ನಾಪೋಕ್ಲು, ಜು. ೨೯: ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾರೆ. ಸೈನಿಕರ ತ್ಯಾಗ ಬಲಿದಾನವನ್ನು ಪ್ರತಿ ದಿನ ಸ್ಮರಿಸಬೇಕಾಗಿದೆ ಎಂದು ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು. ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸ ಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭ ಪೇರೂರು ಗ್ರಾಮದ ನಿವೃತ್ತ ಸುಬೇದಾರ್ ಪಾಲೆಯಡ ಡಾಲು ಪೂಣಚ್ಚ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಕೋಶಾಧಿಕಾರಿ ಕಾಂಡAಡ ರೇಖಾ ಪೊನ್ನಣ್ಣ ಸನ್ಮಾನಿಸಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬೇದಾರ್ ಡಾಲು ಪೂಣಚ್ಚ ತಮ್ಮ ಸೇವೆಯ ಸಿಹಿಕಹಿ ಅನುಭವಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಸನ್ಮಾನಿತರ ಕುಟುಂಬಸ್ಥರು, ಲಯನ್ಸ್ ಕ್ಲಬ್‌ನ ಸದಸ್ಯರಾದ ಮುಕ್ಕಾಟಿರ ವಿನಯ್, ಮಾದೆಯಂಡ ಬಿ. ಕುಟ್ಟಪ್ಪ, ಅಪ್ಪಚೆಟ್ಟೋಳಂಡ ಪಿ.ಮುತ್ತಪ್ಪ, ಕುಂಡ್ಯೋಳAಡ ಮುತ್ತಪ್ಪ, ಅಪ್ಪಾರಂಡ ಎಸ್. ಸುಭಾಷ್ ತಿಮ್ಮಯ್ಯ, ಕುಂಚೆಟ್ಟಿರ ಡಿ ಉತ್ತಪ್ಪ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಶೈಲಾ ಭೀಮಯ್ಯ ನಿವೃತ್ತ ಯೋಧ ಕೇಟೋಳಿರ ಡಾಲಿ ಅಚ್ಚಪ್ಪ ಪಾಲ್ಗೊಂಡಿದ್ದರು.