ಸೋಮವಾರಪೇಟೆ, ಜು.೨೬: ತಾಲೂಕು ಕೇಂದ್ರವಾಗಿರುವ ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ೨ ವರ್ಷಗಳ ಹಿಂದೆ ನವೀಕರಣ ಗೊಂಡ ಆಡಳಿತ ಸೌಧದ ಮೇಲ್ಛಾವಣಿ ಗಾಳಿಗೆ ಹಾರಲು ಯತ್ನಸುತ್ತಿದೆ. ಮಳೆಹಾನಿ ಪರಿಹಾರ ನಿಧಿಯಡಿ ಕೋಟಿಗೂ ಅಧಿಕ ವೆಚ್ಚದಲ್ಲಿ ಆಡಳಿತ ಸೌಧವನ್ನು ನವೀಕರಿಸಲಾಗಿದ್ದು, ಹಿಂದೆ ಇದ್ದ ಕಟ್ಟಡದ ಮೇಲ್ಭಾಗ ಇನ್ನೊಂದು ಅಂತಸ್ತು ನಿರ್ಮಿಸಿ, ಛಾವಣಿಗೆ ಶೀಟ್‌ಗಳನ್ನು ಅಳವಡಿಸಲಾಗಿದೆ.

ಇದೀಗ ಬೀಸುತ್ತಿರುವ ಭಾರೀ ಗಾಳಿಗೆ ಕಟ್ಟಡದ ಒಂದು ಮೂಲೆಯಲ್ಲಿ ಛಾವಣಿ ಶೀಟ್ ಅಲ್ಪ ಪ್ರಮಾಣದಲ್ಲಿ ಕಿತ್ತು ಬರುತ್ತಿದ್ದು, ಗಾಳಿಯ ಹೊಡೆತಕ್ಕೆ ಹಾರುವ ಹಂತದಲ್ಲಿದೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಇನ್ನಷ್ಟು ಹಾನಿಯಾಗುವ ಸಂಭವವಿದ್ದು, ಸಂಬAಧಿಸಿದ ತಹಶೀಲ್ದಾರ್ ಈ ಬಗ್ಗೆ ಗಮನ ಹರಿಸಬೇಕಿದೆ. ತಹಶೀಲ್ದಾರ್ ಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ವಿಭಾಗಗಳು ಈ ಸೌಧದ ಒಳಗೆ ಕಾರ್ಯಾಚರಿಸುತ್ತಿದ್ದು, ತುರ್ತು ನಿರ್ವಹಣೆಯ ಅಗತ್ಯತೆ ಎದುರಾಗಿದೆ.