ಮಡಿಕೇರಿ, ಜು. ೨೭ ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಸಕರುಗಳ ಸಭೆಯನ್ನು ನಿನ್ನೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನಡೆಸಿದರು. ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಹಾಗೂ ಎಂ.ಪಿ. ಸುಜಾ ಕುಶಾಲಪ್ಪ ಅವರುಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾವೇರಿಯ ಸಂರಕ್ಷಣೆ ಸೇರಿದಂತೆ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯ ಸಂದರ್ಭ ಎದುರಾಗುವ ಸಮಸ್ಯೆ ಪರಿಹಾರೋಪಾಯದ ಬಗ್ಗೆ ಈ ಸಭೆಯಲ್ಲಿ ಜಿಲ್ಲೆಯ ಚರ್ಚೆ ನಡೆಯಿತು. ಜಿಲ್ಲೆಯ ಶಾಸಕರು ಈ ಕುರಿತು ಹಲವು ಸಲಹೆಗಳೊಂದಿಗೆ ಆಗಬೇಕಿರುವ ಕೆಲಸದ ಬಗ್ಗೆ ಗಮನ ಸೆಳೆದರು.
ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗುತ್ತಿರುವುದು, ಹೂಳೆತ್ತುವ ಅಗತ್ಯತೆ ಬಗ್ಗೆ ಗಮನ ಸೆಳೆದು ಮನವಿ ಮಾಡಲಾಯಿತು.