ಕುಶಾಲನಗರ, ಜು. ೨೭: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಈ ಸಾಲಿನಲ್ಲಿ ರೂ. ೨೦ ಲಕ್ಷ ೪೫ ಸಾವಿರ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ಅವರು ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸಂಘವು ಪ್ರಾರಂಭವಾಗಿ ೯ ವರ್ಷ ಸಂದಿದೆ. ಪ್ರಾರಂಭದಲ್ಲಿ ೭೬೨ ಸದಸ್ಯರನ್ನು ಹೊಂದಿದ ಸಂಘ ಇದೀಗ ಎ ತರಗತಿಯ ೮೬೧ ಸದಸ್ಯರು ಮತ್ತು ಸಿ ಗ್ರೇಡ್ ೧೩೨ ಸದಸ್ಯರನ್ನು ಹೊಂದಿರುತ್ತದೆ.
ಸಂಘವು ರೂ. ೧.೭೦ ಕೋಟಿ ಠೇವಣಿ ಹಾಗೂ ರೂ. ೫೦.೫೫ ಲಕ್ಷ ನಿಧಿಗಳನ್ನು ಹೊಂದಿದೆ. ಒಟ್ಟು ರೂ. ೨ ಕೋಟಿ ೮೪ ಲಕ್ಷ ೧೫ ಸಾವಿರ ದುಡಿಯುವ ಬಂಡವಾಳ ಇದೆ ಎಂದು ಮಾಹಿತಿ ನೀಡಿದರು. ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ, ಕಂತಿನ ಜಾಮೀನು ಸಾಲ ಹಾಗೂ ಪಿಗ್ಮಿ ಸಾಲಗಳನ್ನು ಸಂಘದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿಯನ್ನು ಪರಿಷ್ಕರಿಸುತ್ತಾ ಸಾಲ ವಿತರಿಸಲಾಗುತ್ತಿದೆ ಎಂದರು. ಸಂಘವು ಎ ತರಗತಿಯಲ್ಲಿ ವರ್ಗೀಕರಣವಾಗಿದೆ.
ಹಿಂದಿನ ಆಡಳಿತ ಮಂಡಳಿಯ ಸತತ ಪ್ರಯತ್ನದಿಂದ ಲಕ್ಷಾಂತರ ಮೌಲ್ಯದ ನಿವೇಶನವನ್ನು ಸದಸ್ಯ ಎಂ.ಡಿ. ನಾಗರಾಜು ಅವರು ಸಂಘಕ್ಕೆ ಉಚಿತವಾಗಿ ನೀಡಿದ್ದಾರೆ. ಈ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಪ್ರಾರಂಭಿಸಲಾಗಿದೆ. ಎಲ್ಲಾ ಸದಸ್ಯರ ಸಹಕಾರವನ್ನು ಈ ಮೂಲಕ ಕೋರಲಾಗಿದೆ ಎಂದರು.
ಸAಘದ ೯ನೇ ವಾರ್ಷಿಕ ಮಹಾಸಭೆ ತಾ. ೨೮ ರಂದು ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ದಿನೇಶ್ ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಬಿ. ಜಗದೀಶ್, ನಿರ್ದೇಶಕರಾದ ಕೆ.ಪಿ. ರಾಜು, ರವಿಕುಮಾರ್, ರೇಖಾ ಪ್ರಕಾಶ್, ಕಸ್ತೂರಿ ಮಹೇಶ್ ಹಾಗೂ ಕಾರ್ಯನಿರ್ವಹಕಾಧಿಕಾರಿ ಕೆ.ಕೆ. ಸುನಿತಾ ಇದ್ದರು.