ಮಡಿಕೇರಿ, ಜು. ೨೮: ಜಿಲ್ಲೆಯಲ್ಲಿ ಕೆಲವಾರು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಹತ್ತು ಹಲವಾರು ಹಾನಿಗಳು ಸಂಭವಿಸಿವೆ. ಇದೀಗ ಶನಿವಾರದಿಂದ ಮಳೆ ಒಂದಷ್ಟು ಕಡಿಮೆಯಾಗಿದ್ದು, ಜನರು ಮಳೆಯ ಬವಣೆಯಿಂದ ಒಂದಷ್ಟು ನಿರಾಳತೆಗೆ ಬಂದಿದ್ದಾರೆ. ಆದರೆ, ಮಳೆ ಕಡಿಮೆಯಾದರೂ ಗಾಳಿ ಇಳಿಮುಖವಾಗಿಲ್ಲ. ಜಿಲ್ಲೆಯ ಎಲ್ಲೆಡೆ ರಭಸದ ಗಾಳಿ ಬೀಸುತ್ತಿದೆ. ಅಷ್ಟಕ್ಕೂ ಈ ಬಾರಿ ವಿಶೇಷವೆಂಬAತೆ ಕಳೆದ ಹಲವಾರು ದಿನಗಳಿಂದ ಗಾಳಿಯ ತೀವ್ರತೆ ಎದುರಾಗಿದೆ. ನಿರಂತರವಾಗಿ ಗಾಳಿ ಬೀಸುತ್ತಿರುವುದರಿಂದ ಜನರ ಆತಂಕ ಹೆಚ್ಚಾಗುತ್ತಿದೆ. ಗಾಳಿಯ ರಭಸಕ್ಕೆ ಕಾಫಿ ತೋಟಗಳು, ಮನೆಗಳು, ವಿದ್ಯುತ್ ಕಂಬ, ತಂತಿಗಳು ಹಾನಿಗೀಡಾಗುತ್ತಿವೆ. ನಿರಂತರ ಗಾಳಿಯ ಪರಿಣಾಮವಾಗಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವುದು ಸೆಸ್ಕ್ ಸಿಬ್ಬಂದಿಗಳಿಗೆ ದುಸ್ತರವಾಗುತ್ತಿದೆ. ಅಲ್ಲಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿರುವ ಘಟನೆಗಳೂ ನಡೆಯುತ್ತಿವೆ. ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಗಾಳಿ ಕಂಡು ಬರುತ್ತಿತ್ತಾದರೂ ಇಷ್ಟೊಂದು ಪ್ರಮಾಣದಲ್ಲಿ ಸುದೀರ್ಘವಾಗಿ ಮುಂದುವರಿಯುತ್ತಿರಲಿಲ್ಲ.
ಸೋಮವಾರಪೇಟೆ, ಜು. ೨೮: ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶಗಳನ್ನು ಹೊರತುಪಡಿಸಿದರೆ ತಾಲೂಕಿನ ಇತರ ಭಾಗಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ಕೆಲವೊಮ್ಮೆ ಜೋರಾಗಿ ಸುರಿಯುವ ಮಳೆ ನಂತರ ಶಾಂತವಾಗುತ್ತಿದೆ. ಆದರೆ ಗಾಳಿಯ ಪ್ರಮಾಣ ಅಧಿಕವಾಗಿದೆ. ಕಳೆದ ಮೂರು ದಿನಗಳಿಂದ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ತೊಡಕಾಗಿದ್ದ ಸೋಮವಾರಪೇಟೆ-ಶಾಂತಳ್ಳಿ ರಸ್ತೆ ಇಂದು ಸಂಚಾರಕ್ಕೆ ಮುಕ್ತವಾಗಿದೆ.
ಜೇಡಿಗುಂಡಿ ಬಳಿಯಲ್ಲಿ ಬರೆ ಕುಸಿದು ಭಾರೀ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಸಂಗ್ರಹಗೊAಡಿದ್ದು, ಲೋಕೋಪಯೋಗಿ ಇಲಾಖೆ ಮುಖಾಂತರ ನಿನ್ನೆಯವರೆಗೆ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವು ಮಾಡಲಾಗುತ್ತಿತ್ತು. ಆದರೆ ಭಾರೀ ಮಳೆ ಹಿನ್ನೆಲೆ ಮಣ್ಣು ತೆಗೆದಂತೆ ಮತ್ತೆ ಗುಡ್ಡ ಕುಸಿಯುತ್ತಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಸಂಚಾರ ಬಂದ್ ಆಗಿತ್ತು.
ನಿನ್ನೆ ಮಧ್ಯಾಹ್ನದಿಂದ ಮಳೆಯೂ ಕೊಂಚ ಬಿಡುವು ನೀಡಿದ್ದು, ಜೆಸಿಬಿ ಯಂತ್ರದ ಜೊತೆಗೆ ಹಿಟಾಚಿ ಯಂತ್ರವನ್ನು ಬಳಸಿಕೊಂಡು ಮಣ್ಣು ತೆರವು ಮಾಡಲಾಗಿದ್ದು, ಇದೀಗ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ.
ಇನ್ನು ಮಳೆಯಿಂದಾಗಿ ಶೀತಮಯ ವಾತಾವರಣವಿದ್ದು, ಮನೆಗಳಿಗೆ ಹಾನಿಯಾಗುತ್ತಿದೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವನಗೂರು ಕೊಪ್ಪ ಗ್ರಾಮದ ಜಾನಕಿ ಬಸಪ್ಪ ಅವರಿಗೆ ಸೇರಿದ ವಾಸದ ಮನೆಯು ಅತೀ ಶೀತದಿಂದ ಕುಸಿದಿದ್ದು, ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ದಾಮೋದರ್, ಗ್ರಾಮ ಲೆಕ್ಕಾಧಿಕಾರಿ ತಳವಾರ್ ಕರಿ ಬಸವರಾಜು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕೂತಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿದ್ದ ಮರ ಧರೆಗುರುಳಿದ್ದು, ಗ್ರಾಮಕ್ಕೆ ವಿದ್ಯುತ್ ಒದಗಿಸುವ ತಂತಿಗಳು ತುಂಡಾಗಿ ಕೆಳಬಿದ್ದಿವೆ. ಕೆಲಕಾಲ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ಸೆಸ್ಕ್ ಸಿಬ್ಬಂದಿಗಳು ಮರ ತೆರವುಗೊಳಿಸಿದರು.
ಹೊಸಬೀಡು ಗ್ರಾಮದಲ್ಲಿ ನೈಸರ್ಗಿಕ ತೋಡಿಗೆ ಕಲ್ಲು ಹಾಕಿ ಮುಚ್ಚಿರುವುದರಿಂದ ಮಳೆ ನೀರು ಕೆರೆಗೆ ನುಗ್ಗಿದ್ದು, ಕೆರೆಯಲ್ಲಿ ನೀರಿನ ಸಂಗ್ರಹ ಅಧಿಕವಾಗಿ ಕೆರೆ ಏರಿ ಒಡೆದಿದೆ. ಪರಿಣಾಮ ಕೆರೆಯ ನೀರು ಕೆಳಭಾಗದ ಗದ್ದೆ, ರಸ್ತೆಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ.
ಯಡೂರು ಗ್ರಾಮದಲ್ಲಿ ಬರೆ ಕುಸಿತ ಉಂಟಾಗಿದ್ದು, ಕೆಳಭಾಗದಲ್ಲಿದ್ದ ತೊರೆಗೆ ಮಣ್ಣು ತುಂಬಿದೆ. ಪರಿಣಾಮ ನೀರಿನೊಂದಿಗೆ ಮಣ್ಣು ಗದ್ದೆಗಳಿಗೆ ಹರಡಿದ್ದು, ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಗ್ರಾಮದ ಸಂತೋಷ್, ವೆಂಕಟೇಶ್ ಅವರುಗಳ ಗದ್ದೆಗೆ ಹಾನಿಯಾಗಿದೆ.
ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಜಿ.ಟಿ. ದೇವಯ್ಯ ಅವರ ವಾಸದ ಮನೆ ಭಾಗಶಃ ಹಾನಿಯಾಗಿದೆ. ಕೊಡ್ಲಿಪೇಟೆ ಹೋಬಳಿ ಬೆಂಬಳೂರು ಗ್ರಾಮದ ಮಂಜುನಾಥ ಅವರ ವಾಸದ ಮನೆಯು ಶೇ. ೬೦ರಷ್ಟು ಕುಸಿದು ಬಿದ್ದಿದ್ದು, ವಾಸಕ್ಕೆ ಅಯೋಗ್ಯವಾಗಿದೆ. ಬೆಂಬಳೂರು ಗ್ರಾಮದ ವನಜಾಕ್ಷಿ ಹರೀಶ್ ಅವರ ವಾಸದ ಮನೆಯ ಗೋಡೆ, ಛಾವಣಿ ಬಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಜೆಗುಂಡಿ ಗ್ರಾಮದ ವನಿತ ಶಿವಪ್ಪ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಕುಸಿದು ನಷ್ಟ ಸಂಭವಿಸಿದೆ.ಕೂಡಿಗೆ: ರಾಜ್ಯ ಕಾವೇರಿ ನೀರಾವರಿ ನಿಗಮದ ಸಲಹಾ ಸಮಿತಿಯ ತೀರ್ಮಾನದಂತೆ ಅಣೆಕಟ್ಟೆಯಿಂದ ಮೂರು ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದ ಖಾರೀಫ್ ಬೇಸಾಯಕ್ಕೆ ಅನುಕೂಲವಾಗುವಂತೆ ಇಂದಿನಿAದ ೫೦೦ ಕ್ಯೂಸೆಕ್ಸ್ ನೀರನ್ನು ಅಣೆಕಟ್ಟೆಯಿಂದ ನಾಲೆಗಳ ಮೂಲಕ ಹರಿಸಲಾಗುತ್ತಿದೆ.
ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ಕಾವೇರಿ ನೀರಾವರಿ ನಿಗಮದ ಸಲಹಾ ಸಮಿತಿಯ ಸಭೆಯು ಬೆಂಗಳೂರಿನಲ್ಲಿ ನಡೆದು ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹಾರಂಗಿ ವೃತ್ತ ಅಧಿಕ್ಷಕ ಅಭಿಯಂತರರ ಕೆ.ಕೆ.ರಘುಪತಿ ನವರ ಮಾರ್ಗದರ್ಶನದಲ್ಲಿ ಅಣೆಕಟ್ಟೆಯಿಂದ ವಿದ್ಯುತ್ ಘಟಕದ ಮೂಲಕ ನೀರು ಹರಿಸಿ, ನಾಲೆಯ ಎರಡು ಗೇಟ್ಗಳಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ ನೀರನ್ನು ಬಿಡುಗಡೆಗೊಳಿಸಲಾಯಿತು. ಹಾರಂಗಿಯಿAದ ಕಣಿವೆ ಸಮೀಪದ ಭುವನಗಿರಿ ಗ್ರಾಮದವರೆಗೆ ಇರುವ ಮುಖ್ಯ ನಾಲೆಯಲ್ಲಿ ನೀರನ್ನು ಹರಿಸಿ ನಂತರ ಅಲ್ಲಿಂದ ಎಡ ಮತ್ತು ಬಲದಂಡೆಯ ದಂಡೆಯಲ್ಲಿ ನೀರನ್ನು ಬೇಸಾಯಕ್ಕೆ ಹರಿಸುವ ವ್ಯವಸ್ಥೆ ಯನ್ನು ಇಲಾಖೆಯ ವತಿಯಿಂದ ಮಾಡಲಾಗಿದೆ.
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಈಗಾಗಲೇ ಹೆಚ್ಚು ಮಳೆಯು ಬೀಳುತ್ತಿರುವ ಹಿನ್ನೆಲೆಯಲ್ಲಿ ಮತ್ತು ರೈತರ ನೀರಿನ ಬೇಡಿಕೆಯ ಅನುಗುಣವಾಗಿ ಅವರುಗಳ ಜಮೀನುಗಳಲ್ಲಿ ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯಕ್ಕೆ ಉಪಯೋಗವಾಗುವಷ್ಟು ನೀರನ್ನು ಮುಂದಿನ ದಿನಗಳಲ್ಲಿ ಹರಿಸಲಾಗುವುದು ಎಂದು ಹಾರಂಗಿ ವೃತ್ತ ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಅಣೆಕಟ್ಟೆಯ ಮೇಲುಸ್ತುವಾರಿ ಇಂಜಿನಿಯರ್ ಸಿದ್ದರಾಜ್, ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು. -ಕೆ.ಕೆ.ನಾಗರಾಜ ಶೆಟ್ಟಿ
ಮನೆ ಗೇಟ್ ಮೇಲೆ ವಿದ್ಯುತ್ ತಂತಿ!
ಕುಶಾಲನಗರ: ಕುಶಾಲನಗರ ಸಮೀಪದ ಕೊಪ್ಪ ರಾಷ್ಟಿçÃಯ ಹೆದ್ದಾರಿ ಬಳಿ ವಿದ್ಯುತ್ ತಂತಿಯೊAದು ತುಂಡಾಗಿ ರಸ್ತೆ ಬಳಿ ಮನೆಯ ಗೇಟ್ ಮೇಲೆ ಬಿದ್ದು ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರಿ ಪ್ರಮಾ ಣದ ಅನಾಹುತ ತಪ್ಪಿದಂತಾಗಿದೆ.
ಕೊಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗ ದಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ. ತಡರಾತ್ರಿಯಲ್ಲಿ ಭಾರಿ ಸ್ಪೋಟದ ಸದ್ದಿನೊಂದಿಗೆ ಕಂಬದಿAದ ತಂತಿ ತುಂಡರಿಸಿ ಬಿದ್ದಿದ್ದು ಬೆಳಗಿನ ಜಾವ ಸ್ಥಳೀಯರ ಗಮನಕ್ಕೆ ಬಂದಿದೆ. ಅದೃಷ್ಟ ವಶಾತ್ ರಾತ್ರಿ ವೇಳೆ ಯಾವುದೇ ವ್ಯಕ್ತಿಗಳು ಆ ಭಾಗದಲ್ಲಿ ಚಲಿಸದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.
ಮುಂಜಾನೆ ಹೊರಬಂದು ನೋಡಿದ ವೇಳೆ ವಿದ್ಯುತ್ ತಂತಿ ಪತ್ರಕರ್ತ ಚಂದ್ರಮೋಹನ್ ಅವರ ಮನೆಯ ಗೇಟ್ ಮೇಲೆ ಬಿದ್ದಿದ್ದು ವಿದ್ಯುತ್ ಪ್ರವಹಿಸುವುದು ಖಚಿತಗೊಂಡಿದೆ.
ತಕ್ಷಣ ಸಂಬAಧಿಸಿದ ಸೆಸ್ಕ್ ಜೂನಿಯರ್ ಇಂಜಿನಿಯರ್ ಮತ್ತು ಲೈನ್ ಮ್ಯಾನ್ ಸಂಪರ್ಕಿಸಿದರೂ ಉತ್ತರ ದೊರೆಯದೆ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ರೀತಿಯ ಅವಘಡ ಸಂಭವಿಸಿದAತೆ ಸ್ಥಳದಲ್ಲೇ ಎಚ್ಚರಿಕೆಯಿಂದ ಕಾಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸುಮಾರು ಒಂದು ಗಂಟೆಯ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸೆಸ್ಕ್ ಅಧಿಕಾರಿ ಲೈನ್ಮ್ಯಾನ್ ಅವರನ್ನು ಸ್ಥಳಕ್ಕೆ ಕಳುಹಿಸಿ ಕ್ರಮ ಕೈಗೊಂಡಿದ್ದಾರೆ.
ವಿದ್ಯುತ್ ಕಂಬದಲ್ಲಿ ಆಗಾಗ್ಗೆ ಸ್ಪೋಟದ ಶಬ್ದ ಕೇಳಿಬರುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಕಳೆದ ಮೂರು ದಿನಗಳ ಹಿಂದೆ ಮಾಹಿತಿ ನೀಡಿದರೂ ಸ್ಪಂದಿಸಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ. ಸ್ಥಳೀಯ ಸೆಸ್ಕ್ ಅಧಿಕಾರಿ ಸಿಬ್ಬಂದಿಗಳ ವಿದ್ಯುತ್ ತಂತಿಗಳ ನಿರ್ವಹಣೆಯ ಕೊರತೆಯಿಂದ ಈ ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಸ್ಥಳೀಯರು ಸೆಸ್ಕಾಂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು ಸಂಬAಧಿಸಿದ ಅಧಿಕಾರಿ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಳೆ ಹಾನಿ ಪ್ರದೇಶಗಳಿಗೆ ಪೊನ್ನಣ್ಣ ಭೇಟಿ
ಗೋಣಿಕೊಪ್ಪಲು : ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೊಡಗಿನ ಹಲವೆಡೆ ಹಾನಿ ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ದಕ್ಷಿಣಕೊಡಗಿನ ಹಲವು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಜಾನೆಯಿAದಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಳೆ ಹಾನಿಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳಿಂದ ನಷ್ಟದ ಅಂದಾಜು ವಿವರ ಪಡೆದರು. ಶ್ರೀಮಂಗಲ - ಕುಟ್ಟ ರಸ್ತೆಯಲ್ಲಿ ತೊಂದರೆಯಾದ ಸ್ಥಳಕ್ಕೆ ತೆರಳಿದ ಶಾಸಕ ಪೊನ್ನಣ್ಣ ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.
ಕ್ಷೇತ್ರದಲ್ಲಿ ಮಳೆ ಹಾನಿಯಿಂದ ಆಗಿರುವ ಸಮಸ್ಯೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ತಹಶೀಲ್ದಾರ್ ಖಾತೆಯಲ್ಲಿ ಇರುವ ಅನುದಾನ ಸದ್ಬಳಕೆ ಮಾಡಬೇಕು, ಕ್ಷೇತ್ರದಲ್ಲಿ ಮಳೆ ಹಾನಿಯಿಂದ ಆಗಿರುವ ನಷ್ಟದ ಬಗ್ಗೆ ಕೂಡಲೇ ಅಂದಾಜುಪಟ್ಟಿ ತಯಾರಿಸಬೇಕು. ಮಳೆಯಿಂದಾಗಿ ತೊಂದರೆಗೆ ಒಳಗಾಗುವ ನಾಗರಿಕರಿಗೆ ಕೂಡಲೇ ಸ್ಪಂದಿಸಬೇಕು ಎಂದು ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಹಾಗೂ ಇತರೆ ಅಧಿಕಾರಿಗಳಿಗೆ ಪೊನ್ನಣ್ಣ ನಿರ್ದೇಶನ ನೀಡಿದರು.
ಶಾಸಕರ ಭೇಟಿ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾ.ಪಂ.ಮಾಜಿ ಸದಸ್ಯ ಪೂಣಚ್ಚ, ವಕ್ತಾರ ಆಪಟೀರ ಟಾಟು ಮೊಣ್ಣಪ್ಪ, ಕುಟ್ಟ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡ ಮುಕ್ಕಾಟಿರ ನವೀನ್, ಹೆಚ್.ವೈ.ರಾಮಕೃಷ್ಣ, ಸೇರಿದಂತೆ ಅನೇಕ ಪ್ರಮುಖರು ತಮ್ಮ ವ್ಯಾಪ್ತಿಯಲ್ಲಿ ಆದ ಸಮಸ್ಯೆಗಳನ್ನು ಶಾಸಕರ ಮುಂದೆ ವಿವರ ನೀಡಿದರು.
ತಹಶೀಲ್ದಾರ್ ಮೋಹನ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜ್, ಜಿ.ಪಂ.ಇAಜಿನಿಯರ್ ವಿಭಾಗದ ಎಇಇ ಮಹದೇವ್, ಪೊನ್ನಂಪೇಟೆ ತಾಲೂಕು ಪಂಚಾಯತಿ ಇಓ ಕೆ.ಸಿ.ಅಪ್ಪಣ್ಣ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿಯ ವೇಳೆ ಉಪಸ್ಥಿತರಿದ್ದರು.
ಕುಸಿದು ಬಿದ್ದ ಶೆಡ್
ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಸುತ್ತಿರುವ ಭಾರಿ ಬಿರುಗಾಳಿ ಹಾಗೂ ಮಳೆಯ ಅಬ್ಬರಕ್ಕೆ ಶನಿವಾರ ಮಧ್ಯರಾತ್ರಿ ೨ ಗಂಟೆಗೆ ತ್ಯಾಗರಾಜ ಕಾಲೋನಿಯ ಗೋಪಾಲ್ ಆಚಾರ್ಯ ಅವರ ಗುಡಿ ಕೈಗಾರಿಕೆಯ ಕುಲುಮೆ ಶೆಡ್ ಕುಸಿದು ಬಿದ್ದಿದೆ.ಕುಟುಂಬ ಸದಸ್ಯರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಸೋಲಾರ್ ವ್ಯವಸ್ಥೆಯಲ್ಲಿ ಚಾಲನೆಯಾಗುತ್ತಿದ್ದ ಬ್ಲೊವರ್ (ಫ್ಯಾನ್) ಹಾಗೂ ೭೫೦ ಕ್ಕೂ ಅಧಿಕ ಹೆಂಚುಗಳು ನೆಲಕಚ್ಚಿವೆ.
ಗೋಪಾಲ್ ಆಚಾರ್ಯ ಹಾಗೂ ಪುತ್ರ ವೆಂಕಟೇಶ್ ಆಚಾರ್ಯ ಜೀವನ ನಿರ್ವಹಣೆಗಾಗಿ ಕುಲುಮೆ ಶೆಡ್ನಲ್ಲಿ ನಿತ್ಯವೂ ದುಡಿಯುತ್ತಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಾಲ ಮಾಡಿ ಖರೀದಿಸಿದ್ದ ಸೋಲಾರ್ ಬ್ಲೊವರ್ಗೆ ಹಾನಿಯಾಗಿದ್ದು, ಕುಟುಂಬ ಜೀವನಕ್ಕೆ ಆಧಾರವಾಗಿದ್ದ ಕುಲುಮೆ ಶೆಡ್ ಕುಸಿದು ಬಿದ್ದು ಆರ್ಥಿಕ ಸಂಕಟಕ್ಕೆ ಕುಟುಂಬ ಸಿಲುಕಿದೆ.
ಘಟನೆಯ ಸ್ಥಳಕ್ಕೆ ಶನಿವಾರಸಂತೆ ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಮಂಜುನಾಥ್, ಗ್ರಾಮಲೆಕ್ಕಾಧಿಕಾರಿಗಳಾದ ಚಂದನ್, ಸಂತೋಷ್, ಹಿಂದುಳಿದ ವರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ರಘು, ಮುಖಂಡರಾದ ರಮೇಶ್, ಅನಂತ್ ಭೇಟಿ ನೀಡಿ ಪರಿಶೀಲಿಸಿದರು. ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯ ವತಿಯಿಂದ ಗೋಪಾಲ್ ಆಚಾರ್ಯ ಕುಟುಂಬಕ್ಕೆ ತುರ್ತು ಸಹಾಯವಾಗಿ ಆಹಾರದ ಕಿಟ್ ವಿತರಿಸಲಾಯಿತು.
ಮಳೆ-ಗಾಳಿಗೆ ಸಿಲುಕಿ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಕುಲುಮೆ
ಐನ್ಮನೆಯ ಗೋಡೆ ಕುಸಿತ
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಪೊದವಾಡ ಗ್ರಾಮದಲ್ಲಿರುವ ನಂಬಿಯಪAಡ ಐನ್ಮನೆಯ ಗೋಡೆ ಭಾರೀ ಮಳೆಯಿಂದ ಕುಸಿದು ಬಿದ್ದಿದೆ.
ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಅಮೃತ ಹಾಗೂ ಗ್ರಾಮ ಸಹಾಯಕ ಸಂಜಯ್ ಭೇಟಿ ನೀಡಿ ಪರಿಶೀಲಿಸಿದರು.
ಸವಾಲಿನ ನಡುವೆ ಚೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಣೆ
ಸಿದ್ದಾಪುರ: ಕಳೆದ ನಾಲ್ಕು ದಿನಗಳಿಂದ ನೆಲ್ಯಹುದಿಕೇರಿ ಭಾಗದಲ್ಲಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ದುರಸ್ತಿಪಡಿಸುವ ಕಾರ್ಯದಲ್ಲಿ ಚೆಸ್ಕಾಂ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.
ಮರಗಳನ್ನು ವಿದ್ಯುತ್ ಕಂಬಗಳಿAದ ತೆರವುಗೊಳಿಸುವ ಸಂದರ್ಭದಲ್ಲಿ ಮತ್ತೊಂದು ಭಾಗದಿಂದ ಮರವೊಂದು ದಿಢೀರನೆ ಕುಸಿದು ಬಿದ್ದು, ಅದೃಷ್ಟವಶಾತ್ ಸಿಬ್ಬಂದಿಗಳು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಕಾಫಿ ತೋಟಗಳ ಒಳಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಹಿನ್ನೆಲೆಯಲ್ಲಿ ತಂತಿಗಳು ತುಂಡಾಗಿದ್ದು, ಇವುಗಳನ್ನು ದುರಸ್ತಿ ಪಡಿಸಲು ಸಿಬ್ಬಂದಿಗಳು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಕೂಡ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ ತೋಟದ ಒಳಗೆ ತೆರಳಲು ಸಿಬ್ಬಂದಿಗಳು ಭಯಪಡುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ದುರಸ್ತಿ ಪಡಿಸುವ ಸಂದರ್ಭದಲ್ಲಿ ಮತ್ತೊಂದು ಕಡೆ ಮರದ ಕೊಂಬೆಗಳು ಬೀಳುತ್ತಿದ್ದು, ಇದು ಮತ್ತಷ್ಟು ಸಮಸ್ಯೆಗೆ ಎಡೆ ಮಾಡಿಕೊಡುತ್ತಿದೆ. ಆದರೂ ಸಾಕಷ್ಟು ಭಾಗದಲ್ಲಿ ಇದೀಗ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದೆ. ಮಳೆ ಕಡಿಮೆಯಾದಲ್ಲಿ ಗಾಳಿ ಇಲ್ಲದಿದ್ದಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ ಎಂದು ಸಿಬ್ಬಂದಿಗಳ ಅಭಿಪ್ರಾಯವಾಗಿದೆ.ಹೆದ್ದಾರಿಗೆ ಬಿದ್ದ ಮರ
ಐಗೂರು : ಸೋಮವಾರಪೇಟೆ - ಮಡಿಕೇರಿ ಹೆದ್ದಾರಿಯ ಹೊಸತೋಟ ಬಳಿ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಸ್ಥಳೀಯ ಹೊಸ ತೋಟದ ಎಸ್ವೈಎಸ್ ಶಾಖೆಯಿಂದ ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭ ಅರಣ್ಯಾಧಿಕಾರಿ ಉಲ್ಲಾಸ್ ಇದ್ದರು.
ಮನೆ ಮೇಲೆ ಬಿದ್ದ ಮರ- ಹಾನಿ
ಕಣಿವೆ : ನಂಜರಾಯಪಟ್ಟಣದ ಪರ್ಲಕೋಟಿ ಮಣಿ ಹಾಗೂ ಪುಷ್ಪ ಎಂಬವರ ಮನೆಯ ಮೇಲೆ ಬೃಹತ್ತಾದ ಮತ್ತಿ ಮರವೊಂದು ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದೆ.
ಶನಿವಾರ ರಾತ್ರಿ ಬೀಸಿದ ಭಾರೀ ಪ್ರಮಾಣದ ಗಾಳಿಯಿಂದಾಗಿ ಮರ ಬುಡ ಸಮೇತ ಮನೆಯ ಮೇಲೆ ಬಿದ್ದಿದೆ. ಇದರಿಂದಾಗಿ ಅದೃಷ್ಟವಶಾತ್ ಮನೆ ಮಂದಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಕಳೆದ ಕೆಲವೇ ವರ್ಷಗಳ ಈಚೆಗೆ ಲಕ್ಷಾಂತರ ರೂ.ಗಳ ಸಾಲ ಮಾಡಿ ಕಟ್ಟಿದ್ದ ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯ ಗೋಡೆಗಳು ಅಲ್ಲಲ್ಲಿ ಬಿರುಕಾಗಿವೆ.
ಮನೆಯ ಮೇಲೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಮುರಿದಿದೆ ಎಂದು ಮನೆ ಮಾಲೀಕರಾದ ಪುಷ್ಪ ಹಾಗೂ ಮಣಿ ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಕೃತಿ ವಿಕೋಪ ನಿಧಿಯ ಪರಿಹಾರವನ್ನು ನೀಡಬೇಕಾಗಿ ಒತ್ತಾಯಿಸಿದರು.
ನಂಜರಾಯಪಟ್ಟಣ ಮನೆ ಮೇಲೆ ಮರ ಬಿದ್ದ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ಗ್ರಾಮ ಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಡೆಗೋಡೆ ಕುಸಿತ
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಪೋದವಾಡ ಗ್ರಾಮದ ಅಶ್ರಫ್ ಎಂಬುವವರ ಮನೆಯ ಹಿಂಬದಿಯ ತಡೆ ಗೋಡೆ ಸುರಿಯುತ್ತಿರುವ ಬಾರಿ ಮಳೆಯ ಕಾರಣ ಕುಸಿದು ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಅಮೃತ ಹಾಗೂ ಗ್ರಾಮ ಸಹಾಯಕ ಸಂಜಯ್ ಭೇಟಿ ನೀಡಿ ಪರಿಶೀಲಿಸಿದರು.