ಕೂಡಿಗೆ, ಜು. ೨೭ : ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ೨೫ನೇ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು. ಆಪರೇಷನ್ ವಿಜಯ್ ಸಮಯದಲ್ಲಿ ಅತ್ಯಂತ ಸವಾಲಿನ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹೋರಾಡಿದ ಕೆಚ್ಚೆದೆಯ ವೀರ ಸೈನಿಕರ ಸಾಹಸ ಮತ್ತು ಅತ್ಯುನ್ನತ ತ್ಯಾಗದ ಸಾಹಸಗಾಥೆ ಹಾಗೂ ಅವರ ಅಚಲ ಸಂಕಲ್ಪ, ಮಾತೃಭೂಮಿಯ ಮೇಲಿನ ಅಚಲ ಪ್ರೇಮವನ್ನು ಸ್ಮರಿಸಲಾಯಿತು.

ವಿಂಗ್ ಕಮಾಂಡರ್ ಪಿ. ಪ್ರಕಾಶ್‌ರಾವ್, ಆಡಳಿತಾಧಿಕಾರಿ ಮತ್ತು ಉಪ ಪ್ರಾಂಶುಪಾಲ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸುತ್ತಾ, ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.

ಜೆಡಿಎನ್‌ಸಿಸಿ ಕಂಪನಿಯ ಎನ್‌ಸಿಸಿ ಅಧಿಕಾರಿಗಳು ಮತ್ತು ಸೈನಿಕ ಶಾಲೆಯ ಸೇನಾ ಸಿಬ್ಬಂದಿ ವರ್ಗದವರೂ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಾಲೆಯ ಉಪ ಪ್ರಾಂಶಪಾಲ ಸ್ಕಾ÷್ವಡ್ರನ್ ಲೀಡರ್ ಮೊಹಮ್ಮದ್ ಶಾಜಿ ಅವರ ಮೇಲ್ವಿಚಾರಣೆಯಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಅಭಿಯಾನ ವನ್ನು ನಡೆಸಲಾಯಿತು. ಎನ್‌ಸಿಸಿ ಸಿಬ್ಬಂದಿ, ಎನ್‌ಸಿಸಿ ಅಧಿಕಾರಿಗಳು ಮತ್ತು ಕೆಡೆಟ್‌ಗಳು ಸಸಿ ನೆಡಯವ ಅಭಿಯಾನದಲ್ಲಿ ಪಾಲ್ಗೊಂಡರು. ಈ ಸಂದರ್ಭ ಶಾಲೆಯ ಎಲ್ಲಾ ವಿದ್ಯಾರ್ಥಿ ಗಳು, ಶಿಕ್ಷಕರ ವೃಂದ ಹಾಜರಿದ್ದರು.