ಮೈಸೂರು, ಜು. ೨೫: ಚೀನಾದ ಚೆಂಗ್ಡುನಲ್ಲಿ ಆಗಸ್ಟ್ ೨೦ ರಿಂದ ೨೫ ರವರೆಗೆ ನಡೆಯಲಿರುವ ೧೭ ಮತ್ತು ೧೫ ವರ್ಷದೊಳಗಿನ ಏಷ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೨೪ಕ್ಕೆ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ.

ಬಾಲಕಿಯರ ಡಬಲ್ಸ್ ೧೭ ವರ್ಷದೊಳಗಿನ ವಿಭಾಗದಲ್ಲಿ ದಿಯಾ ಅವರೊಂದಿಗೆ ಹರಿಯಾಣದ ಬರುಣಿ ಪಾರ್ಶ್ವಾಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೊಡಗು ಜಿಲ್ಲೆಯವರಾದ ದಿಯಾ, ಮೈಸೂರು ಸ್ಪೋರ್ಟ್ಸ್ ಪಾರ್ಕ್ನಲ್ಲಿ ಅರುಣ್ ಪೆಮ್ಮಯ್ಯ ಮತ್ತು ಬಿ.ಪಿ.ಭೀಮಯ್ಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ದಿಯಾ ಅವರು ಮಡಿಕೇರಿಯ ದೇಚೂರಿನ ನಿವಾಸಿ ಆಗಿದ್ದ ಬೊಪ್ಪಂಡ ಭೀಮಯ್ಯ ಹಾಗೂ ಕುಸುಮಾ (ತಾಮನೆ ಕಂಬೀರAಡ) ಅವರ ಪುತ್ರಿ.

-ಕೋವರ್ ಕೊಲ್ಲಿ ಇಂದ್ರೇಶ್