ಚೆಯ್ಯಂಡಾಣೆ, ಜು. ೨೭: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ರೈತರು, ಕೃಷಿಕರು ಕಂಗಲಾಗಿದ್ದಾರೆ.
ವರ್ಷಕ್ಕೆ ಒಂದು ಬಾರಿ ಅಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯುವ ಕೃಷಿಕರು ಈ ಗ್ರಾಮದಲ್ಲಿದ್ದು ಅವರಿಗೆ ಕಾಡಾನೆ ದಾಳಿಯಿಂದ ಗದ್ದೆಯನ್ನು ಹಾಗೆಯೆ ಬಿಡುವ ಸನ್ನಿವೇಶ ನಿರ್ಮಾಣವಾಗಿದೆ.
ಗ್ರಾಮದ ಪೊಕ್ಕುಳಂಡ್ರ ನಾಣಯ್ಯ ಅವರ ಗದ್ದೆಯ ಪೈರುಗಳನ್ನು ಕಾಡಾನೆ ತುಳಿದು ನಾಶಪಡಿಸಿದೆ. ಮತ್ತೊಂದೆಡೆ ಬೊವೇರಿಯಂಡ ಪ್ರಭ ಮುದ್ದಯ್ಯ, ಮುಂಡ್ಯೋಳAಡ ಮಿಟ್ಟು ಅಪ್ಪಯ್ಯ ಹಾಗೂ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ತುಳಿದು ನಾಶಗೊಳಿಸಿವೆ.
ಅರಣ್ಯಧಿಕಾರಿಗಳು ಕಾಡಾನೆಗಳು ತೋಟಕ್ಕೆ ಹಾಗೂ ಗದ್ದೆಗೆ ನುಸುಳದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆAದು ಗ್ರಾಮಸ್ಥರು ಆಗ್ರಹಿಸಿದ್ದಾರೆ.