ಮಡಿಕೇರಿ, ಜು. ೨೭: ನಗರದ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ೨ ದಿನಗಳ ಹಿಂದೆ ತೀವ್ರ ಮಳೆಯಿಂದಾಗಿ ಚರಂಡಿ ಹಾನಿಗೊಳಗಾಗಿ ಭಾಗಶಃ ಕುಸಿದಿತ್ತು. ಇಂದು ಇದರ ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಮಳೆ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ಹೆಚ್ಚಿನ ಮಳೆ ಆದಲ್ಲಿ ರಸ್ತೆಯ ಭಾಗವು ಕುಸಿಯುವ ಅಪಾಯವಿದ್ದು, ಸದ್ಯದ ಮಟ್ಟಿಗೆ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರ ನಿಯಂತ್ರಿಸಲಾಗಿದೆ.