ಪೊನ್ನಂಪೇಟೆ, ಜು. ೨೯: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊನ್ನಂಪೇಟೆ, ಕಾನೂರು, ನಿಟ್ಟೂರು, ಪೊನ್ನಪ್ಪಸಂತೆ, ಬಾಳೆಲೆ ಗ್ರಾಮಗಳ ಆಟೋ ಮಾಲೀಕರು ಹಾಗೂ ಚಾಲಕರು, ಬಾಡಿಗೆ ಕಾರು ಮಾಲೀಕರು ಹಾಗೂ ಚಾಲಕರು ಹಾಗೂ ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಜನ ಸಂಪರ್ಕ ಸಭೆ ನಡೆಯಿತು.

ವೀರಾಜಪೇಟೆ ಉಪ ವಿಭಾಗ ಪ್ರಬಾರ ಡಿ.ವೈ.ಎಸ್.ಪಿ. ಗಂಗಾಧರಪ್ಪ ಅವರ ನಿರ್ದೇಶನದ ಮೇರೆಗೆ ಗೋಣಿಕೊಪ್ಪ ವೃತ್ತ ನೀರಿಕ್ಷಕ ಶಿವರಾಜ್ ಮುಧೋಳ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್ ಮಾತನಾಡಿ, ಚಾಲಕರು ಕಡ್ಡಾಯವಾಗಿ ಸಮವಸ್ತçವನ್ನು ಧರಿಸಬೇಕು. ಠಾಣಾ ವ್ಯಾಪಿಗೆ ಒಳಪಡುವ ವಾಹನಗಳ ದಾಖಲಾತಿಗಳನ್ನು ಠಾಣೆಯಲ್ಲಿ ಹಾಜರುಪಡಿಸಿ, ಠಾಣೆಯಲ್ಲಿ ಕೊಡುವ ಸೀರಿಯಲ್ ನಂಬರ್ ಹಾಗೂ ಸಂಪೂರ್ಣ ವಿವರ ಹೊಂದಿರುವ ಪಟ್ಟಿಯನ್ನು ವಾಹನಗಳ ಒಳಭಾಗದಲ್ಲಿ ಅಂಟಿಸಬೇಕು. ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಆಟೋ ಹಾಗೂ ಕಾರುಗಳಲ್ಲಿ ಹಳದಿ ಭಾವುಟವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ರಾತ್ರಿ ಎಂಟು ಗಂಟೆಯ ಬಳಿಕ ಬಾಡಿಗೆ ವಾಹನಗಳನ್ನು ಚಲಾಯಿಸುವವರು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹಾಜರಾಗಿ ಕಡ್ಡಾಯವಾಗಿ ದಾಖಲಾತಿ ತೋರಿಸಿ ವಾಹನ ಚಾಲಿಸಬೇಕೆಂದು ಸಲಹೆ ನೀಡಿದರು.

ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಆಟೋ, ಗೂಡ್ಸ್ ವಾಹನ ಚಾಲಕರು, ಮಾಲೀಕ ಮತ್ತು ಚಾಲಕರ ಸಂಘದ ಸದಸ್ಯತ್ವವನ್ನು ಪಡೆದು ಸಂಘದಿAದ ಗುರುತಿಸಿದ ಸ್ಥಳದಲ್ಲೇ ವಾಹನವನ್ನು ನಿಲ್ಲಿಸಬೇಕು. ಸಂಘದ ಸದಸ್ಯತ್ವ ಪಡೆದುಕೊಳ್ಳದ ಚಾಲಕರ ಮಾಹಿತಿಯನ್ನು ಆಯಾಯಾ ಠಾಣೆಗೆ ನೀಡಬೇಕು. ೧೫ ದಿನಗಳ ಒಳಗೆ ಎಲ್ಲಾ ಚಾಲಕರು ಕಡ್ಡಾಯವಾಗಿ ಸಮವಸ್ತç ಧರಿಸಬೇಕು ಹಾಗೂ ತೋಟದ ಮಾಲೀಕರು ಹೊಸದಾಗಿ ಬರುವ ಕಾರ್ಮಿಕರ ದಾಖಲಾತಿ ಪಡೆದು ಮಾಹಿತಿಯನ್ನು ಆಯಾಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಆಟೋ ಮಾಲೀಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಗೂಡ್ಸ್ ವಾಹನ ಮಾಲೀಕ ಹಾಗೂ ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಬಾಡಿಗೆ ಕಾರು ಮಾಲೀಕ ಹಾಗೂ ಚಾಲಕ ಎ.ಎಸ್. ಪೊನ್ನಪ್ಪ, ಪೊನ್ನಂಪೇಟೆ ಪೊಲೀಸ್ ಅಪರಾಧ ವಿಭಾಗದ ಠಾಣಾಧಿಕಾರಿ ಸುಬ್ರಮಣಿ, ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಚಿಣ್ಣಪ್ಪ, ಬಸವರಾಜ್, ರಮ್ಯಾ, ಬಸಮ್ಮ ಸೇರಿದಂತೆ ವಿವಿಧ ವಾಹನ ಚಾಲಕರ ಸಂಘದ ಸದಸ್ಯರು ಹಾಜರಿದ್ದರು.