*ಸಿದ್ದಾಪುರ, ಜು. ೨೬ : ನೆಲ್ಲಿಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ.

ಸ್ಥಳೀಯ ಕೃಷಿಕ ಎಂ.ಎA. ಲಕ್ಷö್ಮಣ ಅವರು ಬೆಳೆದಿದ್ದ ೬ ವರ್ಷದ ಕಾಫಿ ಮತ್ತು ಅಡಿಕೆ ಗಿಡಗಳನ್ನು ಕಾಡಾನೆಗಳ ಹಿಂಡು ಸಂಪೂರ್ಣವಾಗಿ ನಾಶ ಮಾಡಿದೆ. ಗ್ರಾಮದಲ್ಲೇ ಸುತ್ತಾಡುತ್ತಿರುವ ಕಾಡಾನೆಗಳು ಕೆರೆಯಲ್ಲಿ ನೀರು ಕುಡಿದು ತೋಟಗಳಿಗೆ ಲಗ್ಗೆ ಇಡುತ್ತಿವೆ.

ಸಾಲ ಪಡೆದು ಮಾಡಿದ ಕೃಷಿಯ ಫಲ ಕೈಗೆ ಬರುವ ಮೊದಲೇ ಆನೆಗಳ ಹೊಟ್ಟೆಗೆ ಸೇರುತ್ತಿದೆ. ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳು ದಾಂಧಲೆ ನಡೆಸಿ ಬೆಳೆ ನಷ್ಟ ಮಾಡಿದರೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುತ್ತಿಲ್ಲ ಮುಂದಿನ ದಿನಗಳಲ್ಲಿ ಕೃಷಿ ಕಾರ್ಯವನ್ನೇ ಬಿಟ್ಟು ಬಿಡುವ ಅನಿವಾರ್ಯತೆ ಎದುರಾಗಬಹುದೆಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.