ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜು. ೨೫: ಕೊಡಗು ಎಂಬ ಪ್ರದೇಶ ಕೃಷಿ ಚಟುವಟಿಕೆಯ ಮೂಲಕವೇ ವಿಜೃಂಭಿಸುತ್ತಿತ್ತು ಎಂಬುದು ಇದೀಗ ಇತಿಹಾಸ ಎಂಬAತಾಗುತ್ತಿದೆ. ಪುರಾತನ ಕಾಲದಿಂದಲೂ ಇಲ್ಲಿ ಇದ್ದದ್ದು ಪ್ರಮುಖವಾಗಿ ಭತ್ತದ ಕೃಷಿ. ಹಬ್ಬ ಹರಿದಿನಗಳೂ ಕೃಷಿಗೆ ಪೂರಕವಾದದ್ದು. ಮುಂಗಾರು ಆರಂಭಗೊAಡಿತೆAದರೆ ಎಲ್ಲೆಲ್ಲೂ ಕೃಷಿ ಚಟುವಟಿಕೆಗಳದ್ದೆ ಕಾರುಬಾರು. ವಾಡಿಕೆಯಂತೆ ಮುಂಗಾರು ಜೂನ್ ಆರಂಭದಿAದಲೇ ಅಡಿಯಿಡುತ್ತಿತ್ತು. ಈ ಸಂದರ್ಭದಿAದ ಆರಂಭಗೊAಡರೆ ಕೈಲುಮುಹೂರ್ತ ಹಬ್ಬದ ತನಕವೂ ಕೃಷಿಗೆ ಸಂಬAಧಿತ ಕೆಲಸ ಕಾರ್ಯಗಳಲ್ಲಿ ರೈತರು ತೊಡಗಿಸಿಕೊಳ್ಳುತ್ತಿದ್ದರು. ಕೊಟ್ಟಿಗೆ ತುಂಬ ದನ-ಕರುಗಳಿರುತ್ತಿದ್ದವು. ಮುಂಗಾರಿನ ನಡುವೆ ಶಾಲೆಗಳಿಗೂ ಮಳೆಗಾಲದ ರಜೆ ಇರುತ್ತಿತ್ತು. ಮಕ್ಕಳೂ ಕೃಷಿ ಕೆಲಸವನ್ನು ಈ ಸಂದರ್ಭ ಹಿರಿಯರೊಂದಿಗೆ ಸೇರಿ ಕಲಿತುಕೊಳ್ಳುತ್ತಿದ್ದರು.

ಆದರೆ, ಇವೆಲ್ಲವೂ ಈಗ ಮರೆಯಾಗುತ್ತಾ ಬರುತ್ತಿದೆ. ದನಕರುಗಳ ಬದಲಾಗಿ ಯಂತ್ರೋಪಕರಣಗಳು ಬಂದಿವೆ. ಆಧುನಿಕ ತಂತ್ರಜ್ಞಾನವೂ ನೆರವಾಗುತ್ತಿದೆ. ಸಾಂಪ್ರದಾಯಿಕವಾಗಿದ್ದ ಭತ್ತದ ಕೃಷಿಯತ್ತ ಜನರ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದಕರ. ಬಹುತೇಕ ಗದ್ದೆಗಳು ಪಾಳುಬೀಳುತ್ತಿವೆ. ಹಲವಷ್ಟು ಪ್ರದೇಶ ತೋಟಗಳಾಗಿ, ಬಡಾವಣೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕೃಷಿಯತ್ತ ರೈತರು ಆಸಕ್ತಿ ಕಳೆದುಕೊಳ್ಳುತ್ತಿರುವುದರ ಹಿಂದೆ ಕಾರಣಗಳೂ ಸಾಕಷ್ಟಿವೆ.

ಸೂಕ್ತ ಪ್ರೋತ್ಸಾಹ ಸಿಗದಿರುವುದು, ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆ, ಲಾಭಕ್ಕಿಂತ ನಷ್ಟವೇ ಅಧಿಕ ಎಂಬ ಅನುಭವ. ಸರಕಾರಗಳಿಂದ ಬೆಂಬಲ ಬೆಲೆ ಮತ್ತಿತರ ಪೂರಕ ಯೋಜನೆಗಳು ಇಲ್ಲದಿರುವುದು. ಈ ರೀತಿಯಾಗಿ ನಾನಾ ಕಾರಣಗಳನ್ನು ನೋಡಬಹುದಾಗಿದೆ.

ಆತಂಕಕಾರಿ ಅಂಕಿ ಅಂಶ

ಇತ್ತೀಚಿನ ಕೆಲವು ವರ್ಷಗಳಿಂದ ಅಂದರೆ, ೨೦೧೮-೧೯ನೇ ಸಾಲಿನಿಂದ ಅವಲೋಕಿಸಿದರೆ ವರ್ಷಂಪ್ರತಿ ಭತ್ತದ ಕೃಷಿಯ ಪ್ರಮಾಣ ಇಳಿಮುಖಗೊಳ್ಳುತ್ತ ಬರುತ್ತಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ೨೦೨೨-೨೩ರ ತನಕವೂ ವಾರ್ಷಿಕವಾಗಿ ೩೦,೫೦೦ ಹೆಕ್ಟೇರ್ ಗುರಿ ಹೊಂದಲಾಗುತಿತ್ತು. ಆದರೆ, ಸಾಧನೆ ೨೦೧೮-೧೯ರಲ್ಲಿ ೧೩,೯೦೦ ಹೆಕ್ಟೇರ್ (ಶೇ ೪೫.೫೭),

(ಮೊದಲ ಪುಟದಿಂದ) ೨೦೧೯-೨೦ರಲ್ಲಿ ೨೨,೧೨೨ ಹೆಕ್ಟೇರ್ (ಶೇ ೭೨.೫೩), ೨೦೨೦-೨೧ರಲ್ಲಿ ೨೩,೭೩೭ ಹೆಕ್ಟೇರ್ (ಶೇ ೭೭.೮೩), ೨೦೨೧-೨೨ರಲ್ಲಿ ೨೩,೬೩೭ ಹೆಕ್ಟೇರ್ (ಶೇ ೭೭.೫೦), ೨೦೨೨-೨೩ರಲ್ಲಿ ೨೩,೧೮೦ ಹೆಕ್ಟೇರ್ (ಶೇ ೭೬), ೨೦೨೩-೨೪ರಲ್ಲಿ ೧೯,೧೫೨ ಹೆಕ್ಟೇರ್ (ಶೇ ೬೬.೯೪) ಈ ರೀತಿಯಾಗಿ ಕಂಡುಬರುತ್ತಿದೆ. ಇದು ನಿಖರ ಅಂಕಿ ಅಂಶ ಎನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯೂ ಜಿಲ್ಲೆಯಲ್ಲಿನ ಈಗಿನ ಸನ್ನಿವೇಶಗಳನ್ನು ಅವಲೋಕಿಸಿದರೆ ಅರಿವಿಗೆ ಬರುತ್ತದೆ. ವಾಸ್ತವವಾಗಿ ಬಹುತೇಕ ಭತ್ತ ಬೆಳೆಯುವ ಪ್ರದೇಶಗಳೇ ಮರೆಯಾಗುತ್ತಿವೆ. ಎಲ್ಲೆಲ್ಲೂ ಮನೆ-ಕಟ್ಟಡಗಳು, ಕಾಫಿ ತೋಟ, ಅಡಿಕೆ, ತಾಳೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿರುವ ದೃಶ್ಯಗಳೇ ಕಂಡು ಬರುತ್ತವೆ.

೨೦೨೪-೨೫ಕ್ಕೆ ಇಲಾಖೆಯ ಇಲಾಖೆಯ ಗುರಿಯೇ ೨೯ ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಇನ್ನು ಸಾಧನೆ ಎಷ್ಟೆಂಬುದನ್ನು ಕಾದು ನೋಡಬೇಕಾಗಿದೆ.

ಹಿನ್ನಡೆಗೆ ಹಲವು ಕಾರಣಗಳು

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ಪಾಳು ಬೀಳುತ್ತಿವೆ. ಗ್ರಾಮೀಣ ಸೊಗಡಿನೊಂದಿಗೆ ನಡೆಯುತ್ತಿದ್ದ ನಾಟಿ ಕಾರ್ಯದಿಂದ ರೈತರು ದೂರವಾಗುತ್ತಿದ್ದಾರೆ, ಪೈರು ತುಂಬಿ ನಳನಳಿಸುತ್ತಿದ್ದ ಭೂಮಿ ಬೇರೆ ಉದ್ದೇಶಕ್ಕೆ ಪರಿವರ್ತನೆಗೊಳ್ಳುತ್ತಿದೆ. ಸೂಕ್ತ ಬೆಲೆ ಇಲ್ಲದೆ ಆರ್ಥಿಕ ಹೊಡೆತ ಅನುಭವಿಸುತ್ತಿದ್ದ ಅನ್ನದಾತÀನಿಗೆ ವನ್ಯಜೀವಿಯ ಉಪಟಳ, ಕಾರ್ಮಿಕರ ಕೊರತೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.

ಒಂದು ಕಾಲದಲ್ಲಿ ಕೊಡಗು ಜಿಲ್ಲೆ ಭತ್ತದ ಭಂಡಾರವಾಗಿತ್ತು. ಇಲ್ಲಿನ ತಳಿಗಳು ಮಾನ್ಯತೆ ಗಳಿಸಿಕೊಂಡಿದ್ದವು. ಮಾರಾಟದೊಂದಿಗೆ ಸ್ವಂತ ಬಳಕೆಗೂ ತಾವು ಬೆಳೆದ ಭತ್ತವನ್ನೇ ಇಲ್ಲಿನ ರೈತರು ಅವಲಂಭಿಸುತ್ತಿದ್ದರು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ಕರಿಮೆಣಸಿನೊಂದಿಗೆ ಭತ್ತವೂ ಕೂಡ ಪ್ರಮುಖ ಸ್ಥಾನದಲ್ಲಿತ್ತು. ಭತ್ತ ಕೃಷಿಗೆ ಪೂರಕ ವಾತಾವರಣ ಹೊಂದಿರುವ ‘ಭತ್ತದ ಕಣಜ’ವಾಗಿದ್ದ ಕೊಡಗು ಬರಿದಾಗುವ ಪರಿಸ್ಥಿತಿಯತ್ತ ಮುಖ ಮಾಡಿದೆ. ಪ್ರತಿಕೂಲ ಪರಿಣಾಮಗಳಿಂದ ವರ್ಷದಿಂದ ವರ್ಷಕ್ಕೆ ಕೃಷಿಯಿಂದ ರೈತರು ವಿಮುಖಗೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ.

ಕಾರ್ಮಿಕರ ಕೊರತೆ - ವನ್ಯಜೀವಿ ಉಪಟಳ

ಕೊಡಗಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತದೊಂದಿಗೆ ಹಾರಂಗಿ, ಚಿಕ್ಲಿಹೊಳೆ ಸೇರಿದಂತೆ ವಿವಿಧ ನೀರಾವರಿ ಬಳಕೆ ಮಾಡಿಕೊಂಡು ಬೆಳೆ ಬೆಳೆಯಲಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಜೊತೆಗೆ ವನ್ಯಜೀವಿ ಉಪಟಳ ಭತ್ತ ಬೇಸಾಯದಿಂದ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ಕಾರ್ಮಿಕರು ಲಭ್ಯವಾಗುತ್ತಿಲ್ಲ. ದೊರೆತರೂ ಹೆಚ್ಚಿನ ಸಂಬಳ ನೀಡಬೇಕಾಗಿದೆ. ಆದರೆ, ನಿರೀಕ್ಷಿತ ಆದಾಯ ಭತ್ತ ಕೃಷಿಯಿಂದ ಬಾರದ ಕಾರಣ ಭತ್ತ ಬೆಳೆ ಮಾಡದ ಪರಿಸ್ಥಿತಿ ಬಂದೊದಗಿದೆ.

ಕಳೆದ ಕೆಲವು ವರ್ಷಗಳಿಂದ ವನ್ಯಜೀವಿ ಉಪಟಳ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿ ಸೇರ್ಪಡೆಗೊಂಡಿದೆ. ಕಾಡಿನಿಂದ ನಾಡಿನತ್ತ ಹೆಜ್ಜೆಯಿಡುತ್ತಿರುವ ವನ್ಯಜೀವಿಗಳು ಭತ್ತದೊಂದಿಗೆ ಇತ್ತರ ಫಸಲು ಕೂಡ ಹಾಳುಗೆಡುತ್ತಿವೆ. ಕಾಡಾನೆ, ಕಾಡು ಹಂದಿಯ ಕಾಟದಿಂದ ಹೈರಾಣಾಗಿ ಫಸಲು ಭರಿತ ಭತ್ತ ಕಳೆದುಕೊಂಡು ‘ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ’ ಎಂಬAತಾಗಿ ಹಲವರು ಭತ್ತ ಕೃಷಿಯಿಂದ ದೂರವಾಗುತ್ತಿದ್ದಾರೆ.

ಸೂಕ್ತ ಬೆಂಬಲ ಬೆಲೆ ಇಲ್ಲ

ಭತ್ತ ಕೃಷಿಗೆ ನಿರೀಕ್ಷಿತ ಬೆಂಬಲ ಬೆಲೆ ಇಲ್ಲದಿರುವುದು ಕೂಡ ಕೃಷಿಯಿಂದ ಹಿಂದೆ ಸರಿಯಲು ಮತ್ತೊಂದು ಕಾರಣವಾಗಿದೆ. ಸದ್ಯ ಸರಕಾರದಿಂದ ಕ್ವಿಂಟಾಲ್‌ಗೆ ರೂ. ೨,೩೦೦ ಬೆಂಬಲ ಬೆಲೆ ದೊರೆಯುತ್ತಿದೆ. ಖಾಸಗಿಯಾಗಿ ಇದಕ್ಕಿಂತ ಬೆಲೆ ಕಡಿಮೆ ಇದೆ. ಕನಿಷ್ಟ ರೂ. ೫ ಸಾವಿರ ಬೆಂಬಲ ಬೆಲೆ ನೀಡಿದರೆ ಬೆಳೆಗಾರರಿಗೆ ಪೂರಕ ಎಂದು ಪ್ರಗತಿಪರ ಕೃಷಿಕ ರವಿಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಕೊರತೆ, ವನ್ಯಜೀವಿ ಉಪಟಳ ನಡುವೆ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗುವುದಿಲ್ಲ. ಭತ್ತ ಕೃಷಿ ಬಹಳ ಕಷ್ಟಕರವಾಗಿದೆ. ಮಳೆಯಾಶ್ರಿತವಾಗಿಯೇ ಜಿಲ್ಲೆಯಲ್ಲಿ ಬೆಳೆ ಬೆಳೆಯಲಾಗುತ್ತದೆ. ಸೂಕ್ತ ಬೆಲೆ ಸಿಗದಿದ್ದರೆ ಕೃಷಿ ಮಾಡಿ ಪ್ರಯೋಜನವಿಲ್ಲ ಎಂದು ರವಿಶಂಕರ್ ತಿಳಿಸಿದ್ದಾರೆ.

ಸಂಕ್ರಾAತಿ, ಸುಗ್ಗಿ, ಹುತ್ತರಿ ಹಬ್ಬಗಳ ಆಚರಣೆಯ ಪ್ರಮುಖ ಭಾಗವಾಗಿರುವ ಭತ್ತ ಕೃಷಿ ವರ್ಷದಿಂದ ವರ್ಷಕ್ಕೆ ಇಳಿಮುಖಗೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಳೆ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ.