ಮಡಿಕೇರಿ, ಜು. ೨೭: ಗ್ರಾಮ ಮಟ್ಟದಲ್ಲಿ ಸ್ಮಶಾನಗಳ ಅವಶ್ಯಕತೆ ಹೆಚ್ಚಿದೆ. ಇರುವ ರುದ್ರಭೂಮಿ ಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವ ದೂರುಗಳೂ ಸಾಕಷ್ಟಿವೆ. ಈ ಮಧ್ಯೆ ಮೂರ್ನಾಡಿನಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಉನ್ನತೀಕರಣ ಗೊಂಡ ಹಿಂದೂ ರುದ್ರಭೂಮಿ ಕಾರ್ಯಾರಂಭ ಮಾಡಿದ್ದು, ಮತ್ತೊಂದು ಸಿಲಿಕಾನ್ ಚೇಂಬರ್ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಆರ್ಥಿಕ ನೆರವಿನ ನಿರೀಕ್ಷೆಯನ್ನು ಸಮಿತಿ ಹೊಂದಿದೆ.
ಸರಕಾರದಿಂದಲೇ ಎಲ್ಲವೂ ಆಗಬೇಕೆಂಬ ಚಿಂತನೆಯ ನಡುವೆ ಅವರು ಉದಾರವಾಗಿ ನೀಡಿದ ೪೫ ಸೆಂಟ್ ಹಾಗೂ ಪಕ್ಕದ ೫ ಸೆಂಟ್ ಜಾಗ ಸೇರಿದಂತೆ ಒಟ್ಟು ೫೦ ಸೆಂಟ್ ಜಾಗದಲ್ಲಿ ಸ್ಮಶಾನವನ್ನು ಉನ್ನತೀಕರಣಗೊಳಿಸಿ ಸಕಲ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.
ಎರಡು ಸಿಲಿಕಾನ್ ಚೇಂಬರ್ ಪೈಕಿ ಒಂದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ರೂ. ೨.೫೦ ಲಕ್ಷ ನೆರವಿನೊಂದಿಗೆ ಅಳವಡಿಸಿ ಅಂತ್ಯಕ್ರಿಯೆ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮತ್ತೊಂದು ಸಿಲಿಕಾನ್ ಚೇಂಬರ್ಗಾಗಿ ಕೋಣೆಯೊಂದನ್ನು ನಿರ್ಮಿಸಲಾಗಿದ್ದು, ಸಿಲಿಕಾನ್ ಚೇಂಬರ್ ಅಳವಡಿಕೆಗೆ ರೂ. ೨.೫೦ ಲಕ್ಷ ವೆಚ್ಚ ತಗಲುತ್ತದೆ. ಇದರೊಂದಿಗೆ ತಡೆಗೋಡೆ ನಿರ್ಮಾಣದ ಅಗತ್ಯತೆಯೂ ಇದೆ. ಇದಕ್ಕೂ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು, ದಾನಿಗಳು ನೆರವು ನೀಡಲು ಮುಂದೆ ಬರಬೇಕಾಗಿದೆ.
ಸೂಕ್ತ ವ್ಯವಸ್ಥೆ ಇಲ್ಲದ ರುದ್ರಭೂಮಿಗೆ ಆಡಳಿತ ಹಾಗೂ ದಾನಿಗಳ ಸಹಕಾರದೊಂದಿಗೆ ಕಾಯಕಲ್ಪ ಒದಗಿಸಲಾಗಿದೆ. ಹರಿಶ್ಚಂದ್ರ ಗುಡಿ, ಸೌದೆ ಶೇಖರಣಾ ಶೆಡ್, ನೀರು, ವಿದ್ಯುತ್ ಸೇರಿದಂತೆ ವಾಹನ ನಿಲುಗಡೆಗೂ ಉತ್ತಮ ವ್ಯವಸ್ಥೆಯನ್ನು ಒದಗಿಸಲಾಗಿದೆ. ಒಂದು ಸಿಲಿಕಾನ್ ಚೇಂಬರ್ ಹಾಗೂ ಆವರಣ ಗೋಡೆ ನಿರ್ಮಾಣವಾದಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಗೆ ಮಾದರಿ ಯಾಗುವ ಸ್ಮಶಾನ ಇದಾಗಲಿದೆ ಎಂದು ಸಮಿತಿ ತಿಳಿಸಿದೆ.
ನಿರ್ವಹಣಾ ಸಮಿತಿಯೇ ರುದ್ರಭೂಮಿಯ ಜವಾಬ್ದಾರಿ ಹೊತ್ತಿದ್ದು, ರೂ. ೧ ಸಾವಿರ ಪಡೆದು ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ನೀಡಿದ ಹಣವನ್ನು ಸಂಪೂರ್ಣವಾಗಿ ಸ್ಮಶಾನದ ಕೆಲಸಕ್ಕೆಂದು ಮೀಸ ಲಾಗಿಡಲಾಗಿದೆ. ಕಡುಬಡವರಿಗೆ ಉಚಿತವಾಗಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುವ ಚಿಂತನೆ ಇದೆ. ಮತ್ತೊಂದು ಸಿಲಿಕಾನ್ ಚೇಂಬರ್ ಅಳವಡಿಕೆಯಾದಲ್ಲಿ ಉತ್ತಮ ವಾಗಿರುತ್ತದೆ ಎಂದು ಸಮಿತಿ ಪ್ರಮುಖರ ಅಭಿಪ್ರಾಯವಾಗಿದೆ.
ಆರ್ಥಿಕ ನೆರವು ನೀಡಲು ಇಚ್ಛಿಸುವವರು ಸಮಿತಿ ಅಧ್ಯಕ್ಷ ಅರುಣ್ ಬಾಬ ಅವರ ಮೊಬೈಲ್ ಸಂಖ್ಯೆ ೯೪೪೯೨೪೫೪೨೭ ಅಥವಾ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಅವರ ಮೊಬೈಲ್ ಸಂಖ್ಯೆ ೯೪೪೮೪೦೬೫೩೪ ಅನ್ನು ಸಂಪರ್ಕಿಸಬಹುದಾಗಿದೆ.