ಸೋಮವಾರಪೇಟೆ, ಜು. ೨೭: ಇಂದು ಮಧ್ಯಾಹ್ನದ ನಂತರದಿAದ ಮಳೆ ಕಡಿಮೆಯಾದರೂ ನಿನ್ನೆಯಿಂದ ಇಂದು ಬೆಳಗ್ಗಿನವರೆಗೆ ಸುರಿದ ಮಳೆಗೆ ಸೋಮವಾರಪೇಟೆಯ ಹಲವು ಭಾಗಗಳಲ್ಲಿ ಗದ್ದೆಗಳು ಜಲಾವೃತವಾಗಿದ್ದು, ರಸ್ತೆಗಳ ಮೇಲೆ ಮಳೆ, ಜಲದ ನೀರು ಹರಿಯುವ ಮೂಲಕ ಹೊಳೆಗಳಂತಾಗಿವೆ. ಇನ್ನು ಸೋಮವಾರಪೇಟೆ- ಶಾಂತಳ್ಳಿ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಗುಡ್ಡ ಕುಸಿಯುವಿಕೆ ಮುಂದುವರೆದಿದೆ. ತಾಲೂಕಿನ ಐಗೂರು, ಬಿಳಿಗೇರಿ, ಕಿರಗಂದೂರು ವ್ಯಾಪ್ತಿಯ ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಶಾಂತಳ್ಳಿ ಹೋಬಳಿ ಯಾದ್ಯಂತ ಮಳೆಯಾಗುತ್ತಿದ್ದು, ಜೇಡಿಗುಂಡಿಯಲ್ಲಿ ಗುಡ್ಡ ಕುಸಿಯು ತ್ತಿರುವುದು ಮೂರನೇ ದಿನವೂ ಮುಂದುವರೆದಿದೆ. ಯಂತ್ರಗಳ ಸಹಾಯದಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ಮಣ್ಣು ತೆಗೆಯುತ್ತಿದ್ದಂತೆ ಮತ್ತೆ ಗುಡ್ಡ ಕುಸಿಯುತ್ತಿದ್ದು,

(ಮೊದಲ ಪುಟದಿಂದ) ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ನಿನ್ನೆಯವರೆಗೂ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿದ್ದು, ಇಂದು ಮಧ್ಯಾಹ್ನ ನಂತರದಿAದ ಹಿಟಾಚಿ ಮೂಲಕ ಮಣ್ಣು ತೆಗೆಯಲಾಗುತ್ತಿದೆ. ಮೂರು ಲಾರಿಗಳ ಮೂಲಕ ಈವರೆಗೆ ನೂರಾರು ಲೋಡ್ ಮಣ್ಣನ್ನು ಹೊರ ಭಾಗಕ್ಕೆ ಸಾಗಿಸಲಾಗಿದ್ದು, ಇನ್ನೂ ನೂರಾರು ಲೋಡ್‌ನಷ್ಟು ಮಣ್ಣು ಗುಡ್ಡ ಕುಸಿತದಿಂದ ಸ್ಥಳದಲ್ಲಿ ಶೇಖರಣೆಯಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಎಂ.ಸ್ಯಾAಡ್‌ಗಳ ಮೂಟೆಗಳನ್ನು ತಡೆಗೋಡೆಯಂತೆ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಪದೇ ಪದೇ ಮಣ್ಣು ಜರಿಯುತ್ತಿರುವುದರಿಂದ ಕಾರ್ಯಾಚರಣೆಯ ವೇಗಕ್ಕೆ ತಡೆಯಾಗಿದೆ.

ಯಡೂರು, ಜೇಡಿಗುಂಡಿ, ನಗರಳ್ಳಿ ಜಂಕ್ಷನ್ ಮೂಲಕ ಶಾಂತಳ್ಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಬಂದ್ ಆಗಿದೆ. ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೆ ತಡೆಯಾಗಿದೆ. ಬಸ್‌ಗಳು ಬದಲಿ ಮಾರ್ಗದಲ್ಲಿ ಸುತ್ತು ಬಳಸಿ ಶಾಂತಳ್ಳಿಗೆ ತೆರಳಬೇಕಿದೆ. ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದ್ದು, ತ್ವರಿತಗತಿಯಲ್ಲಿ ಮಣ್ಣು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ತೋಳೂರುಶೆಟ್ಟಳ್ಳಿ ಹಾಗೂ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಅವಾಂತರಗಳ ವ್ಯೂಹ ರಚನೆಗೊಂಡಿದೆ. ಕೂಡುರಸ್ತೆಯ ಮೂಲಕ ಹೊಸಬೀಡು, ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗದ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಕಲ್ಕಂದೂರು-ಹೊಸಬೀಡು ಮಾರ್ಗದಲ್ಲಿ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಮೇಲ್ಭಾಗದಲ್ಲಿರುವ ತೋಟದ ಮಾಲೀಕರು ನೈಸರ್ಗಿಕ ತೊರೆಗೆ ತಡೆಹಾಕಿ, ಅಲ್ಲಿ ಹರಿಯುತ್ತಿದ್ದ ನೀರನ್ನು ಕೆರೆಗೆ ತಿರುಗಿಸಿದ ಪರಿಣಾಮ ಕೆರೆಯಲ್ಲಿ ನೀರಿನ ಸಂಗ್ರಹ ಅಧಿಕವಾಗಿದೆ. ಈ ಹಿನ್ನೆಲೆ ಕೆರೆಯ ಏರಿ ಒಡೆದು ಕೆರೆಯಲ್ಲಿದ್ದ ನೀರು ಗದ್ದೆ, ರಸ್ತೆಗೆ ಹರಿದಿದೆ. ಇದರಿಂದಾಗಿ ಕಲ್ಕಂದೂರು ಗ್ರಾಮದ ಅಪ್ಪಯ್ಯ ಅವರ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ.

ಕೂಡುರಸ್ತೆ- ಕೂತಿ ಗ್ರಾಮ ಸಂಪರ್ಕದ ರಸ್ತೆಯು ಕೆರೆಯಂತಾಗಿದೆ. ಜೆಸಿಬಿ ಯಂತ್ರದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಕಾಫಿ ತೋಟ ಮಾಲೀಕರ ಕೃತ್ಯದಿಂದಾಗಿ ಸುಮಾರು ೨೦ ಏಕೆರೆಗೂ ಅಧಿಕ ಗದ್ದೆಯನ್ನು ಉಳುಮೆ ಮಾಡದೇ ಪಾಳು ಬಿಡುವಂತಾಗಿದೆ. ಲೋಕೋಪಯೋಗಿ ಇಲಾಖೆಗೆ ತಿಳಿಸಿದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮದ ಅಪ್ಪಯ್ಯ ಅವರ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ.

ಕೂಡುರಸ್ತೆ- ಕೂತಿ ಗ್ರಾಮ ಸಂಪರ್ಕದ ರಸ್ತೆಯು ಕೆರೆಯಂತಾಗಿದೆ. ಜೆಸಿಬಿ ಯಂತ್ರದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಕಾಫಿ ತೋಟ ಮಾಲೀಕರ ಕೃತ್ಯದಿಂದಾಗಿ ಸುಮಾರು ೨೦ ಏಕೆರೆಗೂ ಅಧಿಕ ಗದ್ದೆಯನ್ನು ಉಳುಮೆ ಮಾಡದೇ ಪಾಳು ಬಿಡುವಂತಾಗಿದೆ. ಲೋಕೋಪಯೋಗಿ ಇಲಾಖೆಗೆ ತಿಳಿಸಿದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೊಸಬೀಡು ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಗ್ರಾಮದ ಪೃಥ್ವಿ ಅವರಿಗೆ ಸೇರಿದ ಕಾಫಿ ತೋಟದ ಒಂದು ಬದಿಯ ಬರೆ ಕುಸಿತಗೊಂಡಿದ್ದು, ಇದರ ಮಣ್ಣು ಕೆಳಭಾಗದ ಗದ್ದೆಗಳಿಗೆ ಹರಡಿದೆ. ಭಾರೀ ಮಳೆಯಿಂದಾಗಿ ಕೊಳಚೆ ನೀರು ಹೊಸಬೀಡು ಗ್ರಾಮದ ಅವಿನಾ, ಲಿಂಗರಾಜು, ರವಿ ಅವರುಗಳಿಗೆ ಸೇರಿದ ಗದ್ದೆಗಳಿಗೆ ನುಗ್ಗಿದ್ದು, ಸುಮಾರು ೧೦ ಏಕರೆಗೂ ಅಧಿಕ ಗದ್ದೆಗಳು ಜಲಾವೃತಗೊಂಡಿದ್ದು, ಕೃಷಿಗೆ ಅಯೋಗ್ಯವಾಗಿ ಪರಿಣಮಿಸಿದೆ. ಕಲ್ಕಂದೂರು- ಹೊಸಬೀಡು ಭಾಗದಲ್ಲಿರುವ ಬೆಟ್ಟಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೆಳಭಾಗದ ಮನೆಗಳು, ರಸ್ತೆಗಳಿಗೆ ನೀರು ನುಗ್ಗುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ನೀರು ತೊರೆಯಂತೆ ಹರಿಯುತ್ತಿದೆ. ಗುಡ್ಡ ಕುಸಿತ, ಮಳೆಯಿಂದಾಗಿ ಹೊಸಬೀಡು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ, ಮೋರಿ ಕುಸಿತಗೊಂಡಿದೆ.

ಮಾದಾಪುರದಲ್ಲಿ ಕಳೆದ ೨೦೧೮ರಲ್ಲಿ ಭೂಕುಸಿತ ಉಂಟಾಗಿದ್ದ ಸ್ಥಳದಲ್ಲಿ ಮತ್ತೆ ಬರೆ ಕುಸಿತವಾಗಿದ್ದು, ಆತಂಕ ಸೃಷ್ಟಿಸಿದೆ.