ವೀರಾಜಪೇಟೆ, ಜು. ೨೫: ಸೇವೆ ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಲಯನ್ಸ್ ವಲಯ ಅಧ್ಯಕ್ಷ ಎಂ.ಎ ನಿರಂಜನ್ ವಿಷಾದ ವ್ಯಕ್ತಪಡಿಸಿದರು.

ಲಯನ್ಸ್ ಕ್ಲಬ್ ಅಮ್ಮತ್ತಿಯ ೨೦೨೪-೨೫ ನೇ ಸಾಲಿನ ನೂತನ ಅಡಳಿತ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಲ. ಜ್ಯೋತಿ ಪೊನ್ನಪ್ಪ ಅವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಅಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಮತ್ತು ನಿರ್ದೇಶಕರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ನಿರಂಜನ್, ಸಂಸ್ಥೆ ನಡೆಸಲು ಅಧ್ಯಕ್ಷರಿಂದ ಮಾತ್ರ ಸಾಧ್ಯವಿಲ್ಲ ಬದಲಿಗೆ ಎಲ್ಲಾ ಸದಸ್ಯರು ಕೈಜೋಡಿಸಿದಲ್ಲಿ ಅಭಿವೃದ್ಧಿ ಸಾಧ್ಯ. ನೈಜ ಬದುಕಿಗೆ ಸಾಮಾಜಿಕ ಮೌಲ್ಯಗಳ ಅಳವಡಿಸುವಿಕೆ ಅನಿವಾರ್ಯವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಿದ್ಧಾಂತ, ಹೊಂದಾಣಿಕೆ, ಮೌಲ್ಯಭಾವನೆಗಳನ್ನು ಗುರುತಿಸುವಿಕೆ, ನಂಬಿಕೆ, ಸೇವಾ ಸ್ಫೂರ್ತಿ ಉತ್ತಮ ನಾಯಕನಾಗಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಸಂಸ್ಥೆಯ ಘನತೆ ಗೌರವವನ್ನು ಕಾಪಾಡಿಕೊಂಡು, ಸಮಾಜಕ್ಕೆ ಉತ್ತಮವಾದ ಕಾರ್ಯಕ್ರಮಗಳನ್ನು ನೀಡುವಂತಾಗ ಬೇಕು ಎಂದರು.

ನಿಕಟಪೂರ್ವ ಅದ್ಯಕ್ಷೆ ಜ್ಯೋತಿ ಪೊನ್ನಪ್ಪ ಅಧ್ಯಕ್ಷೀಯ ಭಾಷಣದಲ್ಲಿ ತನ್ನ ಅಧಿಕಾರ ಅವಧಿಯಲ್ಲಿ ಸಂಸ್ಥೆಯಿAದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಸಮಾಜಮುಖಿ ಕಾರ್ಯದಲ್ಲಿ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉತ್ತಮ ಸಹಕಾರ ನೀಡಿರುವುದನ್ನು ಸ್ಮರಿಸಿದರು. ಇನ್ನೂ ಮುಂದೆಯು ಸಮಾಜಮುಖಿ ಕಾರ್ಯಕ್ರಮಗಳು ಸಂಸ್ಥೆಯಿAದ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಅಮ್ಮತ್ತಿಯ ೨೦೨೪-೨೫ ನೇ ಸಾಲಿನ ನೂತನ ಅಡಳಿತ ಮಂಡಳಿ ರಚನೆಗೊಂಡು ಅಧ್ಯಕ್ಷರಾಗಿ ಆರತಿ ಕಾರ್ಯಪ್ಪ, ಕಾರ್ಯದರ್ಶಿಗಳಾಗಿ ಕ್ರೀತಿನ ಪೂಣಚ್ಚ, ಕೋಶಾಧಿಕಾರಿಗಳಾಗಿ ಜ್ಯೋತಿ ಪೊನ್ನಪ್ಪ, ಕೋಡಿರ ದಿನೇಶ್, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಗಣಪತಿ, ಎನ್.ಎ ಕಾರ್ಯಪ್ಪ ಅವರುಗಳು ಅಯ್ಕೆಗೊಂಡರು. ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷರಾಗಿ ರಕ್ಷಿತ್ ಅಯ್ಯಪ್ಪ, ಎಲ್.ಸಿ.ಐ.ಎಫ್ ಕಾರ್ಯಾಧ್ಯಕ್ಷ ಡಾ. ಸುಬ್ರಮಣಿ, ಸೇವಾ ಕಾರ್ಯಗಳ ಕಾರ್ಯಾಧ್ಯಕ್ಷರಾಗಿ ಸವಿತಾ ಬೋಪಣ್ಣ, ಪಿ.ಯು. ಬೋಪಣ್ಣ, ಜಯ ಮಾಚಿಮಂಡ ಅಯ್ಕೆಗೊಂಡರು, ನಿರ್ದೇಶಕರುಗಳಾಗಿ ಎನ್.ಎ. ಪೂಣಚ್ಚ, ಚಾಂದ್ ಸುಬ್ರಮಣಿ, ಕರ್ನಲ್ ಕಾವೇರಪ್ಪ, ಮುಕ್ಕಾಟಿರ ಬೋಪಣ್ಣ, ಎಸ್.ಎಸ್. ಪೂಣಚ್ಚ, ಮತ್ತು ಮಚ್ಚಾರಂಡ ಪ್ರಸಾದ್ ಚೆಂಗಪ್ಪ ಆಯ್ಕೆಗೊಂಡರು.

ಗೀತಾ ಚೆಂಗಪ್ಪ ಅವರು ಪ್ರಾರ್ಥನೆ ನೆರೆವೇರಿಸಿದರು, ಜ್ಯೋತಿ ಪೊನ್ನಪ್ಪ ಸ್ವಾಗತಿಸಿದರು, ಸೋಮೆಯಂಡ ದಾದು ಪೂಣಚ್ಚ ವಂದಿಸಿದರು.