ಸುಂಟಿಕೊಪ್ಪ, ೨೫: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳಿ ಹಾನಿಯಾಗಿದ್ದು, ವಿದ್ಯುತ್ ಕಂಬ, ತಂತಿಗಳು ನೆಲಕ್ಕುರುಳಿ ಇದರಿಂದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದೆ. ಈಗಾಗಲೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಧಿಕ ಮಳೆÀಯಾಗುತ್ತಿದ್ದು ನಾಕೂರು ಕೆದಕಲ್ ಭಾಗದಲ್ಲಿ ಗಾಳಿ ಮಳೆಗೆ ೮ ಕಂಬಗಳು ನೆಲಕಚ್ಚಿವೆ. ಸುಂಟಿಕೊಪ್ಪದಲ್ಲಿ ಟಿಸಿ ಮೇಲೆ ಮರ ಬಿದ್ದು ಟ್ರಾನ್ಸ್ಫಾರ್ಮರ್ ಹಾಳಾಗಿದ್ದು ಇಲಾಖೆಗೆ ಸುಮಾರು ೫ ಲಕ್ಷದಷ್ಟು ನಷ್ಟವಾಗಿದೆ ಎಂದು ಸುಂಟಿಕೊಪ್ಪ ಸೆಸ್ಕ್ ಅಭಿಯಂತರ ಲವಕುಮಾರ್ ಮಾಹಿತಿ ನೀಡಿದ್ದಾರೆ. ವಿದ್ಯುತ್ ಇಲ್ಲದ ಪರಿಣಾಮ ನೀರಿಲ್ಲದೆ ಕೆÀಲವು ಗ್ರಾಮೀಣದ ಪ್ರದೇಶ ಜನರು ಪರದಾಡುವಂತಾಗಿದೆ. ಶಾಂತಿಗೇರಿ ತೋಟದಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಬಿ.ಕೆ. ಶಶಿಕುಮಾರ್, ಸಂಜೀವ, ಗುರು, ವಿಶ್ವನಾಥ ರೈ, ಮೋಹನ್ ದಾಸ್ ಅವರ ಮನೆ ಸರ್ವಿಸ್ ವಯರ್ ತುಂಡಾಗಿ ಕಳೆದ ಒಂದು ವಾರದಿಂದ ವಿದ್ಯುತ್ ವ್ಯತ್ಯಯವುಂಟಾಗಿದೆ. ಸೆಸ್ಕ್ ಇಲಾಖೆ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸ ಪಡುತ್ತಿದ್ದು, ಅತಿಯಾದ ಗಾಳಿಯಿಂದ ತೊಡಕುಂಟಾಗಿದೆ.