ಮಡಿಕೇರಿ, ಜು. ೨೯: ಹಾವು ಕಚ್ಚಿ ನಿವೃತ್ತ ಅಧಿಕಾರಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ರೇಸ್ಕೋರ್ಸ್ ರಸ್ತೆಯ ನಿವಾಸಿ ವಾಯುಸೇನಾ ಹಾಗೂ ಎಲ್.ಐ.ಸಿ.ಯ ನಿವೃತ್ತ ಅಧಿಕಾರಿ ಬೈತಡ್ಕ ಬೆಳ್ಳಿಯಪ್ಪ (೮೧) ಎಂಬವರೆ ಮೃತ ದುರ್ದೈವಿ. ನಿನ್ನೆ ದಿನ ಪಾಲೂರಿನ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಹಾವು ಕಚ್ಚಿತ್ತು. ಅಂತ್ಯಕ್ರಿಯೆ ತಾ. ೩೦ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಸಾಹಿತಿ ಬೈತಡ್ಕ ಜಾನಕಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸಂತಾಪ : ಬೈತಡ್ಕ ಬೆಳ್ಳಿಯಪ್ಪ ನಿಧನಕ್ಕೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರು ಹಾಗೂ ರಿಜಿಸ್ಟಾçರ್ ಅವರು ಸಂತಾಪ ಸೂಚಿಸಿದ್ದಾರೆ.
ಬೈತಡ್ಕ ಬೆಳ್ಳಿಯಪ್ಪ ಅವರು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಸಂಬAಧ ಹಲವು ಹೊತ್ತಿಗೆ ಹೊರತರುವಲ್ಲಿ ಶ್ರಮಿಸಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ.