ವೀರಾಜಪೇಟೆ, ಜು. ೨೭: ಆಗಸ್ಟ್ ೨೦ ರಂದು ತಾಲೂಕು ಬಿಲ್ಲವ ಸೇವಾ ಸಮಾಜದ ವತಿಯಿಂದ ನಾರಾಯಣ ಗುರು ಜಯಂತಿ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಬಿಟ್ಟಂಗಾಲದಲ್ಲಿರುವ ನಾರಾಯಣ ಗುರು ಮಂದಿರದಲ್ಲಿ ನಡೆಸಲಾಗುತ್ತದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ್ ತಿಳಿಸಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.

ಅರ್ಹರು ಆಗಸ್ಟ್ ೧೦ರೊಳಗೆ ಸಂಘಕ್ಕೆ ಅಂಕಪಟ್ಟಿ ಹಾಗೂ ಆಗತ್ಯ ದಾಖಲೆಯನ್ನು ನೀಡಬೇಕು.

ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ಬಿ.ಎಂ. ಗಣೇಶ್- ೯೯೪೫೫೨೬೩೫೮, ಕಾರ್ಯದರ್ಶಿ ಜನಾರ್ಧನ - ೯೬೧೧೦೦೨೯೯೮ ಅವರುಗಳನ್ನು ಸಂರ್ಪಕಿಸಬಹುದು ಎಂದರು.

ಆದರಿAದ ಆ ದಿನ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸುವಂತೆ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಕೋರಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ, ಖಜಾಂಚಿ ಬಿ.ಎಂ. ಸತೀಶ್ ಪೂಜಾರಿ, ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಜಿ. ನಾರಾಯಣ, ಸಮಿತಿ ಸದಸ್ಯರಾದ ಬಿ.ಎಸ್. ಕಿಶೋರ್, ಬಿ.ಕೆ. ಹರೀಶ್ ಉಪಸ್ಥಿತರಿದ್ದರು.