ಪೊನ್ನಂಪೇಟೆ, ಜು. ೨೮: ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್) ಮತ್ತು ಕೂರ್ಗ್ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ೨೮ ವರ್ಷ ಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಬಿ.ಎಂ. ಗಣೇಶ್‌ರಿಗೆ ಕಾಪ್ಸ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಕಾಪ್ಸ್ ಸಭಾಂಗಣ ಕಲಾ ಮಂಚ್‌ನಲ್ಲಿ ನಡೆದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ೨೯ನೇ ಪದವಿ ಪ್ರದಾನ ಸಮಾರಂಭದಲ್ಲಿ ಕ್ಯಾ. ಬಿ.ಎಂ. ಗಣೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾಪ್ಸ್ನ ಸ್ಥಾಪಕ ಅಧ್ಯಾಪಕರಲ್ಲಿ ಓರ್ವರಾಗಿರುವ ಗಣೇಶ್ ಅವರು ಕಳೆದ ೨೮ ವರ್ಷಗಳಿಂದ ಕಾರ್ಯನಿರ್ವಹಿಸಿದರಲ್ಲದೆ, ೨೦ ವರ್ಷಗಳ ಕಾಲ ಕಾಪ್ಸ್ನ ಎನ್‌ಸಿಸಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಎನ್.ಸಿ.ಸಿ. ಅಧಿಕಾರಿಯಾಗಿ ಕ್ಯಾಪ್ಟನ್ ಪದವಿ ಪಡೆದಿದ್ದರು.
ಕಾರ್ಯಕ್ರಮದಲ್ಲಿ ಕಾಪ್ಸ್ನ ಪ್ರಾಂಶುಪಾಲ ಡಾ. ಎಂ. ರಾಮಚಂದ್ರ, ಮುಖ್ಯ ಅತಿಥಿಗಳಾಗಿದ್ದ ನಿವೃತ ಲೆಫ್ಟಿನೆಂಟ್ ಜನರಲ್ ಪಿ. ಸಿ. ತಿಮ್ಮಯ್ಯ, ಕೊಡಗು ಅಕಾಡೆಮಿ ಫಾರ್ ಎಜುಕೇಶನ್ ಅಂಡ್ ಕಲ್ಚರ್ (ಕಾಪ್ಸ್ ಆಡಳಿತ ಮಂಡಳಿ) ಅಧ್ಯಕ್ಷ ಕೀಕಿರ ಧನ್ಯ ಸುಬ್ಬಯ್ಯ, ಆಡಳಿತ ಮಂಡಳಿ ಪದಾಧಿಕಾರಿ ಎಂ. ಎಂ. ತಿಮ್ಮಯ್ಯ, ಪ್ರಭಾ ಸುಬ್ಬಯ್ಯ, ಎಂ. ಟಿ. ಮಾಚಯ್ಯ, ಉಪ ಪ್ರಾಂಶುಪಾಲೆ ವೇದಾ ಬೋಪಣ್ಣ, ಕಾಪ್ಸ್ನ ಎನ್.ಸಿ.ಸಿ. ಅಧಿಕಾರಿ ಲೆ. ಕಿಶೋರ್ ಕುಮಾರ್ ಸೇರಿದಂತೆ ವಿದ್ಯಾ ಸಂಸ್ಥೆಯ ಬೋಧಕ- ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.