ಮಡಿಕೇರಿ, ಜು. ೨೭: ವಾಯು-ವರುಣನ ಅಬ್ಬರಕ್ಕೆ ಇಡೀ ಕೊಡಗು ಜಿಲ್ಲೆ ತತ್ತರಿಸುವಂತಾಗಿದ್ದು ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿವೆ. ಕಾವೇರಿ-ಲಕ್ಷö್ಮಣತೀರ್ಥ ಸೇರಿದಂತೆ ಎಲ್ಲಾ ನದಿ-ತೊರೆಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಸಂಪರ್ಕಗಳೂ ಕಡಿತಗೊಂಡAತಾಗಿವೆ. ಮಳೆಯೊಂದಿಗೆ ನಿರಂತರವಾಗಿ ಕಂಡುಬರುತ್ತಿರುವ ಗಾಳಿಯೂ ಕೆಲದಿನಗಳಿಂದ ಮುಂದುವರಿಯುತ್ತಲೇ ಇದ್ದು, ಜನಾಂತಕವನ್ನು ಹೆಚ್ಚಿಸುವಂತೆ ಮಾಡಿದೆ. ಶುಕ್ರವಾರದಂದು ಇಡೀ ದಿನ ಗಾಳಿ-ಮಳೆ ನಿರಂತರವಾಗಿದ್ದು, ಶನಿವಾರ ಒಂದಷ್ಟು ಮಳೆ ಕಡಿಮೆಯಾದಂತೆ ಕಂಡುಬAದಿತಾದರೂ ಮಳೆಗಾಲದ ಸನ್ನಿವೇಶ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ನಾಪೋಕ್ಲು, ಮೂರ್ನಾಡು ಸಂಪರ್ಕದ ಕೊಟ್ಟಮುಡಿ ಜಂಕ್ಷನ್, ಬೊಳಿಬಾಣೆಯಲ್ಲಿ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ವಾಹನಗಳು ಬದಲಿ ಮಾರ್ಗದ ಮೂಲಕ ಸಂಚರಿಸುವAತಾಗಿತ್ತು. ಬೇತ್ರಿ, ಸಿದ್ದಾಪುರ ಕರಡಿಗೋಡು, ಕುಶಾಲನಗರ, ಕಣಿವೆ ವ್ಯಾಪ್ತಿಯಲ್ಲೂ ಕಾವೇರಿಯ ಹರಿವು ಆತಂಕಕಾರಿ ಎನಿಸಿದೆ. ಶನಿವಾರ ಒಂದಷ್ಟು ಮಳೆ ಇಳಿಮುಖವಾಗಿತ್ತಾದರೂ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ.

ಭಾಗಮಂಡಲ ತ್ರಿವೇಣಿ ಸಂಗಮವೂ ಜಲಾವೃತಗೊಂಡಿದೆ. ಶಾಲಾ-ಕಾಲೇಜುಗಳು ಶನಿವಾರವೂ ಮುಚ್ಚಲ್ಪಟ್ಟಿದ್ದವು. ವ್ಯಾಪಕ ಗಾಳಿ ಮಳೆಯಿಂದಾಗಿ ಜನಸಂಚಾರವೂ ವಿರಳವಾಗಿದೆ. ಇನ್ನೂ ಕೆಲದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಜಿಲ್ಲೆಯಲ್ಲಿ ಪದೇಪದೇ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಹಲವಾರು ದಿನಗಳಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇನ್ನೂ ಸರಿಯಾಗಿಲ್ಲ. ಮರಗಳು ಬೀಳುವುದು, ಮನೆ ಜಖಂ, ಮತ್ತಿತರ ಹಾನಿಗಳು ವರದಿಯಾಗುತ್ತಲೇ ಇವೆ.

ಜಿಲ್ಲೆಯಲ್ಲಿ ಸರಾಸರಿ ೩.೪೦ ಇಂಚು ಮಳೆ

ಶನಿವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೩.೪೦ ಇಂಚುಗಳಷ್ಟು ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪ ಇಂಚು, ಸೋಮವಾರಪೇಟೆ ೫.೨೫, ವೀರಾಜಪೇಟೆ ೧.೮೩, ಪೊನ್ನಂಪೇಟೆ ೩.೧೭ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨.೭೨ ಇಂಚು ಸರಾಸರಿ ಮಳೆಯಾಗಿದೆ.

ಹೋಬಳಿವಾರು ವಿವರ

ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಯಲ್ಲಿ ೭.೫೨, ನಾಪೋಕ್ಲು ೪.೪೫, ಭಾಗಮಂಡಲ ೪.೪೫, ಸಂಪಾಜೆ ೩.೧೮, ವೀರಾಜಪೇಟೆ ೨.೬೩ ಹಾಗೂ ಅಮ್ಮತ್ತಿ ಹೋಬಳಿಯಲ್ಲಿ ೧.೦೪ ಇಂಚು ಮಳೆಯಾಗಿದೆ.

ಪೊನ್ನಂಪೇಟೆ ೨.೮೦, ಹುದಿಕೇರಿ ೫.೨೦, ಶ್ರೀಮಂಗಲ ೪.೦೮, ಬಾಳೆಲೆ ೦.೬೦, ಸೋಮವಾರಪೇಟೆ ೫.೯೪, ಶನಿವಾರಸಂತೆ ೪.೩೬, ಕೊಡ್ಲಿಪೇಟೆ ೩.೨೦, ಸುಂಟಿಕೊಪ್ಪ ೪.೪೮ ಹಾಗೂ ಕುಶಾಲನಗರ ಹೋಬಳಿಯಲ್ಲಿ ೧ ಇಂಚು ಮಳೆ ದಾಖಲಾಗಿದೆ.

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕರಡ ಕೀಮಲೆ ಕಾಡುವಿನ ಸಿ.ಕೆ. ಉಲ್ಲಾಸ್ ಎಂಬುವವರ ವಾಸದ ಮನೆಯ ಶೌಚಾಲಯದ ಗೋಡೆ ಭಾರೀ ಗಾಳಿ-ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಂಜಯ್, ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರಾವತಿ ಭೇಟಿ ನೀಡಿ ಪರಿಶೀಲಿಸಿದರು.ಕರಿಕೆ: ಗ್ರಾಮದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಹಾಗೂ ಬಿರುಗಾಳಿಯಿಂದ ಗ್ರಾಮದ ಹಲವೆಡೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಂಡತ್ತಿಕಾನ, ಫಾರೆಸ್ಟ್ ಐಬಿ ರಸ್ತೆ ಗಳ ಇಕ್ಕೆಲಗಳಲ್ಲಿ ಮರ ಮುರಿದು ಹತ್ತಾರು ಕಂಬಗಳು, ತಂತಿಗಳು ತುಂಡಾಗಿದ್ದು, ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದಿಂದ ಸಂಪರ್ಕ ಕಲ್ಪಿಸಲು ಹಗಲು ರಾತ್ರಿ ಶ್ರಮಪಡುತ್ತಿದ್ದು, ಬಿರುಗಾಳಿಯಿಂದ ಪದೇ ಪದೆ ಮರಗಳು ಮುರಿದು ಬೀಳುವ ಪರಿಣಾಮ ಸಂಪರ್ಕ ಕಷ್ಟ ಸಾಧ್ಯವಾಗಿದೆ.ಸುಂಟಿಕೊಪ್ಪ: ಸುಂಟಿಕೊಪ್ಪ ಪನ್ಯ ತೋಟದ ಸಮೀಪ ಮಾದಾಪುರ ಹೆದ್ದಾರಿಯಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚಾರಕ್ಕೆ ತಡೆಯುಂಟಾಯಿತು. ನಂತರ ಸಾರ್ವಜನಿಕರು ಕೂಲಿ ಕಾರ್ಮಿಕರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಳಿ ಮಳೆಗೆ ೭ನೇ ಹೊಸಕೋಟೆ ಅಂದಗೋವೆ ರಸ್ತೆಯಲ್ಲಿ ಮರವೊಂದು ಬಿದ್ದು ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ಹರದೂರು ಪಂಚಾಯಿತಿ ಗುಂಡುಗುಟ್ಟಿ ಶಾಲೆ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಕಾಂಡನಕೊಲ್ಲಿ ಲಕ್ಷö್ಮಣ ಅವರ ಮನೆ ಬಳಿ ಮರ ಬಿದ್ದಿದೆ. ಕಲ್ಲೂರು ಗ್ರಾಮದಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಅಪಾರ ನಷ್ಟ ಸಂಭವಿಸಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಕಂಬಗಳು ಮುರಿದಿದ್ದು, ಭಾರೀ ನಷ್ಟ ಸಂಭವಿಸಿದೆ ಎಂದು ಸೆಸ್ಕ್ ಅಭಿಯಂತರ ಲವಕುಮಾರ್ ಮಾಹಿತಿ ನೀಡಿದ್ದಾರೆ.ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಪ್ರವಾಹಪೀಡಿತ ತಗ್ಗು ಪ್ರದೇಶದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕರಡಿಗೋಡು ಗ್ರಾಮದ ನದಿ ತೀರದ ಸಮೀಪವಿರುವ ಗದ್ದೆಗಳು ಜಲಾವೃತಗೊಂಡಿವೆ.

ನೀರಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಪೈಸಾರಿಗೆ ತೆರಳುವ ಕಿರು ಸೇತುವೆ ನೀರಿನಿಂದ ಮುಳುಗಿತ್ತು. ತಗ್ಗು ಪ್ರದೇಶದ ನದಿ ತೀರದ ನಿವಾಸಿ ಸ್ಟಾö್ಯಂಡ್ಲಿ ಎಂಬವರ ಮನೆಯೊಳಗೆ ನೀರು ನುಗ್ಗಿದ್ದು ಯಾವುದೇ ಅನಾಹುತಗಳು ಸಂಭವಿಸಲಿಲ್ಲ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅವರ ಆದೇಶದ ಮೇರೆಗೆ ಪ್ರವಾಹ ಪೀಡಿತ ಕರಡಿಗೋಡು ಗ್ರಾಮಕ್ಕೆ ಗ್ರಾಮ ಆಡಳಿತ ಅಧಿಕಾರಿ ಹೋಮಪ್ಪ ಬಣಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ( ೫ನೇ ಪುಟಕ್ಕೆ)

ಸಿದ್ದಾಪುರ: ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿರುವ ಘಟನೆ ಅಮ್ಮತ್ತಿ ಸಮೀಪದ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.

ಕಳತ್ಮಾಡು ಗ್ರಾಮದ ನಿವಾಸಿ ಧರ್ಮಾವತಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಹಸೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕರಿಕೆ: ಗ್ರಾಮದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಹಾಗೂ ಬಿರುಗಾಳಿಯಿಂದ ಗ್ರಾಮದ ಹಲವೆಡೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಂಡತ್ತಿಕಾನ, ಫಾರೆಸ್ಟ್ ಐಬಿ ರಸ್ತೆ ಗಳ ಇಕ್ಕೆಲಗಳಲ್ಲಿ ಮರ ಮುರಿದು ಹತ್ತಾರು ಕಂಬಗಳು, ತಂತಿಗಳು ತುಂಡಾಗಿದ್ದು, ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದಿಂದ ಸಂಪರ್ಕ ಕಲ್ಪಿಸಲು ಹಗಲು ರಾತ್ರಿ ಶ್ರಮಪಡುತ್ತಿದ್ದು, ಬಿರುಗಾಳಿಯಿಂದ ಪದೇ ಪದೆ ಮರಗಳು ಮುರಿದು ಬೀಳುವ ಪರಿಣಾಮ ಸಂಪರ್ಕ ಕಷ್ಟ ಸಾಧ್ಯವಾಗಿದೆ.ನಾಪೋಕ್ಲು: ಬಿರುಸಿನ ಮಳೆ ಗಾಳಿಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಮೀಪದ ಚೋನಕೆರೆಯ ಕುಂಬAಡ ಆನಂದ ಮತ್ತು ತಿಮ್ಮಯ್ಯ ಅವರ ತೋಟದ ಲೈನ್ ಮನೆಗೆ ಪಕ್ಕದ ತೋಟದಲ್ಲಿದ್ದ ಭಾರೀ ಗಾತ್ರದ ಮರ ಮುರಿದು ಬಿದ್ದು ಹಾನಿ ಸಂಭವಿಸಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರತೀಪ ಬಿ.ಎಂ. ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿದರು. ಸುಂಟಿಕೊಪ್ಪ: ಸುಂಟಿಕೊಪ್ಪ ಪನ್ಯ ತೋಟದ ಸಮೀಪ ಮಾದಾಪುರ ಹೆದ್ದಾರಿಯಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿ ಸುಮಾರು ಒಂದು ಗಂಟೆ ಕಾಲ ಸಂಚಾರಕ್ಕೆ ತಡೆಯುಂಟಾಯಿತು. ನಂತರ ಸಾರ್ವಜನಿಕರು ಕೂಲಿ ಕಾರ್ಮಿಕರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಳಿ ಮಳೆಗೆ ೭ನೇ ಹೊಸಕೋಟೆ ಅಂದಗೋವೆ ರಸ್ತೆಯಲ್ಲಿ ಮರವೊಂದು ಬಿದ್ದು ಮನೆಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ಹರದೂರು ಪಂಚಾಯಿತಿ ಗುಂಡುಗುಟ್ಟಿ ಶಾಲೆ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಕಾಂಡನಕೊಲ್ಲಿ ಲಕ್ಷö್ಮಣ ಅವರ ಮನೆ ಬಳಿ ಮರ ಬಿದ್ದಿದೆ. ಕಲ್ಲೂರು ಗ್ರಾಮದಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಅಪಾರ ನಷ್ಟ ಸಂಭವಿಸಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ಕಂಬಗಳು ಮುರಿದಿದ್ದು, ಭಾರೀ ನಷ್ಟ ಸಂಭವಿಸಿದೆ ಎಂದು ಸೆಸ್ಕ್ ಅಭಿಯಂತರ ಲವಕುಮಾರ್ ಮಾಹಿತಿ ನೀಡಿದ್ದಾರೆ.ಮೂರ್ನಾಡು: ಮೂರ್ನಾಡು ಸಮೀಪ ಹೊದ್ದೂರು ಗ್ರಾಮದ ಸುಬ್ರಮಣಿ ಕೆ.ಎ. ಎಂಬವರ ಮನೆಯ ಮೇಲ್ಛಾವಣಿ ಗಾಳಿ-ಮಳೆಯ ರಭಸಕ್ಕೆ ಧರೆಗುರುಳಿದೆ.ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಪ್ರವಾಹಪೀಡಿತ ತಗ್ಗು ಪ್ರದೇಶದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕರಡಿಗೋಡು ಗ್ರಾಮದ ನದಿ ತೀರದ ಸಮೀಪವಿರುವ ಗದ್ದೆಗಳು ಜಲಾವೃತಗೊಂಡಿವೆ.

ನೀರಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ಪೈಸಾರಿಗೆ ತೆರಳುವ ಕಿರು ಸೇತುವೆ ನೀರಿನಿಂದ ಮುಳುಗಿತ್ತು. ತಗ್ಗು ಪ್ರದೇಶದ ನದಿ ತೀರದ ನಿವಾಸಿ ಸ್ಟಾö್ಯಂಡ್ಲಿ ಎಂಬವರ ಮನೆಯೊಳಗೆ ನೀರು ನುಗ್ಗಿದ್ದು ಯಾವುದೇ ಅನಾಹುತಗಳು ಸಂಭವಿಸಲಿಲ್ಲ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅವರ ಆದೇಶದ ಮೇರೆಗೆ ಪ್ರವಾಹ ಪೀಡಿತ ಕರಡಿಗೋಡು ಗ್ರಾಮಕ್ಕೆ ಗ್ರಾಮ ಆಡಳಿತ ಅಧಿಕಾರಿ ಹೋಮಪ್ಪ ಬಣಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ( ೫ನೇ ಪುಟಕ್ಕೆ)ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ವ್ಯಾಪ್ತಿಯ ಹರೀಶ್ ಎಂಬವರ ವಾಸದ ಮನೆಗೆ ಮಳೆ ಗಾಳಿಯಿಂದ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ.

ಸಿದ್ದಾಪುರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಅಲ್ಲದೆ ಕೆಲವು ಮರಗಳು ಕಾಫಿ ತೋಟಗಳ ಒಳಗೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಳೆದೆರಡು ದಿನಗಳಿಂದ ಅಮ್ಮತಿ ಹಾಗೂ ಬಾಡಗ ಬಾಣಂಗಾಲ ಸಿದ್ದಾಪುರ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸರಬರಾಜಿಗೂ ಸಮಸ್ಯೆ ಉಂಟಾಗಿತ್ತು. ಕೆಲವು ಗ್ರಾಮಗಳು ಎರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿದ್ದವು. ಚೆಸ್ಕಾಂ ಸಿಬ್ಬಂದಿ ಗಾಳಿ ಮಳೆಯನ್ನು ಲೆಕ್ಕಿಸದೆ ವಿದ್ಯುತ್ ತಂತಿಗಳನ್ನು ದುರಸ್ತಿಪಡಿಸಲು ಹಾಗೂ ಮರಗಳನ್ನು ತೆರವುಗೊಳಿಸಲು ಹರಸಾಹಸ ಪಟ್ಟ ದೃಶ್ಯ ಕಂಡು ಬಂತು. ಹಳೆಯ ವಿದ್ಯುತ್ ಕಂಬಗಳು ಅಮ್ಮತ್ತಿ ಭಾಗದಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಇದೀಗ ಚೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿದ್ದು ಮಳೆಯ ಪರಿಣಾಮದಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ. ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರು ಗ್ರಾಮದ ಬೊಳಿಬಾಣೆ ಎಂಬಲ್ಲಿ ಶುಕ್ರವಾರದಿಂದ ರಸ್ತೆ ಕಾವೇರಿ ಪ್ರವಾಹದಿಂದ ಜಲಾವೃತವಾಗಿದೆ. ವಾಹನ ಸಂಚಾರ ಸ್ಥಗಿತಗೊಂಡ ಕಾರಣ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ತೆರಳುತ್ತಿದೆ. ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತ ಶನಿವಾರವು ಮುಂದುವರೆದಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಗದ್ದೆಗಳು, ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿ ಬಹುತೇಕ ಜಲಾವೃತವಾಗಿದೆ.

ಇಲ್ಲಿಗೆ ಸಮೀಪದ ಕರಡ ಗ್ರಾಮದ ಉಲ್ಲಾಸ್ ಎಂಬವರ ವಾಸದ ಮನೆಯ ಮೇಲ್ಛಾವಣಿ ಹಾಗೂ ಮನೆಯ ಗೋಡೆ ಮಳೆ ಗಾಳಿಯಿಂದಾಗಿ ಶುಕ್ರವಾರ ರಾತ್ರಿ ಹಾನಿಗೊಳಗಾಗಿದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಇಲ್ಲಿಗೆ ಸಮೀಪದ ಹಳೆತಾಲೂಕು ನಿವಾಸಿ ಎಂ.ಎಸ್. ಇಬ್ರಾಹಿಂ ಎಂಬವರ ಕಟ್ಟಡದಲ್ಲಿ ಹೊಟೇಲ್ ನಡೆಸುತ್ತಿದ್ದ ಅಬೂಬಕ್ಕರ್ (ಹೌಕು) ಎಂಬವರ ಹೊಟೇಲ್ ರೂಮಿನ ಛಾವಣಿಗೆ ಅಳವಡಿಸಿದ್ದ ಶೀಟುಗಳು ಹಾರಿಹೋಗಿವೆ.ಶನಿವಾರಸಂತೆ: ಸಮೀಪದ ಗೌಡಳ್ಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದೆರೆಡು ದಿನಗಳಿಂದ ಮಳೆ-ಗಾಳಿಯ ಪ್ರಮಾಣ ಅಧಿಕವಾಗಿದ್ದು, ಶನಿವಾರ ಬೆಳಿಗ್ಗೆ ಜಯಪ್ಪ ಎಂಬವರ ಆಟೋ ಮೇಲೆ ವಿದ್ಯುತ್ ಕಂಬವೊAದು ಮುರಿದು ಬಿದ್ದಿದೆ.ಚೆಟ್ಟಳ್ಳಿ: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನತೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮಳೆಗಾಳಿಯ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಸುಂಟಿಕೊಪ್ಪದವರೆಗೆ ಈರಳೆ, ಬಕ್ಕ ಹಾಗೂ ಹಲವೆಡೆ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ೨೦ಕ್ಕೂ ಅಧಿಕ ಕಂಬಗಳು ತುಂಡಾಗಿವೆ. ಸ್ಥಳೀಯ ಚೆಸ್ಕಾಂ ಸಿಬ್ಬಂದಿಯೊAದಿಗೆ ಹೊರಗಿನಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ಮುರಿದ ಕಂಬಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದೆ. ಹಲವೆಡೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆಯಾದರೂ ನಿರಂತರವಾಗಿ ಮರಗಳು ಕಂಬಗಳ ಮೇಲೆ ಬೀಳುವ ಮೂಲಕ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಚೆಟ್ಟಳ್ಳಿ ವಿದ್ಯುತ್ ಇಲಾಖೆಯ ಜೆಇ ಮನುಕುಮಾರ್ ತಿಳಿಸಿದ್ದಾರೆ.

ಐಗೂರು: ಐಗೂರು, ಹರದೂರು ಭಾಗದಲ್ಲಿ ನಿರಂತರ ಮರಗಳು ಬೀಳುವುದರ ಜೊತೆಗೆ ಕೆಲವು ಭಾಗಗಳಲ್ಲಿ ನೀರು ಇಳಿಮುಖವಾದರೂ ವಾಸಿಸುವ ಮನೆಗಳು ಇನ್ನು ಜಲಾವೃತಗೊಂಡಿವೆ.

ಚೋರನ ಹೊಳೆಯ ನೀರಿನ ಮಟ್ಟ ಸ್ವಲ್ಪ ಇಳಿಮುಖಗೊಂಡಿದೆ. ಆದರೆ ಗ್ರಾಮಗಳಿಗೆ ಇನ್ನೂ ವಿದ್ಯುತ್ತಿನ ಆಗಮನ ವಾಗದೆ ಐಗೂರು, ಮಾದಾಪುರ, ಹರದೂರು, ಗ್ರಾಮಗಳು ಸಂಪೂರ್ಣ ಸ್ತಬ್ಧವಾಗಿದ್ದು, ಎಲ್ಲಾ ಕೆಲಸ ಕಾರ್ಯಗಳು ಸ್ತಬ್ಧವಾಗಿದೆ.ಈ ವ್ಯಾಪ್ತಿಯಲ್ಲಿ ಇನ್ನೂ ಅಲ್ಲಲ್ಲಿ ಮನೆಗಳಿಗೆ ಹಾನಿಗಳು ಸಂಭವಿಸುತ್ತಿದ್ದು, ಹರದೂರು ಗ್ರಾಂ. ಪಂ. ವ್ಯಾಪ್ತಿಯ ಕುಂಬಾರ ಬಾಣೆಯ ಸರಸ್ವತಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆ ಜಖಂಗೊAಡಿದೆ. ಮನೆಯ ಮೇಲ್ಛಾವಣಿಯ ಶೀಟುಗಳಿಗೆ ಹಾನಿ ಸಂಭವಿಸಿದೆ. ಇದರ ಜೊತೆಗೆ ಇದೇ ವ್ಯಾಪ್ತಿಯ ಹೊಸ ತೋಟದ ನಿವಾಸಿ ರತ್ನ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆಯ ಗೋಡೆಗಳಿಗೂ ಮೇಲ್ಚಾವಣಿಗೂ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಈ ಎರಡು ಘಟನೆಗಳಲ್ಲಿ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ದೀಪಿಕಾ, ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ ಭೇಟಿ ನೀಡಿದರು. ಐಗೂರು ಗ್ರಾ.ಪಂ. ವ್ಯಾಪ್ತಿಯ ಚೋರನ ಹೊಳೆಯ ಬದಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುವ ಎನ್.ಆರ್. ಅಜಿತಕುಮಾರಿ ಎಂಬವರ ಮನೆ ಮತ್ತು ಒಳ್ಳೆಯ ಮೆಣಸಿನ ಬಳ್ಳಿಗಳು ಜಲಾವೃತಗೊಂಡು ನಷ್ಟ ಸಂಭವಿಸಿದೆ.ಶನಿವಾರಸAತೆ: ಸಮೀಪದ ಗೌಡಳ್ಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದೆರೆಡು ದಿನಗಳಿಂದ ಮಳೆ-ಗಾಳಿಯ ಪ್ರಮಾಣ ಅಧಿಕವಾಗಿದ್ದು, ಶನಿವಾರ ಬೆಳಿಗ್ಗೆ ಜಯಪ್ಪ ಎಂಬವರ ಆಟೋ ಮೇಲೆ ವಿದ್ಯುತ್ ಕಂಬವೊAದು ಮುರಿದು ಬಿದ್ದಿದೆ.ಚೆಟ್ಟಳ್ಳಿ: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನತೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮಳೆಗಾಳಿಯ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಸುಂಟಿಕೊಪ್ಪದವರೆಗೆ ಈರಳೆ, ಬಕ್ಕ ಹಾಗೂ ಹಲವೆಡೆ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ೨೦ಕ್ಕೂ ಅಧಿಕ ಕಂಬಗಳು ತುಂಡಾಗಿವೆ. ಸ್ಥಳೀಯ ಚೆಸ್ಕಾಂ ಸಿಬ್ಬಂದಿಯೊAದಿಗೆ ಹೊರಗಿನಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ಮುರಿದ ಕಂಬಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದೆ. ಹಲವೆಡೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆಯಾದರೂ ನಿರಂತರವಾಗಿ ಮರಗಳು ಕಂಬಗಳ ಮೇಲೆ ಬೀಳುವ ಮೂಲಕ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಚೆಟ್ಟಳ್ಳಿ ವಿದ್ಯುತ್ ಇಲಾಖೆಯ ಜೆಇ ಮನುಕುಮಾರ್ ತಿಳಿಸಿದ್ದಾರೆ.

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶಾಂತ ಎಂಬವರ ಮನೆಯ ಒಂದು ಭಾಗ ಗಾಳಿ ಮಳೆಯಿಂದಾಗಿ ಕುಸಿದಿದೆ. ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಇಲಾಖೆಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲಿಸಿದರು.

ಚೆಟ್ಟಳ್ಳಿ: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನತೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮಳೆಗಾಳಿಯ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಸುಂಟಿಕೊಪ್ಪದವರೆಗೆ ಈರಳೆ, ಬಕ್ಕ ಹಾಗೂ ಹಲವೆಡೆ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ೨೦ಕ್ಕೂ ಅಧಿಕ ಕಂಬಗಳು ತುಂಡಾಗಿವೆ. ಸ್ಥಳೀಯ ಚೆಸ್ಕಾಂ ಸಿಬ್ಬಂದಿಯೊAದಿಗೆ ಹೊರಗಿನಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ಮುರಿದ ಕಂಬಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದೆ. ಹಲವೆಡೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆಯಾದರೂ ನಿರಂತರವಾಗಿ ಮರಗಳು ಕಂಬಗಳ ಮೇಲೆ ಬೀಳುವ ಮೂಲಕ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಚೆಟ್ಟಳ್ಳಿ ವಿದ್ಯುತ್ ಇಲಾಖೆಯ ಜೆಇ ಮನುಕುಮಾರ್ ತಿಳಿಸಿದ್ದಾರೆ.