ಮಡಿಕೇರಿ, ಜು. ೨೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಮಡಿಕೇರಿ ಯೋಜನಾ ಕಚೇರಿಯಲ್ಲಿ ಮದ್ಯವರ್ಜನ ಶಿಬಿರ ಆಯೋಜನೆ ಕುರಿತು ಸಮಾಲೋಚನಾ ಸಭೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕಿ ಲೀಲಾವತಿ ಸಂಘಟನೆ ಮೂಲಕ ನಡೆಯುವ ಸಾಮಾಜಿಕ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.
ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮದ್ಯವರ್ಜನ ಶಿಬಿರದ ರೂಪುರೇಷೆ ಬಗ್ಗೆ ವಿವರಿಸಿದರು.
ಈ ಸಂದರ್ಭ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಟಿ.ಎಂ. ಅಯ್ಯಪ್ಪ, ಅಧ್ಯಕ್ಷರಾಗಿ ಚಂದ್ರಪ್ರಕಾಶ್, ಕೋಶಾಧಿಕಾರಿಯಾಗಿ ಮಿಲನ ಪಿ. ಮುತ್ತಣ್ಣ ಅವರುಗಳನ್ನು ಆಯ್ಕೆ ಮಾಡಲಾಯಿತು. ಮದ್ಯವರ್ಜನ ಶಿಬಿರ ನಡೆಸಲು ಚೇರಂಬಾಣೆ ಗೌಡ ಸಮಾಜವನ್ನು ಉಚಿತವಾಗಿ ನೀಡಲಾಗುವುದು ಎಂದು ಸಮಾಜದವರು ತಿಳಿಸಿದರು.
ಜನಜಾಗೃತಿ ವೇದಿಕೆಯ ಸದಸ್ಯರಾದ ಧನಂಜಯ, ಬೀನಾ ಬೊಳ್ಳಮ್ಮ, ದೀರ್ಘಕೇಶಿ ಶಿವಣ್ಣ, ಕೆ. ನಿಡುಗಡೆ ಗ್ರಾ.ಪಂ. ಅಧ್ಯಕ್ಷ ಡೀನ್ ಬೋಪಣ್ಣ, ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಗಜಾನನ, ಗೌಡ ಸಮಾಜ ಚೇರಂಬಾಣೆಯ ನಿರ್ದೇಶಕರಾದ ತೀರ್ಥಪ್ರಸಾದ್, ಅಜಯ್ ಸೂದನ್, ಕಾರ್ಯಪ್ಪ, ದಿವಾಕರ್, ಉಮೇಶ್ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಪುರುಷೋತ್ತಮ್ ಸ್ವಾಗತಿಸಿದರು. ಮೇಲ್ವಿಚಾರಕಿ ವಿದ್ಯಾ ನಂದಕುಮಾರ್ ನಿರೂಪಿಸಿ, ವಂದಿಸಿದರು.