ಮಡಿಕೇರಿ, ಜು. ೨೬: ಜಿಲ್ಲೆಯಾದ್ಯಂತ ಮುಂಗಾರಿನ ಆರ್ಭಟ ಮುಂದುವರಿದಿದ್ದು ಧಾರಾಕಾರ ಮಳೆಯಾಗುತ್ತಿವೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ನಿತ್ಯವೂ ಒಂದಲ್ಲಾ ಒಂದು ಸಮಸ್ಯೆ ಎದು ರಾಗುತ್ತಿದೆ. ವ್ಯಾಪಕ ಮಳೆಯಿಂದಾಗಿ ಶುಕ್ರವಾರದಂದು ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ನಿರಂತರವಾಗಿ ಮಳೆಯಾಗುತ್ತಿರುವು ದರಿಂದ ಮತ್ತೆ ನದಿ-ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಮುಂದುವರಿದಿದೆ. ನಗರ, ಪಟ್ಟಣ ಪ್ರದೇಶಗಳಲ್ಲೂ ಆಗಿಂ ದಾಗ್ಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ.

ಶುಕ್ರವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೩.೫೨ ಇಂಚು ಮಳೆ ಸುರಿದಿದೆ. ಗುರುವಾರ ಅಪರಾಹ್ನದ ನಂತರ ಸುರಿದ ಭಾರೀ ಮಳೆ ಮಡಿಕೇರಿ ನಗರದ ನಿವಾಸಿಗಳಲ್ಲಿ ಆತಂಕವುAಟುಮಾಡಿತ್ತು.

ಮಡಿಕೇರಿ ತಾಲೂಕಿನಲ್ಲಿ ೪.೦೯ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಇದು ತಾಲೂಕಿನ ಸರಾಸರಿಯಾಗಿದ್ದು ವಿವಿಧ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲೂ ಸರಾಸರಿ ೩.೧೬ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೪.೮೨ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೫೯ ಇಂಚು ಮಳೆ ದಾಖಲಾಗಿದೆ. ಶಾಂತಳ್ಳಿಗೆ ೮ ಇಂಚು : ಶಾಂತಳ್ಳಿ ಹೋಬಳಿಯಲ್ಲಿ ಕಳೆದ ೨೪ ಗಂಟೆ ಗಳಲ್ಲಿ ೮ ಇಂಚಿನಷ್ಟು ಭಾರೀ ಮಳೆ ಯಾಗಿದೆ. ಭಾಗಮಂಡಲ ಹೋಬಳಿಂ iÀÄಲ್ಲೂ ೭.೨೦ ಇಂಚು ಮಳೆ ಸುರಿದಿದೆ. ನಾಪೋಕ್ಲು ೫.೩೬ ಇಂಚು, ಮಡಿಕೇರಿ ಹೋಬಳಿಯಲ್ಲಿ ೧.೮೮ ಇಂಚು ಹಾಗೂ ಸಂಪಾಜೆಯಲ್ಲಿ ೧.೯೪ ಇಂಚು ಮಳೆಯಾಗಿದೆ. ವೀರಾಜಪೇಟೆ ೩.೧೨, ಅಮ್ಮತ್ತಿ ೩.೨೦, ಹುದಿಕೇರಿ ೫.೩೬, ಶ್ರೀಮಂಗಲ ೬.೧೨, ಪೊನ್ನಂಪೇಟೆ ೨.೬೮, ಬಾಳೆಲೆ ೧.೬೪, ಸೋಮ ವಾರಪೇಟೆ

ನಾಪೋಕ್ಲು: ಮೂರು-ನಾಲ್ಕು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ -ಮಳೆಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಗ್ರಾಮೀಣ ಪ್ರದೇಶದಲ್ಲಿ ಕಡಿತಗೊಂಡಿದೆ. ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಇಲ್ಲಿಗೆ ಸಮೀಪದ ಕಕ್ಕಬೆ ಯವಕಪಾಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗ್ಗೆ ಒಂದು ದಿನದಲ್ಲಿ ೫.೨೦ ಇಂಚು, ಬಲ್ಲಮಾವಟಿ ವ್ಯಾಪ್ತಿಯಲ್ಲಿ ೬.೨೫. ಇಂಚು ಮಳೆ, ನಾಲಡಿಯಲ್ಲಿ ೨೧೨.೦ ಮಿ.ಮಿ., ನೆಲಜಿಯಲ್ಲಿ ೩.೩೮. ಇಂಚು ಮಳೆ ಸುರಿದಿದೆ.

ನಾಪೋಕ್ಲು ೧೨೪.೨ ಮಿ.ಮಿ. ಈ ವರ್ಷ ಇದುವರೆಗೆ ೭೯.೭ ಇಂಚು ಮಳೆ ಸುರಿದಿದ್ದು ಕಳೆದ ವರ್ಷ ಇದೇ ಅವಧಿಗೆ ೫೦.೮ ಇಂಚು ಮಳೆಯಾಗಿತ್ತು. ಒಟ್ಟು ೨೮.೯ ಇಂಚು ಹೆಚ್ಚುವರಿ ಮಳೆ ಸುರಿದಿದೆ.

ಬುಧವಾರ ಸುರಿದ ಧಾರಾಕಾರ ಮಳೆ ಗಾಳಿಯಿಂದ ಕಕ್ಕಬೆ ಕುಂಜಿಲ ಪಂಚಾಯಿತಿ ವ್ಯಾಪ್ತಿಯ ಕೋಡಿಮಣಿಯಂಡ ಪೂವಣ್ಣ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯ ಕೋಡಿಮಣಿಯಂಡ ಬೋಪಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿಗೆ ಸಮೀಪದ ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಬೊಳಿಬಾಣೆ ಎಂಬಲ್ಲಿ ಕಾವೇರಿ ಪ್ರವಾಹದಿಂದ ಜಲಾವೃತವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ..

ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ನಾಪೋಕ್ಲು - ಪಾರಾಣೆ ಮಾರ್ಗವಾಗಿ ವೀರಾಜಪೇಟೆಗೆ ಸಾಗುವ ಬೊಳ್ಳುಮಾಡು ಮುಖ್ಯರಸ್ತೆಯಲ್ಲಿ ಪ್ರವಾಹದಿಂದ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ..

ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿವೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿವೆ. ಅದೇ ರೀತಿ ಪಾರಾಣೆ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿಯೂ ಕೆಲವು ನಾಟಿ ಮಾಡಿದ ಗದ್ದೆಗಳು ಸೇರಿದಂತೆ ಬಹುತೇಕದ ಗದ್ದೆಗಳು ಪ್ರವಾಹದಲ್ಲಿ ಮುಳುಗಡೆಯಾಗಿದೆ.

ಬಿರುಸಿನ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ನಾಪೋಕ್ಲು- ಮೂರ್ನಾಡು ಸಂಪರ್ಕ ರಸ್ತೆಯ ಕೊಟ್ಟಮುಡಿಯ ಕೂಡು ರಸ್ತೆಯ ಬಳಿ ತಗ್ಗು ಪ್ರದೇಶದ ರಸ್ತೆಯಲ್ಲಿ ನೀರುನಿಂತು ಕೆರೆಯಂತಾಗಿದೆ. ನಾಪೋಕ್ಲು- ಬೆಟ್ಟಗೇರಿ ಮುಖ್ಯರಸ್ತೆಯಲ್ಲಿ ಕೊಟ್ಟಮುಡಿ ಕಾವೇರಿ ನದಿ ಬಳಿ ರಸ್ತೆಯ ಬದಿಯಲ್ಲಿ ಅಪಾಯದ ಗುಂಡಿ ಗೋಚರಿಸಿದ್ದು ಜೀವಪಾಯ ಆಗುವ ಮುನ್ನ ದುರಸ್ತಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನಾಪೋಕ್ಲು ವ್ಯಾಪ್ತಿಯ ಬಹುತೇಕ ರಸ್ತೆಗಳಲ್ಲಿ ಹೊಂಡಗಳಾಗಿದ್ದು ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿ ಕಡು ಬಳಿ ಮೋರಿ ಕುಸಿದು ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡವಾಗಿ ಸಂಚಾರಕ್ಕೆ ತೊಡಕಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ಇದೀಗ ಜಲ್ಲಿ ಸುರಿದು ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಭಾಗದಲ್ಲಿ ಎರಡು ಗದ್ದೆಗಳ ನಡುವಿನ ರಸ್ತೆಯನ್ನು ತುರ್ತಾಗಿ ದುರಸ್ತಿಪಡಿಸಬೇಕಾದ ಅಗತ್ಯವಿದೆ. - ದುಗ್ಗಳಕುಶಾಲನಗರ: ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ೧೦ ಅಡಿಗಳಷ್ಟು ನೀರು ಏರಿಕೆ ಕಂಡು ಬಂದಿದೆ. ನದಿತಟದ ಎರಡು ಭಾಗದ ತಗ್ಗು ಪ್ರದೇಶದ ಹೊಲ ಗದ್ದೆಗಳಲ್ಲಿ ನೀರು ತುಂಬಿದ ದೃಶ್ಯ ಕಂಡು ಬಂದಿದೆ.

ಸಿದ್ದಾಪುರ: ಧಾರಾಕಾರ ಮಳೆ, ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿರುವ ಘಟನೆ ಅಮ್ಮತ್ತಿ ಹೋಬಳಿಯ ಕಾವಾಡಿ ಗ್ರಾಮದಲ್ಲಿ ನಡೆದಿದೆ. ಕಾವಾಡಿ ನಿವಾಸಿ. ಎನ್.ಎಂ. ಅಯ್ಯಪ್ಪ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಹಾನಿಯಾಗಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರುಸುಂಟಿಕೊಪ್ಪ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪನ್ಯ ನಿವಾಸಿ ಸುಂದರ (ಬೇಡು) ಅವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಮನೆ ಹಾಗೂ ಮನೆಯ ಮೇಲ್ಛಾವಣಿಯ ಶೀಟುಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ವಿಷಯವರಿತ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಮತ್ತು ಆಲಿಕುಟ್ಟಿ ಸ್ಥಳಕ್ಕೆ ಆಗಮಿಸಿ ಹೊಸ ಶೀಟುಗಳನ್ನು ತಕ್ಷಣದಲ್ಲಿ ಅಳವಡಿಸುವ ಮೂಲಕ ಸ್ಪಂದಿಸಿದ್ದಾರೆ.

ಪನ್ಯ ಸಮೀಪದ ಸ್ವಸ್ಥ ಶಾಲೆ ಸಮೀಪದ ನಿವಾಸಿ ಆಲ್ಪೆರ್ಡ್ ಡಿಸೋಜ ಎಂಬವರ ಮನೆಯ ಮೇಲೆ ಟಿ.ಸಿ.ಎಲ್ ತೋಟದ ಮರವೊಂದರ ರಂಬೆಯೊAದು ಮುರಿದು ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿ ಶೀಟ್‌ಗಳು ಹಾನಿಗೊಂಡಿವೆ. ಮಡಿಕೇರಿ: ಯಡವನಾಡು ಗ್ರಾಮದ ಯಾಲದಾಳು ನಿತಿನ್ ಅವರ ತೋಟದಲ್ಲಿ ಸುಮಾರು ೧೨ ಅಡಿ ಉದ್ದದ ಹೆಬ್ಬಾವು ಸೇರಿಕೊಂಡಿದ್ದು, ರಕ್ಷಣೆ ಮಾಡಲಾಯಿತು. ಬಾರನ ಶೇಖರ್ ಅವರು ಹೆಬ್ಬಾವನ್ನು ಹಿಡಿದಿದ್ದು ಅರಣ್ಯ ಇಲಾಖೆ ಡಿ.ಆರ್.ಎಫ್.ಒ ಚಂದ್ರೇಶ್ ಹಾಗೂ ಯಡವನಾಡು ಮೀಸಲು ಅರಣ್ಯದ ಅರಣ್ಯ ರಕ್ಷಕ ಭೀಮಣ್ಣ ಅವರ ನೇತೃತ್ವದಲ್ಲಿ ಅರಣ್ಯಕ್ಕೆ ಬಿಡಲಾಯಿತು.

ಕತ್ತಲಲ್ಲಿ ಪೆರಾಜೆ ಗ್ರಾಮ

ಮಡಿಕೇರಿ : ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಭಾಗಗಳಿಗೆ ಕಳೆದ ಒಂದು ವಾರದಿಂದ ವಿದ್ಯುತ್ ಪೂರೈಕೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯ ಕುಂಡಾಡು, ಬಂಗಾರಕೋಡಿ , ನಿಡ್ಯಮಲೆ ಕುಂಬಳಚೇರಿ, ಅಮೆಚೂರು, ಪೆರುಮುಂಡ, ಕುಂದಲ್ಪಾಡಿ ಊರಿನವರು ತಮ್ಮ ಸಮಸ್ಯೆಗಳನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ದೂರವಾಣಿ ಸಂಖ್ಯೆಗಳಿಗೆ ಹೇಳಿಕೊಂಡರೂ ಪರಿಹಾರ ದೊರಕುತ್ತಿಲ್ಲ.

ಪೆರಾಜೆ ಗ್ರಾಮಕ್ಕೆ (ಮೆಸ್ಕಾಂ) ಸುಳ್ಯ ತಾಲೂಕಿನಿಂದ ವಿದ್ಯುತ್ ಪೂರೈಕೆ ಆಗುತ್ತಿದ್ದು, ವಿದ್ಯುತ್ ಶುಲ್ಕ ಚೆಸ್ಕಾಂಗೆ ಪಾವತಿಸಬೇಕಾಗಿದೆ. ಇಲ್ಲಿಯ ಅಕ್ಕಪಕ್ಕದ ಗ್ರಾಮಗಳಲ್ಲಿ ಕರೆಂಟ್ ಇದ್ದರೂ ಪೆರಾಜೆ ಗ್ರಾಮದಲ್ಲಿ ವಿದ್ಯುತ್ ಕಂಬ ಸೇರಿದಂತೆ ಲೈನ್ ಕ್ಲಿಯರ್ ಇದ್ದರೂ ಗ್ರಾಮಕ್ಕೆ ಮಾತ್ರ ಕರೆಂಟ್ ಬರುವುದಿಲ್ಲ. ಜನರು ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಚಾರ್ಜ್ ಮಾಡಲು ನೆರೆಯ ಗ್ರಾಮಗಳಿಗೆ ಹೋಗಿ ಚಾರ್ಜ್ ಮಾಡುವ ಅನಿವಾರ್ಯತೆ ಎದುರಾಗಿದೆ. ಶಾಲಾ ಮಕ್ಕಳು ಮತ್ತು ಆನ್‌ಲೈನ್ ಉದ್ಯೋಗಿಗಳು ಕರೆಂಟ್ ಇಲ್ಲದೆ ರೋಸಿಹೋಗಿದ್ದಾರೆ.

ಪೆರಾಜೆ ಗ್ರಾಮಕ್ಕೆ ಒಬ್ಬ ಲೈನ್ ಮ್ಯಾನ್ ಹಾಗೂ ಎರಡು ಜನ ಮಾನ್ಸೂನ್ ಗ್ಯಾಂಗ್ ಮ್ಯಾನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರು ಫೋನ್ ಮಾಡಿದಾಗ ಲೈನ್ ಮ್ಯಾನ್ ಮತ್ತು ಜೆ.ಇ ಅವರ ಗಮನಕ್ಕೆ ತಂದರೂ ನೀವು ಯಾರಲ್ಲಿ ಬೇಕಾದರೂ ದೂರು ಕೊಟ್ಟುಕೊಳ್ಳಿ ನಮಗೇನು ಎಂದು ಉಡಾಫೆಯ ಉತ್ತರ ಕೊಡುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪೆರಾಜೆ ಗ್ರಾಮದ ಎಲ್ಲಾ ಭಾಗಗಳಿಗೆ ವಿದ್ಯುತ್ ಸಂಪರ್ಕ ಸಮಸ್ಯೆ ಬಗೆಹರಿಸಲು ವಿಫಲವಾದಲ್ಲಿ ತಾ. ೨೯ ರಂದು ರಸ್ತೆ ತಡೆ ಹಾಗೂ ಚೆಸ್ಕಾಂ ಕಛೇರಿ ಸಂಪಾಜೆಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಯವರು ಎಚ್ಚರಿಕೆ ನೀಡಿದ್ದಾರೆ.

ಕೂಡಿಗೆ : ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಒಳನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ಮಟ್ಟದ ಆಧಾರದ ಮೇಲೆ ಮತ್ತು ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನದಿಗೆ ೨೦. ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದರು.

ನದಿಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಮುಂಭಾಗದ ಕಿರು ಸೇತುವೆ ನೀರಿನಿಂದ ಮುಳುಗಡೆಗೊಂಡಿದೆ.ಸುAಟಿಕೊಪ್ಪ: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಿಕೇತನ ವಿದ್ಯಾಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ಕೊಡಗರಹಳ್ಳಿ -ಕಂಬಿಬಾಣೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್, ಸದಸ್ಯ ಸುನಿಲ್ ಕುಮಾರ್, ಸಿಬ್ಬಂದಿಗಳಾದ ಧನಂಜಯ,ಸುರೇಶ್ ,ಟಾಸ್ಕ್ ಫೋರ್ಸ್ ಸಮಿತಿಯ ಹಂಸ, ಸಾಧಿಕ್, ಜಗ್ಗ ,ಜಗದೀಶ್ ಮುಂತಾದವರು ಮರವನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕತ್ತಲಲ್ಲಿ ಪೆರಾಜೆ ಗ್ರಾಮ

ಮಡಿಕೇರಿ : ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಭಾಗಗಳಿಗೆ ಕಳೆದ ಒಂದು ವಾರದಿಂದ ವಿದ್ಯುತ್ ಪೂರೈಕೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯ ಕುಂಡಾಡು, ಬಂಗಾರಕೋಡಿ , ನಿಡ್ಯಮಲೆ ಕುಂಬಳಚೇರಿ, ಅಮೆಚೂರು, ಪೆರುಮುಂಡ, ಕುಂದಲ್ಪಾಡಿ ಊರಿನವರು ತಮ್ಮ ಸಮಸ್ಯೆಗಳನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ದೂರವಾಣಿ ಸಂಖ್ಯೆಗಳಿಗೆ ಹೇಳಿಕೊಂಡರೂ ಪರಿಹಾರ ದೊರಕುತ್ತಿಲ್ಲ.

ಪೆರಾಜೆ ಗ್ರಾಮಕ್ಕೆ (ಮೆಸ್ಕಾಂ) ಸುಳ್ಯ ತಾಲೂಕಿನಿಂದ ವಿದ್ಯುತ್ ಪೂರೈಕೆ ಆಗುತ್ತಿದ್ದು, ವಿದ್ಯುತ್ ಶುಲ್ಕ ಚೆಸ್ಕಾಂಗೆ ಪಾವತಿಸಬೇಕಾಗಿದೆ. ಇಲ್ಲಿಯ ಅಕ್ಕಪಕ್ಕದ ಗ್ರಾಮಗಳಲ್ಲಿ ಕರೆಂಟ್ ಇದ್ದರೂ ಪೆರಾಜೆ ಗ್ರಾಮದಲ್ಲಿ ವಿದ್ಯುತ್ ಕಂಬ ಸೇರಿದಂತೆ ಲೈನ್ ಕ್ಲಿಯರ್ ಇದ್ದರೂ ಗ್ರಾಮಕ್ಕೆ ಮಾತ್ರ ಕರೆಂಟ್ ಬರುವುದಿಲ್ಲ. ಜನರು ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಚಾರ್ಜ್ ಮಾಡಲು ನೆರೆಯ ಗ್ರಾಮಗಳಿಗೆ ಹೋಗಿ ಚಾರ್ಜ್ ಮಾಡುವ ಅನಿವಾರ್ಯತೆ ಎದುರಾಗಿದೆ. ಶಾಲಾ ಮಕ್ಕಳು ಮತ್ತು ಆನ್‌ಲೈನ್ ಉದ್ಯೋಗಿಗಳು ಕರೆಂಟ್ ಇಲ್ಲದೆ ರೋಸಿಹೋಗಿದ್ದಾರೆ.

ಪೆರಾಜೆ ಗ್ರಾಮಕ್ಕೆ ಒಬ್ಬ ಲೈನ್ ಮ್ಯಾನ್ ಹಾಗೂ ಎರಡು ಜನ ಮಾನ್ಸೂನ್ ಗ್ಯಾಂಗ್ ಮ್ಯಾನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರು ಫೋನ್ ಮಾಡಿದಾಗ ಲೈನ್ ಮ್ಯಾನ್ ಮತ್ತು ಜೆ.ಇ ಅವರ ಗಮನಕ್ಕೆ ತಂದರೂ ನೀವು ಯಾರಲ್ಲಿ ಬೇಕಾದರೂ ದೂರು ಕೊಟ್ಟುಕೊಳ್ಳಿ ನಮಗೇನು ಎಂದು ಉಡಾಫೆಯ ಉತ್ತರ ಕೊಡುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪೆರಾಜೆ ಗ್ರಾಮದ ಎಲ್ಲಾ ಭಾಗಗಳಿಗೆ ವಿದ್ಯುತ್ ಸಂಪರ್ಕ ಸಮಸ್ಯೆ ಬಗೆಹರಿಸಲು ವಿಫಲವಾದಲ್ಲಿ ತಾ. ೨೯ ರಂದು ರಸ್ತೆ ತಡೆ ಹಾಗೂ ಚೆಸ್ಕಾಂ ಕಛೇರಿ ಸಂಪಾಜೆಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಯವರು ಎಚ್ಚರಿಕೆ ನೀಡಿದ್ದಾರೆ.

ವೀರಾಜಪೇಟೆ: ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ವೀರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ ಕಾಲೋನಿಯ ನಿವಾಸಿ ದಿ. ಕಾಶಿ ಎಂಬವರ ಪತ್ನಿ ಕಾಂತಿ ಅವರ ಮನೆಯ ಗೋಡೆಯ ಒಂದು ಪಾರ್ಶ್ಪ ಕುಸಿದು ಬಿದ್ದಿದೆ.

ಕೂಲಿ ಅವಲಂಬಿತರಾಗಿ ಜೀವನ ಸಾಗಿಸುತ್ತಿರುವ ವೃದ್ಧೆಗೆ ಮನೆ ಆಸರೆಯಗಿತ್ತು. ಇದೀಗ ಮನೆಯ ಗೋಡೆ ಕುಸಿದು ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.