲ್ಲಿ ಗಾಯಗೊಂಡಿರುವ ಯಾವೊಬ್ಬ ಸೈನಿಕರ ಬೆನ್ನಿಗೆ ಶತ್ರುಗಳ ಗುಂಡೇಟಿನಿAದ ಗಾಯವಾಗಿಲ್ಲ... ಬದಲಾಗಿ ಎದೆ ಮುಖ ಹಣೆಗೆ ಘಾಸಿಯಾಗಿದೆ.." ಆ ಮಾತು ಭಾವನಾತ್ಮಕ ಜೀವ ಕವಿ ಮನದ ಅಟಲ್ ಜೀ ಅವರಿಗೆ ತುಂಬಾ ಪರಿಣಾಮ ಬೀರುತ್ತದೆ. ತಾವು ಕಾರ್ಗಿಲ್ ಯುದ್ಧ ಭೂಮಿಯಿಂದ ಮರಳಿದ ಅವರು ಬೃಹತ್ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಲಕ್ನೋದಲ್ಲಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಭಾರತದ ಜನಕೋಟಿಗೆ ಕರೆ ನೀಡಿ ಭವಿಷ್ಯದಲ್ಲಿ ಯುವ ಜನಾಂಗ ಕಾರ್ಗಿಲ್ ಯುದ್ಧವನ್ನು ನೆನಪು ಇಡಬೇಕು... ೫೦೦ಕ್ಕೂ ಆಧಿಕ ನಮ್ಮ ಯೋಧರ ಬಲಿದಾನ ವ್ಯರ್ಥ ಆಗಬಾರದು. ಆ ಕುಟುಂಬಗಳ ಆತ್ಮ ವಿಶ್ವಾಸ ಕುಂದಬಾರದು... ಭಾರತಾಂಭೆಯ ಗಡಿ ಗುಡಿಗಳ ರಕ್ಷಣಾ ಸಾಮರ್ಥ್ಯವನ್ನು ತಮ್ಮ ಪರಾಕ್ರಮದ ಜೊತೆಗೆ ಪ್ರಾಣಾರ್ಪಣೆಯಿಂದ ಹೆಚ್ಚಿಸುವ ಸೈನಿಕರ ಮಾನಸೀಕತೆ ಕುಗ್ಗದಂತೆ ನಿರಂತರವಾಗಿ ಜನ ಬೆಂಬಲ ವ್ಯಕ್ತಪಡಿಸಬೇಕು ಎಂದು ಅವರು ಸಾರಿದರು. ಅಂದಿನಿAದ ಜುಲೈ ೨೬ ರಂದು ಈ ಮೂಲಕ ಭಾರತದ ವೀರ ಯೋಧರ ಸಂಸ್ಮರಣೆ ನಿರಂತರವಾಗಿ ನಡೆಯುತ್ತಿದೆ. ಯುವ ಪೀಳಿಗೆಗೆ ಇದು ಸ್ಫೂರ್ತಿಯ ಅಜೇಯ ದಿನವಾಗಿದೆ.

-ಚಿ.ನಾ. ಸೋಮೇಶ್