ಗೋಣಿಕೊಪ್ಪಲು, ಜು. ೨೮: ವಿವಾದದಿಂದ ಸುದ್ದಿಯಲ್ಲಿದ್ದ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿ ಬೆಂಬಲಿತರು ಭರ್ಜರಿ ಜಯ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವಿನ ಪ್ರತಿಷ್ಠೆಗೆ ಕಾರಣವಾಗಿದ್ದ ಈ ಚುನಾವಣೆ ಅತ್ಯಂತ ಕೌತುಕ ಮೂಡಿಸಿತ್ತು. ಉಭಯ ಪಕ್ಷಗಳು ಗೆಲುವಿಗಾಗಿ ಭರ್ಜರಿ ಕಸರತ್ತು ನಡೆಸಿದ್ದವು. ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ತವರು ಕ್ಷೇತ್ರವಾಗಿದ್ದ ಕಾರಣ ಮತ್ತಷ್ಟು ಕುತೂಹಲವೂ ಮೂಡಿತ್ತು. ಇದೀಗ ಎಲ್ಲಾ ಪ್ರಶ್ನೆಗೂ ಉತ್ತರ ದೊರೆತ್ತಿದ್ದು, ಒಟ್ಟು ೧೩ ಸ್ಥಾನಗಳ ಪೈಕಿ ೧೨ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಬೆಂಬಲಿತೆÀ ಗಂಗು ಅವಿರೋಧ ಆಯ್ಕೆಗೊಂಡಿದ್ದರು. ಉಳಿದಂತೆ ಸಾಮಾನ್ಯ ಸಾಲಗಾರ ಕ್ಷೇತ್ರದ ೬ ಸ್ಥಾನಗಳಿಗೆ ೧೨ ಮಂದಿ, ಮಹಿಳಾ ಮೀಸಲು ಕ್ಷೇತ್ರದ ೨ ಸ್ಥಾನಗಳಿಗೆ ೪, ಹಿಂದುಳಿದ ಪ್ರವರ್ಗ ಎ, ಪ್ರವರ್ಗ ಬಿ, ಪರಿಶಿಷ್ಟ ಜಾತಿ, ಸಾಲಗಾರರಲ್ಲದ-ಠೇವಣಿದಾರ ಕ್ಷೇತ್ರಗಳ ತಲಾ ೧ ಸ್ಥಾನಕ್ಕೆ ತಲಾ ಇಬ್ಬರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರ ನಡುವೆ ನೇರ ಹಣಾಹಣಿ ಈ ಚುನಾವಣೆಯಲ್ಲಿ ಏರ್ಪಟ್ಟಿತ್ತು. ಆರೋಪ-ಪ್ರತ್ಯಾ ರೋಪಗಳ ಮೂಲಕ ಜಿಲ್ಲಾದ್ಯಂತ ಸಹಕಾರ ಸಂಘದ ಚುನಾವಣೆ ಸದ್ದು ಮಾಡಿತ್ತು.

ಫಲಿತಾಂಶದ ವಿವರ

ಸಾಮಾನ್ಯ ಸಾಲಗಾರ ಕ್ಷೇತ್ರದ ೬ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಪೂರ್ಣ ಸ್ಥಾನ ಗೆದ್ದುಕೊಂಡರು. ಬಿಜೆಪಿಯ ಅಜ್ಜಿಕುಟ್ಟಿರ ಎ ಬೋಪಣ್ಣ (೪೬೨ ಮತಗಳು), ಅಜ್ಜಿಕುಟ್ಟಿರ ಎಂ ಮುತ್ತಪ್ಪ ಪ್ರವೀಣ್ (೫೦೭), ಕಾಳಿಮಾಡ ನರೇಂದ್ರ (೪೨೫), ಕೋಳೇರ ನರೇಂದ್ರ (೪೨೫), ಕಿರಿಯಮಾಡ ಈಶ ಮಂದಣ್ಣ (೪೪೫), ಮತ್ತಾರಂಡ ಬಿ ಬೋಪಣ್ಣ (೩೫೦) ಗೆಲುವು ಸಾಧಿಸಿದರು.

ಕಾಂಗ್ರೆಸ್‌ನ ಚಂಗುಲAಡ ಸೂರಜ್ (೩೪೦),

೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ನೂರೇರ ಮನೋಹರ್ ಸೋಮಯ್ಯ (೨೮೩), ನೆಲ್ಲಮಾಡ ಉಮೇಶ್ (೨೪೪), ಬೊಳ್ಳಂದAಡ ರೋಶನ್ ಕಾವೇರಪ್ಪ (೨೫೪), ಮತ್ರಂಡ ಟಿ ಸ್ಕಂದ (೧೮೧), ಮಾಣಿಯಪಂಡ ಶರತ್ (೨೧೬) ಸೋಲು ಕಂಡರು.

ಸಾಮಾನ್ಯ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದ ೨ ಸ್ಥಾನಗಳಿಗೆ ಬಿಜೆಪಿಯ ಕಳ್ಳೇಂಗಡ ಪಿ. ಗಾಯತ್ರಿ (೪೩೩), ತೀತಿರ ಎಸ್. ಊರ್ಮಿಳ (೪೬೨) ಗೆಲುವು ಪಡೆದರೆ, ಕಾಂಗ್ರೆಸ್‌ನ ಕಳ್ಳೇಂಗಡ ಆರ್. ಸುಧಾ (೨೮೬), ಮಾರಮಾಡ ಆರ್. ಅಮಿತ (೨೮೦) ಸೋಲು ಅನುಭವಿಸಿದರು.

ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗದ ಪ್ರವರ್ಗ ಎ ಕ್ಷೇತ್ರಕ್ಕೆ ಬಿಜೆಪಿಯ ಮೇಲತಂಡ ರಮೇಶ್ (೪೭೨) ಗೆಲುವು ಸಾಧಿಸಿದರೆ, ಬಾಳೇರ ಯು. ಸುಬ್ರಮಣಿ (೨೮೪) ಸೋಲು ಕಂಡರು. ಪ್ರವರ್ಗ ಬಿ ಕ್ಷೇತ್ರದಲ್ಲಿ ಚೇಂದಿರ ಡಿ. ತಿಮ್ಮಯ್ಯ (೪೧೮) ಗೆದ್ದರೆ, ಇಟ್ಟಿರ ಎಂ ಪೊನ್ನಣ್ಣ (೩೪೭) ಸೋತರು. ಸಾಮಾನ್ಯ ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಹೆಚ್.ಕೆ. ರಾಜಪ್ಪ (೪೭೦) ಗೆಲುವು ಕಂಡರೆ, ಹೆಚ್.ಎನ್. ಕೃಷ್ಣ (೨೮೬) ಪರಭಾವಗೊಂಡರು.

ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿ ಗೆಲುವು

೧೩ ಸ್ಥಾನಗಳ ಪೈಕಿ ಒಂದು ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ೨೧೫ ಮತಗಳನ್ನು ಪಡೆದು ಗೆಲುವು ಪಡೆದರೆ, ಇವರ ಎದುರಾಳಿ ಸ್ಪರ್ಧಿಸಿದ್ದ ಸಹೋದರ ಮೀದೇರಿರ ಸವೀನ ೧೭೨ ಮತಗಳನ್ನು ಪಡೆದು ಸೋಲು ಕಂಡರು.

ಬಿರುಸಿನ ಮತದಾನ

ಬೆಳಿಗ್ಗೆ ೯ ಗಂಟೆಯಿAದ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತು. ಸಂಜೆಯ ನಾಲ್ಕು ಗಂಟೆಯವರೆಗೂ ಯಾವುದೇ ಅಡೆತಡೆ ಇಲ್ಲದೆ ಚುನಾವಣೆ ನಡೆಯಿತು. ಬೆಳಿಗ್ಗೆಯಿಂದಲೇ ಮಳೆ ಇಲ್ಲದ ಹಿನ್ನೆಲೆ ಉತ್ಸಾಹದಿಂದ ಹೆಚ್ಚಿನ ಮತದಾರರು ಆಗಮಿಸಿದರು. ಹುದಿಕೇರಿ, ಬೆಳ್ಳೂರು, ಹೈಸೊಡ್ಲೂರು ಕೋಣಗೇರಿ, ನಡಿಕೇರಿ ಬೇಗೂರು ಗ್ರಾಮದ ಸದಸ್ಯರು ಮತದಾನ ಮಾಡಿದರು. ಹುದಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಮತದಾನ ಪ್ರಕ್ರಿಯೆ ಹಾಗೂ ಎಣಿಕೆ ಕಾರ್ಯ ನಡೆಯಿತು. ಎರಡು ಪಕ್ಷದ ಮುಖಂಡರುಗಳು ಮತದಾನ ಎಣಿಕೆ ಕೇಂದ್ರದ ಬಳಿ ನೆರೆದಿದ್ದರು. ಚುನಾವಣಾ ಅಧಿಕಾರಿಯಾಗಿ ಸಂದೀಪ್ ಕಾರ್ಯ ನಿರ್ವಹಿಸಿದರು. ಮತ ಎಣಿಕೆಯ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಚೆಕ್ಕೇರ ವಾಸು ಕುಟ್ಟಪ್ಪ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಕೇಚಮಾಡ ಶಿವು ನಾಚಪ್ಪ, ಅಜ್ಜಿಕುಟ್ಟಿರ ಗಿರೀಶ್, ನೂರೇರ ರಮೇಶ್, ಇಟ್ಟಿರ ಭವಿನ್ ಕುಶಾಲಪ್ಪ, ಶಾಜಿ ಅಚ್ಚುತ್ತನ್, ಬಿಜೆಪಿ ಪಕ್ಷದ ಮುಖಂಡರಾದ ಕುಂಞAಗಡ ಅರುಣ್ ಭೀಮಯ್ಯ, ಮಾಚಿಮಾಡ ರವೀಂದ್ರ, ವಾಟೇರಿರ ಬೋಪಣ್ಣ, ನೆಲ್ಲೀರ ಚಲನ್ ಕುಮಾರ್, ಬೊಜ್ಜಂಗಡ ಸುನಿಲ್, ಕುಪ್ಪಣಮಾಡ ಕುಶ, ಕೊಟ್ಟಂಗಡ ರಾಜ ಸುಬ್ಬಯ್ಯ, ಅಳಮೇಂಗಡ ಮುದ್ದಪ್ಪ, ಮಂಡಚAಡ ದಿನೇಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಬಿಜೆಪಿಯಿಂದ ಸಂಭ್ರಮಾಚರಣೆ

ಗೆಲುವು ದಾಖಲಿಸುತ್ತಿದಂತೆ ಬಿಜೆಪಿ ಕಾರ್ಯಕರ್ತರು ವಾಲಗದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ, ಜಯಘೋಷ ಕೂಗಿ ವಿಜಯೋತ್ಸವ ಆಚರಿಸಿದರು.

ಕಾಂಗ್ರೆಸ್ ಪಕ್ಷದ ಮೀದೇರಿರ ನವೀನ್ ಮಾತನಾಡಿ, ಚುನಾವಣೆಯಲ್ಲಿ ಶಾಸಕರ ಹಸ್ತಕ್ಷೇಪ ಇರಲಿಲ್ಲ. ಕೆಲವು ಮಂದಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಉತ್ತಮ ಹೋರಾಟ ನೀಡಿದ್ದಾರೆ. ಮತದಾರರ ನಿರ್ಧಾರಕ್ಕೆ ತಲೆ ಬಾಗುತ್ತೇವೆ. ಸಂಘದ ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಎಂದರು.

ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷರುಗಳಾದ ಚೇಂದಿರ ರಘು ಹಾಗೂ ಅಜ್ಜಿಕುಟ್ಟಿರ ಪ್ರವೀಣ್ ಮಾತನಾಡಿ ಚುನಾವಣೆಯನ್ನು ಕಾಣದ ಕೈಗಳು ಆಗಿಂದಾಗ್ಗೆ ಮುಂದೂಡುವ ಪ್ರಯತ್ನ ಮಾಡಿದವು. ಇದರಿಂದ ಸದಸ್ಯರಿಗೆ ಸಮಸ್ಯೆ ಎದುರಾಗಿತ್ತು. ಜನರ ಆಶೀರ್ವಾದ ಇದೀಗ ಬಿಜೆಪಿ ಸದಸ್ಯರಿಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಂಘದ ಅಭಿವೃದ್ಧಿಗೆ ಮುಂದೆ ಶಾಸಕರ ಸಹಕಾರ ನಿರೀಕ್ಷೆ ಮಾಡುತ್ತೇವೆ. ಸಂಘದ ಸದಸ್ಯರಿಗೆ ಉತ್ತಮ ಸೇವೆ ನೀಡಲು ಬದ್ದರಾಗಿದ್ದೇವೆ ಎಂದರು.