ಪ್ಯಾರಿಸ್, ಜು. ೨೮: ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ನಡೆಯುತ್ತಿರುವ ೨೦೨೪ನೇ ಸಾಲಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಮೊದಲ ಪದಕ ಸಾಧನೆ ಮಾಡಿದೆ. ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಮನು ಭಾಕೆರ್ ಅವರು ಕಂಚು ಪದಕ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದಾರೆ. ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್‌ನಲ್ಲಿ ಮನು ಅವರು ಫೈನಲ್ ಹಂತದಲ್ಲಿ ಒಟ್ಟು ೨೨೧.೭ ಅಂಕಗಳನ್ನು ಪಡೆಯುವ ಮೂಲಕ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಾಧನೆಗೈದಿದ್ದಾರೆ. ಮೊದಲೆರಡು ಸ್ಥಾನಗಳನ್ನು ಕೊರಿಯಾ ದೇಶದ ಓಹ್ ಹಾಗೂ ಕಿಮ್ ಅವರುಗಳು ಪಡೆದುಕೊಂಡಿದ್ದಾರೆ. ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
ಹಾಕಿಯಲ್ಲಿ ೨೯ರಂದು ಅರ್ಜಂಟೀನಾ ಎದುರಾಳಿ
ಒಲಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಶುಭಾರಂಭ ದೊರಕಿದ್ದು, ತಾ.೨೭ ರಂದು ನ್ಯೂಜಿಲ್ಯಾಂಡ್ ವಿರುದ್ಧ ೩-೨ ಗೋಲುಗಳಿಂದ ಜಯ ಸಾಧಿಸಿದೆ. ಇಂದು ತಾ.೨೯ ರಂದು ಸಂಜೆ ೪:೧೫ ಕ್ಕೆ ಅರ್ಜಂಟೀನಾ ವಿರುದ್ಧ ಪಂದ್ಯ ನಡೆಯಲಿದೆ. ಜಿಯೋ ಸಿನಿಮಾ ಮೊಬೈಲ್ ಅಪ್ಲಿಕೇಷನ್ ಅಥವಾ ಸ್ಪೋರ್ಟ್ಸ್ ೧೮ ಟಿ.ವಿ ಚ್ಯಾನಲ್‌ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ತಾ.೩೦ ಕ್ಕೆ ಸಂಜೆ ೪:೪೫ ಕ್ಕೆ ಐರ್‌ಲ್ಯಾಂಡ್ ವಿರುದ್ಧ, ಆಗಸ್ಟ್ ೧ ರಂದು ೧:೩೦ ಕ್ಕೆ ಹಾಲಿ ಚಾಂಪಿಯನ್ಸ್ ಬೆಲ್ಜಿಯಮ್ ವಿರುದ್ಧ, ಆಗಸ್ಟ್ ೨ ರಂದು ೪ :೪೫ ಕ್ಕೆ ಆಸ್ಟೆçÃಲಿಯಾ ವಿರುದ್ಧ ಗ್ರೂಪ್ ಹಂತದ ಹಾಕಿ ಪಂದ್ಯಗಳು ನಡೆಯಲಿವೆ.