ಗೋಣಿಕೊಪ್ಪಲು, ಜು.೨೯: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾಯಿ ಕಟ್ಟಿದ್ದ ಕಾಫಿ ಬೀಜಗಳು ಅತೀ ತೇವಾಂಶದಿAದ ಒಂದೇ ಸಮನೆ ಉದುರುತ್ತಿದ್ದು ಇದರಿಂದ ಕೊಡಗಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕಾಫಿ ಮಂಡಳಿ ಅಧಿಕಾರಿಗಳು ರೈತರ ಕಾಫಿ ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸುವ ಮೂಲಕ ಸರ್ಕಾರಕ್ಕೆ ವರದಿ ನೀಡಬೇಕು. ಮೂರು ದಿನದ ಒಳಗೆ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷÀ ಕಾಡ್ಯಮಾಡ ಮನು ಸೋಮಯ್ಯ ಕಾಫಿ ಬೋರ್ಡ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಬಳಿಯ ಕಾಫಿ ಬೋರ್ಡ್ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿರುವುದರಿಂದ ಕಾಫಿಯನ್ನೇ ಮೂಲ ಬೆಳೆಯಾಗಿ ನಂಬಿಕೊAಡು ಬಂದಿರುವ ರೈತರಿಗೆ ನಷ್ಟ ಸಂಭವಿಸುತ್ತಿದೆ. ಅಲ್ಲದೆ ಕಾರ್ಮಿಕರ ವೇತನವು ಕೂಡ ಹೆಚ್ಚಾಗುತ್ತಿದೆ.

ಕಾಫಿ ತೋಟದಲ್ಲಿ ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಉಪಟಳವು ನಿರಂತರವಾಗಿ ನಡೆಯುತ್ತಿದೆ. ಇದರ ಮಧ್ಯದಲ್ಲಿ ಇದೀಗ ಕಾಫಿ ಉದುರುವಿಕೆ ರೈತನಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಕಾಫಿ ಮಂಡಳಿಯು ತಕ್ಷಣ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ಸಮೀಕ್ಷೆಯು ನಿಧಾನಗತಿಯಲ್ಲಿ ಸಾಗಿದರೆ ರೈತನ ತೋಟದಲ್ಲಿ ಈಗಾಗಲೇ ಉದುರಿರುವ ಕಾಫಿ ಬೀಜಗಳ ಮಾಹಿತಿ ಅಷ್ಟಾಗಿ ಅಧಿಕಾರಿಗಳಿಗೆ ಲಭ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ತಕ್ಷಣವೇ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದರು.

ಸಮೀಕ್ಷೆಗೆ ತೆರಳುವ ಸಂದರ್ಭ ಎಲ್ಲಾ ಪ್ರದೇಶಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸದಿರಿ, ಕೇಂದ್ರ ಹಾಗೂ ರಾಜ್ಯದ ಎನ್‌ಡಿಆರ್‌ಎಫ್, ಮತ್ತು ಎಸ್‌ಡಿಆರ್‌ಎಫ್ ಯೋಜನೆ ಅನ್ವಯ ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಈಗಾಗಲೇ ದ.ಕೊಡಗಿನ ಬೀರುಗ, ಶ್ರೀಮಂಗಲ, ಹುದಿಕೇರಿ, ಬಿರುನಾಣಿ ಭಾಗದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಬಾಳೆಲೆ, ಮಾಯಮುಡಿ, ಕೋಣನಕಟ್ಟೆ ಇತರ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದರೂ ಕಾಫಿ ಉದುರುವಿಕೆ ಹೆಚ್ಚಾಗಿದೆ. ಆದ್ದರಿಂದ ಸಮೀಕ್ಷೆಗೆ ತೆರಳುವ ಅಧಿಕಾರಿಗಳು ನ್ಯಾಯಬದ್ದವಾಗಿ ಸಮೀಕ್ಷೆ ನಡೆಸಬೇಕು, ಸರ್ಕಾರಕ್ಕೆ ನೀಡುವ ವರದಿಯ ಪ್ರತಿಯನ್ನು ರೈತ ಸಂಘದ ಪದಾಧಿಕಾರಿಗಳಿಗೂ ನೀಡುವಂತಾಗಬೇಕು ಎಂದು ಮಳೆಯಿಂದಾದ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿ£ವಜ್ರುಬೋಪಣ್ಣ, ಬೇಟೋಳಿಯ ಶೈಲೇಶ್ ಸೇರಿದಂತೆ ಇನ್ನಿತರ ಪ್ರಮುಖರು ತಮ್ಮ ತೋಟದಲ್ಲಿ ಮಳೆಯಿಂದಾದ ನಷ್ಟದ ಬಗ್ಗೆ ಬೆಳಕು ಚೆಲ್ಲಿದರು. ಕಾಫಿ ಮಂಡಳಿಗೆ ಕಾರ್ಯನಿಮಿತ್ತ ಬರುವ ರೈತರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು. ಈ ಬಗ್ಗೆ ಕಚೇರಿಯಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಹಿರಿಯ ರೈತರಾದ ಚೊಟ್ಟೆಯಂಡಮಾಡ ಬೋಸ್ ತಿಳಿಸಿದರು.

ಕಾಫಿ ಮಂಡಳಿಯ ಜಂಟಿ ನಿರ್ದೇಶಕರಾದ ಡಾ.ಶ್ರೀದೇವಿ ಸಭೆಗೆ ಆಗಮಿಸಿದ್ದ ರೈತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ ಕಾಫಿ ಮಂಡಳಿಯು ಸದಾ ರೈತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ದ.ಕೊಡಗಿನಲ್ಲಿ ವಾಡಿಕೆಗಿಂತ ಶೇ.೬೭ರಷ್ಟು ಹೆಚ್ಚಿನ ಮಳೆಯಾಗಿದೆ. ಈಗಾಗಲೇ ರೈತರಿಂದ ಕಾಫಿ ಉದುರುವಿಕೆಯಿಂದಾಗಿ ದೂರುಗಳು ಬಂದಿವೆ. ಒಂದು ಸುತ್ತಿನ ಸಮೀಕ್ಷಾ ಕಾರ್ಯವನ್ನು ಇಲಾಖಾಧಿಕಾರಿಗಳು ಮಾಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಲಾಗಿದೆ. ತಮ್ಮ ಅಪೇಕ್ಷೆಯಂತೆ ಹಿರಿಯ ಅಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ಕುರಿತು ಪತ್ರ ಬರೆಯಲಾಗುವುದು. ಅಧಿಕಾರಿಗಳ ನಿರ್ದೇಶನ ಬರುತ್ತಿದ್ದಂತೆಯೇ ಕಂದಾಯ, ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಸಮೀಕ್ಷೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ. ತಮ್ಮ ಕಾಫಿ ತೋಟದ ಸಮೀಕ್ಷೆಗೆ ಆಗಮಿಸಿದ ಸಂದರ್ಭ ರೈತರಿಗೆ ಮಾಹಿತಿಯನ್ನು À ವಿವಿಧ ಭಾಗದಿಂದ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳಾದ ಕಿರುಗೂರಿನ ಆಲೆಮಾಡ ಮಂಜುನಾಥ್, ಮಾಯಮುಡಿಯ ಪುಚ್ಚಿಮಾಡ ರಾಯ್ ಮಾದಪ್ಪ, ಕೋಣನಕಟ್ಟೆಯ ಪುಚ್ಚಿಮಾಡ ಸುಭಾಶ್, ನಲ್ಲೂರಿನ ಚೆಟ್ರುಮಾಡ ಸುಜಯ್ ಬೋಪಯ್ಯ,ಶ್ರೀಮಂಗಲದ ಅಜ್ಜಮಾಡ ಚಂಗಪ್ಪ, ಪುಚ್ಚಿಮಾಡ ಲಾಲಾ ಪೂಣಚ್ಚ, ನಿಟ್ಟೂರಿನ ತೀತಮಾಡ ರಾಜ, ಸಿದ್ದಾಪುರದ ನೀಡುತ್ತೇವೆ. ಪಾರದರ್ಶಕವಾಗಿ ಸಮೀಕ್ಷೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ. ಇದರ ಬಗ್ಗೆ ರೈತರಿಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ಕಾಫಿ ಮಂಡಳೀಯ ವಿಜ್ಞಾನಿ ಡಾ.ಮುಖಾರಿಬ್ ಮಾತನಾಡಿ ಈಗಾಗಲೇ ಕಾಫಿ ಫಸಲಿಗೆ ಬಾಧಿಸುತ್ತಿರುವ ಕೊಳೆ ರೋಗದ ಬಗ್ಗೆ ರೈತರು ಮುನ್ನಚ್ಚರಿಕಾ ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕೆಂಬ ವಿವರವನ್ನು ರೈತರಿಗೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ ರೈತರು ಹಲವು ಸಮಸ್ಯೆಗಳಿಗೆ ಪರಿಹಾರ ಮಾರ್ಗದ ಬಗ್ಗೆ ವಿವರ ಪಡೆದರು. ಸಭೆಯಲ್ಲಿ ಕಾಫಿ ಮಂಡಳಿಯ ಸಂಪರ್ಕ ಅಧಿಕಾರಿಗಳಾದ ಶ್ರೀರಮಣ, ವಿವಿಧ ಅಧಿಕಾರಿಗಳಾದ ಧನ್ಯ, ಮಹಿಜ, ಅಮಿತ್, ಸುಲೋಚನ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ರೈತ ಸಂಘದ ಪದಾಧಿಕಾರಿಗಳಾದ ಪುಚ್ಚಿಮಾಡ ಕವಿತ, ಗಣೇಶ್, ಚೊಟ್ಟೆಕಾಳಪಂಡ ಮನು, ತೀತರಮಾಡ ಗಿರೀಶ್, ಮುಂತಾದವರು ಹಾಜರಿದ್ದರು.

-ಹೆಚ್.ಕೆ. ಜಗದೀಶ್