ಕುಶಾಲನಗರ, ಜು. ೨೬: ಎರಡು ದಿನಗಳ ಹಿಂದೆ ಕುಶಾಲನಗರ ಕಾವೇರಿ ನದಿಗೆ ಹಾರಿದ ಉಪ ವಿಭಾಗಾಧಿಕಾರಿಗಳ ಕಚೇರಿಯ ನೌಕರ ಅರುಣ್ ಬಗ್ಗೆ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಕೊಳೆತ ಸ್ಥಿತಿಯಲ್ಲಿದ್ದ ದೇಹವೊಂದು ಕುಶಾಲನಗರ ಪಟ್ಟಣದ ಸಮೀಪ ನದಿಯಲ್ಲಿ ಪತ್ತೆಯಾಗಿದೆ.

ಎನ್‌ಡಿಆರ್‌ಎಫ್, ಅಗ್ನಿಶಾಮಕ ತಂಡ, ಕುಶಾಲನಗರ ಪೊಲೀಸ್ ತಂಡ ಹಾಗೂ ದುಬಾರೆ ರ‍್ಯಾಫ್ಟರ್ ತಂಡದ ಸದಸ್ಯರು ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭ ಕಾವೇರಿ ಸೇತುವೆಯ ಕೆಳಭಾಗದಲ್ಲಿ ನದಿ ನೀರಿನಲ್ಲಿ ದೇಹ ಪತ್ತೆಯಾಗಿದೆ. ಕಾರ್ಯಾಚರಣೆ ತಂಡಗಳು ದೇಹವನ್ನು ನದಿಯಿಂದ ಮೇಲೆತ್ತಿದ ಬಳಿಕ ಅರುಣ್ ಕುಟುಂಬ ಸದಸ್ಯರು ಪರಿಶೀಲನೆ ನಡೆಸಿದರು.

ಅಪರಿಚಿತ ಶವವೆಂದು ಖಚಿತಗೊಂಡ ನಂತರ ಪೊಲೀಸ್ ಪರಿಶೀಲನೆ ನಂತರ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಸಂಬAಧಿಸಿದAತೆ ಸಮೀಪದ ಬಸವನಹಳ್ಳಿ ಗ್ರಾಮದ ಮಹೇಶ ಎಂಬಾತನ ಮೃತ ದೇಹ ಎಂಬುದಾಗಿ ಕುಶಾಲನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದುಬಾರೆಯ ರ‍್ಯಾಫ್ಟರ್ ತಂಡದ ಸದಸ್ಯರು ನದಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದ ಸಂದರ್ಭ ದೇಹ ಪತ್ತೆಯಾಗಿತ್ತು.

ಕಾವೇರಿ ನದಿಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಒಂದೇ ದಿನದಲ್ಲಿ ೧೦ ಅಡಿಗಳಷ್ಟು ನೀರಿನ ಏರಿಕೆ ಕಂಡು ಬಂದಿದೆ. ಇದರಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿದ್ದು ೫ ತಂಡಗಳ ೫೦ಕ್ಕೂ ಅಧಿಕ ಮಂದಿ ಸದಸ್ಯರು ಕಳೆದ ಮೂರು ದಿನಗಳಿಂದ ನಿರಂತರವಾಗಿ ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮAಗಳೂರಿನ ಮಲ್ಪೆಯ ನುರಿತ ಮುಳುಗು ತಜ್ಞ ಈಶ್ವರ್ ಅವರು ಕೂಡ ಸ್ಥಳಕ್ಕೆ ಆಗಮಿಸಿದ್ದು ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹಾಗೂ ವೇಗದ ಹರಿವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೊಡಕುಂಟಾಗಿದೆ ಎಂದು ಈಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ,್ಪ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಶೋಧ ಕಾರ್ಯ ನೇತೃತ್ವ ವಹಿಸಿದ್ದಾರೆ.