ಮಡಿಕೇರಿ, ಜು. ೨೭: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ರಾಜ್ಯ ಸರಕಾರ ಕೈಗೊಂಡ ಕ್ರಮವನ್ನು ಸ್ವಾಗತಿಸಿರುವ ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಕಾವೇರಿ ಮಹಾ ಆರತಿ ಬಳಗ ಕಾವೇರಿ ತವರೂರಾದ ಕೊಡಗಿನಲ್ಲಿಯೇ ಈ ಕಾರ್ಯಕ್ರಮ ನಡೆಸಬೇಕೆಂದು ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ೧೪ ವರ್ಷಗಳಿಂದ ಕಾವೇರಿ ನದಿ ಪ್ರದೇಶದ ರಕ್ಷಣೆಗಾಗಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದ್ದು, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜೀವನದಿ ಕಾವೇರಿಗೆ ಪ್ರತಿ ಹುಣ್ಣಿಮೆಯಂದು ಕಾವೇರಿಗೆ ಆರತಿ ಮಾಡುವ ಕಾರ್ಯ ನಡೆಸುತ್ತಾ ಬರಲಾಗುತ್ತಿದೆ. ಕಳೆದ ೨ ತಿಂಗಳುಗಳಿAದ ಭಾಗಮಂಡಲ ತ್ರಿವೇಣಿ ಸಂಗಮದಿAದ ಕುಶಾಲನಗರ ಹಾರಂಗಿ-ಕಾವೇರಿ ಸಂಗಮ ತನಕದ ೨೦ ಸ್ಥಳಗಳಲ್ಲಿ ‘ನಮಾಮಿ ಕಾವೇರಿ’ ತಂಡದ ಹೆಸರಿನಲ್ಲಿ ಏಕಕಾಲದಲ್ಲಿ ನದಿಗೆ ಆರತಿ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

ಕಾವೇರಿ ಆರತಿ ಕಾರ್ಯಕ್ರಮ ಧಾರ್ಮಿಕ ಪ್ರಜ್ಞೆ ಬೆಳೆಸುವುದರೊಂದಿಗೆ ವೈಜ್ಞಾನಿಕ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಮೂಲದಲ್ಲಿಯೇ ಕಾವೇರಿ ಕಲುಷಿತ ಗೊಳ್ಳುತ್ತಿರುವುದನ್ನು ತಪ್ಪಿಸಬಹುದಾಗಿದೆ. ಈ ಹಿನ್ನೆಲೆ ಬೇರೆ ಕಡೆಗಳಲ್ಲಿ ಆರತಿ ಕಾರ್ಯಕ್ರಮ ಮಾಡದೆ ಕಾವೇರಿ ಉಗಮ ಸ್ಥಳ ತಲಕಾವೇರಿ, ಭಾಗಮಂಡಲ ಅಥವಾ ಜಿಲ್ಲೆಯಲ್ಲಿ ಹರಿಯುವ ನದಿ ಅಂಚಿನ ಧಾರ್ಮಿಕ ಕೇಂದ್ರಗಳಲ್ಲಿ ನಡೆಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ನಿಯೋಗ ತೆರಳುವುದಾಗಿ ಹೇಳಿದ ಅವರು, ಸ್ವಚ್ಛ ಕಾವೇರಿಗಾಗಿ ‘ರಿವರ್ ಪೊಲೀಸ್’ ನಿಯಮ ಜಾರಿಯಾಗಬೇಕು. ಪ್ರತ್ಯೇಕ ನೋಡೆಲ್ ಅಧಿಕಾರಿ ನೇಮಕಗೊಳ್ಳಬೇಕು. ದಕ್ಷಿಣ ಭಾರತಕ್ಕೆ ನೀರುಣಿಸುವ ಕಾವೇರಿ ನದಿ ಹಾದು ಹೋಗುವ ಜಿಲ್ಲೆಯ ೨೨ ಗ್ರಾಮ ಹಾಗೂ ೧ ಪುರಸಭೆಯಲ್ಲಿ ಪೂರಕ ಯೋಜನೆಗಳನ್ನು ಇದುವರೆಗೂ ಮಾಡಿಲ್ಲ. ಈ ಬಗ್ಗೆ ಕ್ರಮದ ಅಗತ್ಯ ಇದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಂಡೇಪAಡ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಕುಶಾಲನಗರ ಗೌಡ ಸಮಾಜ ಮಾಜಿ ಅಧ್ಯಕ್ಷ ಕೂರನ ಪ್ರಕಾಶ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಹಾಜರಿದ್ದರು.