ಚೆಟ್ಟಳ್ಳಿ, ಜು. ೨೮: ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚಾಲೆಂಜ್’ ಅಂತರರಾಷ್ಟಿçÃಯ ಮಟ್ಟದ ಸಾಹಸಮಯ ರ‍್ಯಾಲಿಯಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ದಿ ಇಂಟರ್ ನ್ಯಾಷನಲ್ ಆಫ್ ರೋಡ್ ಚಾಲೆಂಜ್ ಆಫ್ ಮಲೇಶಿಯಾ ಸಂಸ್ಥೆ ವತಿಯಿಂದ ನಡೆದ ಅಂತರರಾಷ್ಟಿçÃಯ ಮಟ್ಟದ ‘ರೈನ್ ಫಾರೆಸ್ಟ್ ಚಾಲೆಂಜ್’ನಲ್ಲಿ ದಟ್ಟವಾದ ಕಾಡುಗಳು, ನದಿಗಳು ಹಾಗೂ ಕಠಿಣಕರ ಇಳಿಜಾರು ರಸ್ತೆಯಲ್ಲಿ ನ್ಯಾವಿಗೇಟ್ ಮಾಡುವ ಆಫ್ ರೋಡಿಂಗ್ ಹಂತಗಳ ಸರಣಿಯನ್ನು ಪೂರ್ಣಗೊಳಿಸಿ ಕೊಡಗಿನ ಯುವ ರ‍್ಯಾಲಿಪಟು ಕೊಡಗಿನ ಚೇತನ್ ಚಂಗಪ್ಪ ಹಾಗೂ ಅರುಣಾಚಲ ಪ್ರದೇಶದ ಉಜ್ಜಲ್ ನಮ್ಶುಮ್ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಜೋಡಿ ಸವಾಲಿನ ಭೂಪ್ರದೇಶವನ್ನು ಒಳಗೊಂಡ ೨೬ ಹಂತಗಳಲ್ಲಿ ನದಿ ದಾಟುವುದು, ಕಡಿದಾದ ಇಳಿಜಾರುಗಳು, ಮಣ್ಣಿನ ಹಾದಿಗಳು ಮತ್ತು ದಟ್ಟಕಾಡಿನ ಭೂಪ್ರದೇಶಗಳಲ್ಲಿ ಭಾರೀ ಮಳೆ ಗಾಳಿಯ ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಜೋಡಿ ಎಲ್ಲಾ ಸವಾಲುಗಳನ್ನು ಎದುರಿಸಿ, ೧೬೧೧ ರಿಂದ ೩೦೧೦ ಸಿಸಿ ಪೆಟ್ರೋಲ್ ಕ್ಲಾಸ್ ವಿಭಾಗದಲ್ಲಿ ಮೊದಲ ಹಾಗೂ ಸಮಗ್ರ ವಿಭಾಗದಲ್ಲಿ ಫಸ್ಟ್ ರನ್ನರ್ ಆಪ್ ಆದರು. ಈವೆಂಟ್‌ನಲ್ಲಿ ಚುರುಕಾದ ಯುವ ರ‍್ಯಾಲಿಪಟು ಚೇತನ್ ಚಂಗಪ್ಪ ಅವರ ಸಾಧನೆಯ ಮೂಲಕ ಓವರ್ ಚಾಂಪಿಯನ್‌ಶಿಪ್ ಆಗಿದ್ದಾರೆ.

೨೦೧೮, ೨೦೧೯ ಹಾಗೂ ೨೦೨೨ರಲ್ಲಿ ನಡೆದ ರೈನ್‌ಫಾರೆಸ್ಟ್ ಚಾಲೆಂಜ್‌ನಲ್ಲಿ ಸಮಗ್ರ ಚಾಂಪಿಯನ್ ಹಾಗೂ ೨೦೧೭, ೨೦೨೩, ೨೦೨೪ ರಲ್ಲಿ ಗೆಲುವನ್ನು ಸಾಧಿಸುವ ಮೂಲಕ ಭಾರತದ ಆರ್‌ಎಫ್‌ಸಿಯಲ್ಲಿ ನಡೆದ ಅಂತರರಾಷ್ಟಿçÃಯ ರ‍್ಯಾಲಿ ಈವೆಂಟ್‌ನಲ್ಲಿ ೩ ಬಾರಿ ೧ ನೇ ಮತ್ತು ೩ ಬಾರಿ ೨ ನೇ ಸ್ಥಾನವನ್ನು ಸಾಧಿಸುವ ಮೂಲಕ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದಾರೆ. -ಪುತ್ತರಿರ ಕರುಣ್ ಕಾಳಯ್ಯ