ಮಡಿಕೇರಿ, ಜು. ೨೬: ದಿ. ಪರದಂಡ ಚಂಗಪ್ಪನವರ ಸ್ಮರಣಾರ್ಥ, ಅಲ್ಲಾರಂಡ ರಂಗಚಾವಡಿಯ ವತಿಯಿಂದ ‘‘ನಾ ಕಂಡAತೆ ಪರದಂಡ ಚಂಗಪ್ಪ’’ ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಆಹ್ವಾನಿಸಲಾಗಿದೆ ಹಾಗೂ ಅವರ ಅಪರೂಪದ ಭಾವಚಿತ್ರ (Phoಣo) ಗಳಿದ್ದಲ್ಲಿ ಅಂತಹ ಭಾವಚಿತ್ರಗಳ ಸಮಯ, ಸಂದರ್ಭವನ್ನು ವಿವರಿಸಿ ಕಳುಹಿಸಬಹುದಾಗಿದೆ.

ಅತ್ಯುತ್ತಮ ಬರಹಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಆಯ್ಕೆಯಾದ ಅವರ ಅಪರೂಪದ ಭಾವಚಿತ್ರಕ್ಕೆ ಬಹುಮಾನವಿರುತ್ತದೆ.

ಲೇಖನ ಹಾಗೂ ಭಾವಚಿತ್ರವನ್ನು vಣಟ.ಛಿooಡಿg@gmಚಿiಟ.ಛಿom ಇ-ಮೇಲ್ ಐಡಿಗೆ ಆಗಸ್ಟ್ ೮ರ ಒಳಗಾಗಿ ಕಳುಹಿಸುವಂತೆ ಅಲ್ಲಾರಂಡ ವಿಠಲ ನಂಜಪ್ಪ ಕೋರಿದ್ದಾರೆ.