ಮಡಿಕೇರಿ, ಜು. ೨೭: ಪ್ರತಿಷ್ಠಿತವಾದ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಪ್ಯಾರಿಸ್‌ನಲ್ಲಿ ನಿನ್ನೆ ಚಾಲನೆ ದೊರೆಯಿತು. ಜಾಗತಿಕ ಮಟ್ಟದ ಈ ಕ್ರೀಡೆಗೆ ಭಾರೀ ಮಹತ್ವವಿದ್ದು, ಇದೀಗ ಕ್ರೀಡಾಭಿಮಾನಿಗಳ ಚಿತ್ತ ಪ್ಯಾರಿಸ್‌ನತ್ತ ನೆಟ್ಟಿದೆ. ಈ ಕ್ರೀಡಾಕೂಟದಲ್ಲಿ ಭಾರತವನ್ನು ಕೊಡಗು ಜಿಲ್ಲೆಯ ನಾಲ್ವರು ಪ್ರತಿನಿಧಿಸುತ್ತಿದ್ದಾರೆ.

ಅತ್ಯಂತ ವಿಶಾಲವಾಗಿರುವ ಈ ಕ್ರೀಡಾ ಗ್ರಾಮದಲ್ಲಿ ಎಲ್ಲರೂ ಪರಸ್ಪರ ಭೇಟಿಯಾಗುವುದೇ ಭಾರೀ ಕಷ್ಟಕರವಾದದ್ದು. ಆದರೂ ಉದ್ಘಾಟನೆ ಸಂದರ್ಭ ಬಾಕ್ಸಿಂಗ್ ಕೋಚ್ ಸಿ.ಎ. ಕುಟ್ಟಪ್ಪ, ಬ್ಯಾಡ್‌ಮಿಂಟನ್ ಪಟು ಅಶ್ವಿನಿ ಪೊನ್ನಪ್ಪ ಹಾಗೂ ಟೆನ್ನಿಸ್‌ಪಟು ರೋಹನ್ ಬೋಪಣ್ಣ ಅವರುಗಳು ಭೇಟಿಯಾಗಿ ಒಟ್ಟಿಗೆ ಸಂತಸ ಹಂಚಿಕೊAಡಿದ್ದು ಹೀಗೆ...