ಗೋಣಿಕೊಪ್ಪಲು, ಜು. ೨೬: ವರುಣನ ಆರ್ಭಟಕ್ಕೆ ಕುಟ್ಟ ಸಮೀಪದ ಮಂಚಳ್ಳಿಯ ರಸ್ತೆ ಕುಸಿದು ಶ್ರೀಮಂಗಲ-ಕುಟ್ಟ ಸಂಪರ್ಕ ರಸ್ತೆ ಕಡಿತಗೊಂಡಿದೆ.

ಕೆಲವು ದಿನಗಳಿಂದ ಸುರಿಯು ತ್ತಿರುವ ಭಾರಿ ಮಳೆಯಿಂದಾಗಿ ಶ್ರೀಮಂಗಲ-ಕುಟ್ಟ ರಸ್ತೆ ನಡುವಿನ ಮಂಚಳ್ಳಿಯಲ್ಲಿ ರಸ್ತೆಯ ಬದಿಯ ಮಣ್ಣು ಕುಸಿದು ರಸ್ತೆ ಭಾಗಶಃ ಹಾನಿಯಾಗಿ ಸಂಚಾರ ಅಸ್ತವ್ಯಸ್ಥ ಗೊಂಡಿದೆ.

ಕಳೆದ ಮೂರು ದಿನಗಳ ಹಿಂದೆ ಭಾರಿ ಮಳೆಯಿಂದ ಅರ್ಧ ಭಾಗದಷ್ಟು ಕುಸಿತ ಸಂಭವಿಸಿದೆ. ಉಳಿದ ರಸ್ತೆಯಲ್ಲಿಯೂ ಬಿರುಕು ಹೆಚ್ಚಾಗುತ್ತಿರುವುದರಿಂದ ಈ ಮೂಲಕ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಕಾಮಗಾರಿಗೆ ಸಮಸ್ಯೆಯಾಗಿದೆ. ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿದ್ದೇಗೌಡ ತಿಳಿಸಿದ್ದಾರೆ. ರಸ್ತೆ ಹಾಳಾದ ಹಿನ್ನೆಲೆ ಕೇರಳಕ್ಕೆ ಸಂಪರ್ಕ ಕಷ್ಟಸಾಧ್ಯವಾಗಿದೆ.

(ಮೊದಲ ಪುಟದಿಂದ)

ಸಿಲುಕಿದ ಬಸ್

ಈ ಮಾರ್ಗವಾಗಿ ಮುಂಜಾನೆ ವೇಳೆ ಖಾಸಗಿ ಬಸ್ ಶ್ರೀಮಂಗಲ-ಕುಟ್ಟಕ್ಕೆ ತೆರಳುತ್ತಿದ್ದ ಸಂದರ್ಭ ಬಸ್ ರಸ್ತೆಯ ಒಂದು ಬದಿಗೆ ಸರಿದು ನಿಂತು ಹೋಗಿದೆ. ಮಾರ್ಗದ ಮಧ್ಯೆ ಬಸ್ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಯಾವುದೇ ವಾಹನ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳಿದರು. ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹಲವು ರೀತಿಯಲ್ಲಿ ವಾಹನವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರಾದರೂ ಬಸ್ ತೆರವು ಸಾಧ್ಯವಾಗಲಿಲ್ಲ. ಸಂಜೆಯ ವೇಳೆಯಲ್ಲಿ ಕ್ರೆöÊನ್ ಸಹಾಯದಿಂದ ಬಸ್ಸನ್ನು ತೆರವುಗೊಳಿಸಲಾಯಿತು.

-ಹೆಚ್.ಕೆ. ಜಗದೀಶ್‌ಮಂಚಳ್ಳಿ ಬಳಿ ರಸ್ತೆ ಕುಸಿತ : ಶ್ರೀಮಂಗಲ - ಕುಟ್ಟ ಸಂಪರ್ಕ ಕಡಿತ