ನಾಪೋಕ್ಲು, ಜು. ೨೮: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸತತ ಪರಿಶ್ರಮ ದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳ ಬೇಕು ಎಂದು ಪ್ರಾಂಶುಪಾಲೆ ಕೆ.ಡಿ. ಅನಿತಾ ಕರೆ ನೀಡಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ೬ ರಿಂದ ೧೦ನೇ ತರಗತಿಗಳ ವಿದ್ಯಾರ್ಥಿಗಳ ಮೊದಲನೇ ಪೋಷಕರ ಸಭೆ ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿ ಯೋಜನೆ ತರಬೇತಿ ನೀಡಲು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

೨೦೨೩-೨೪ನೇ ಸಾಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಅಂಕ ಪಡೆದ ವಿದ್ಯಾರ್ಥಿ ಖುಷಿ ಕೆ.ಎಂ. ಇವರ ಪೋಷಕರು ‘ವೃತ್ತಿ ಮಾರ್ಗದರ್ಶನ’ ಕ್ಕೆ ಚಾಲನೆ ನೀಡಿದರು.

ಶಾಲಾ ದೈಹಿಕ ಶಿಕ್ಷಕಿ ಶ್ಯಾಮಿಲಿ ಇವರು ವೃತ್ತಿ ತರಬೇತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗೆಯೇ ಗಣಕಯಂತ್ರ ಶಿಕ್ಷಕಿ ಸುಶ್ಮಿತಾ ೨೦೨೩-೨೪ನೆಯ ಹಾಗೂ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಶಾಲೆಯಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳ ವೀಡಿಯೋ ತುಣುಕನ್ನು ಪೋಷಕರಿಗೆ ತೋರಿಸಿ ತಮ್ಮ ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಸಹಕರಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಪೋಷಕರು, ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ವೃಂದದವರು ಹಾಜರಿದ್ದರು. ಶಾಲಾ ಉಪನಾಯಕಿ ಚಶ್ಮಿ ನಿರೂಪಿಸಿದರು, ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಡಯಾನ ತಂಡದವರು ಪ್ರಾರ್ಥಿಸಿದರು, ಕೃತಿ ಸ್ವಾಗತಿಸಿ, ಚೆಂಗಪ್ಪ ವಂದಿಸಿದರು.