ಸುಂಟಿಕೊಪ್ಪ, ಜು. ೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಪಂಪ್‌ಹೌಸ್ ರಸ್ತೆಯ ನಿವಾಸಿ ಸುಲೈಕ ಎಂಬವರ ವಾಸದ ಮನೆಯು ಕುಸಿದು ಬಿದ್ದು ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ ಪ್ರಸಾದ್ ಕುಟ್ಟಪ್ಪ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಭೇಟಿ ನೀಡಿದರು.

* ೭ನೇ ಹೊಸಕೋಟೆ ಕಲ್ಲುಕೊರೆಯ ಜನಾರ್ಧನ ಪೂಜಾರಿ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿದೆ.