ಕೂಡಿಗೆ, ಜು. ೨೭ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ಚಿಕ್ಕತ್ತೂರು ಗ್ರಾಮದಲ್ಲಿರುವ ೧೧ ಎಕರೆಗಳಷ್ಟು ಪ್ರದೇಶದಲ್ಲಿರುವ ಪುರಾತನ ಆನೆಕೆರೆಯು ಸಂಪೂರ್ಣವಾಗಿ ಭರ್ತಿಯಾಗಿದೆ.
ಆನೆಕೆರೆ ಭರ್ತಿಯಾಗಿ ರುವುದರಿಂದ ಈ ವ್ಯಾಪ್ತಿಯ ನೂರಾರು ರೈತರ ಜಮೀನಿನ ಕೊಳವೆ ಬಾವಿಗಳಿಗೆ ಅಂತರ್ಜಲದ ಮಟ್ಟ ಹೆಚ್ಚಾಗಿದೆ.
ಚಿಕ್ಕತ್ತೂರು ಗ್ರಾಮ ಶ್ರೀ ವಿನಾಯಕನ ಯುವಕ ಸಂಘದ ವತಿಯಿಂದ ತಾ. ೩೦ ರಂದು ಗ್ರಾಮಸ್ಥರ ಸಹಕಾರದೊಂದಿಗೆ ಆನೆಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವು ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.