ಮಡಿಕೇರಿ, ಜು. ೨೯: ಮಡಿಕೇರಿ-ಕುಟ್ಟ ರಾಜ್ಯ ಹೆದ್ದಾರಿ ೮೯ರ ನಡುವಿನ ಮಂಚಳ್ಳಿಯ ನಡುವೆ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕುಟ್ಟ-ಶ್ರೀಮಂಗಲ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾ. ೨೯ ರಿಂದ ಆಗಸ್ಟ್ ೨೭ರ ತನಕ ನಿಷೇಧಿಸಲಾಗಿದ್ದು, ಸಾರ್ವಜನಿಕರು ಕುಟ್ಟ-ಕೇಂಬುಕೊಲ್ಲಿ-ಕಾನೂನು ರಸ್ತೆಯ ಮೂಲಕ ಕುಟ್ಟ-ಪೊನ್ನಂಪೇಟೆ ನಡುವೆ ಸಂಚರಿಸಬಹುದಾಗಿದೆ. ಇದರೊಂದಿಗೆ ಶ್ರೀಮಂಗಲ-ನಾಲ್ಕೇರಿ, ಕಾಕೂರು-ಹೇರ್ಮಾಡು-ಬೊಳ್ಳಾರಿಗೇಟ್ ಲಿಂಕ್ ರಸ್ತೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.