ಮಡಿಕೇರಿ, ಜು. ೨೯ : ಅತ್ಯಂತ ಸೂಕ್ಷö್ಮ ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯವನ್ನು ಕೊಡವಲ್ಯಾಂಡ್‌ನಿAದಲೇ ಸ್ಥಾನಪಲ್ಲಟ ಗೊಳಿಸುವ ದುರುದ್ದೇಶದಿಂದ ಕೊಡವರನ್ನು ನಿತ್ಯ ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂ ಪರಿವರ್ತನೆ ಮತ್ತು ಭೂವಿಲೇವಾರಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ಸಿಎನ್‌ಸಿ ವತಿಯಿಂದ ನಡೆದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭೂ ಮಾಫಿಯಾ, ಕಾರ್ಪೋರೆಟ್ ಮಾಫಿಯಾ, ರಾಜಕೀಯ ನಂಟು ಹೊಂದಿರುವ ಆರ್ಥಿಕ ಅಪರಾಧಿಗಳು ಸೇರಿದಂತೆ ದೇಶ ವಿದೇಶದ ಬಂಡವಾಳಶಾಹಿ ವರ್ಗ ಪವಿತ್ರ ಕಾವೇರಿ ನದಿ ಹುಟ್ಟುವ ಕೊಡವ ಭೂಮಿಯ ಎಲ್ಲಾ ಸಂಪನ್ಮೂಲಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಅನುಭವಿಸುತ್ತಿದೆ. ಆದರೆ ಕೊಡವರು ಕಾವೇರಿ ನೀರನ್ನು ಕೂಡ ಬಳಸಲು ಅನರ್ಹರು ಎನ್ನುವ ರೀತಿ ಆಡಳಿತ ವ್ಯವಸ್ಥೆ ಶೋಷಣೆ ಮಾಡುತ್ತಿದೆ. ಕೊಡಗನ್ನು ತಮ್ಮ ಆಕ್ರಮಿತ ವಸಾಹತು ಎಂದು, ಕೊಡವರು ಆ ವಸಾಹತಿನ ಅಧೀನ ಪ್ರಜೆಗಳೆಂದು ಕರ್ನಾಟಕ ಸರ್ಕಾರ ಪರಿಗಣಿಸಿದಂತಿದೆ. ಕೊಡವರನ್ನು ಹಕ್ಕುಗಳನ್ನು ಕಸಿದುಕೊಂಡು ಕೊಡವ ಲ್ಯಾಂಡ್‌ನಿAದಲೇ ದೂರ ಮಾಡಲು ಷಡ್ಯಂತ್ರಗಳು ನಡೆಯುತ್ತಿವೆೆ ಎಂದು ಆರೋಪಿಸಿದರು.
ಭಾಗಮಂಡಲದಲ್ಲಿ ಕೊಡವ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಕಾಮಗಾರಿಗೆ ಭೂ ಪರಿವರ್ತನೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಆದರೆ ಭೂ ಮಾಫಿಯಾ ಮತ್ತು ಕಾರ್ಪೋರೇಟ್ ವಲಯಗಳಿಗೆ ಯಾವುದೇ ವಿಳಂಬ ಮಾಡದೆ ಒತ್ತಡಕ್ಕೆ ಮಣಿದು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡಿಕೊಡ ಲಾಗುತ್ತಿದೆ. ತಡಿಯಂಡ್ ಮೋಳ್ ನಿಂದ ಹಿಡಿದು ಪುಷ್ಪಗಿರಿ ಮತ್ತು ಬ್ರಹ್ಮಗಿರಿವರೆಗೆ ನಿಷೇಧಿತ ಪ್ರದೇಶದಲ್ಲಿ ಭೂಪರಿವರ್ತನೆಯಾಗುತ್ತಿದೆ ಎಂದು ದೂರಿದರು.
ಜನಜಾಗೃತಿ ಕಾರ್ಯಕ್ರಮದಲ್ಲಿ ಬೊಟ್ಟಂಗಡ ಸವಿತಾ, ಅಜ್ಜಮಾಡ ಸಾವಿತ್ರಿ, ಕಟ್ಟೇರ ಗ್ರೇಸಿ ಉದಯ, ಕಿರಿಯಮಾಡ ಗ್ರೇಸಿ ಶೆರೀನ್, ಬಲ್ಲಡಿಚಂಡ ಬೇಬಿ ಮೇದಪ್ಪ, ಲೆಫ್ಟಿನೆಂಟ್ ಕರ್ನಲ್ (ನಿ.,) ಬಿ.ಎಂ.ಪಾರ್ವತಿ, ಕುಂಞಗAಡ ನಮೃತಾ, ಪೊಕ್ಳೊಂಗಡ ಡೀನಾ, ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಮಚ್ಚಮಾಡ ಸುಮಂತ್, ಕಟ್ಟೇರ ಉದಯ, ಕಾಯಪಂಡ ಕಾವೇರಪ್ಪ, ಚಟ್ಟಂಗಡ ಸಜನ್ ಸೋಮಣ್ಣ, ಬೊಟ್ಟಂಗಡ ಗಿರೀಶ್ ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಅಪ್ಪೆಂಗಡ ಮಾಲೆ, ಮಾಣೀರ ರಮೇಶ್, ಮಾಣೀರ ಪ್ರವೀಣ್, ಚಿಮ್ಮಣೀರ ಕಾರ್ಯಪ್ಪ, ಚಟ್ಟಂಗಡ ನಂಜಪ್ಪ, ಮಚ್ಚಮಾಡ ನಂದಾ, ಮುಂಡAಡ ಬಬ್ಬು, ಚಟ್ಟಂಗಡ ಆದರ್ಶ್, ಮೀದೇರಿರ ಸೋಮಯ್ಯ, ಪೊನ್ನಕಚ್ಚಿರ ಧನು, ನೂರೇರ ವಿಜಯ್, ಕೊದೇಂಗಡ ಬೋಪಯ್ಯ, ಕಾಳಿಮಾಡ ಕಿರಣ್, ಕುಂಞAಗಡ ನೆಹರು, ಚಟ್ಟಂಗಡ ಅಪ್ಪಣ್ಣ, ಚೊಟ್ಟೆಯಂಡಮಾಡ ಪೂಣಚ್ಚ, ಬೊಳ್ಳೇರ ಬೊಳ್ಯಪ್ಪ, ಬೊಟ್ಟಂಗಡ ಡಾಲಿ, ಚೊಟ್ಟೆಯಂಡಮಾಡ ಮೊಣ್ಣಪ್ಪ, ಮುಕ್ಕಾಟಿರ ಸುಬ್ಬಯ್ಯ, ಪೊಕ್ಳೊಂಗಡ ಕಾಶಿ, ಮಾಯಣಮಾಡ ತಿಮ್ಮಯ್ಯ,
ಬಾಚಿರ ಸೋಮಣ್ಣ, ದೇಕಮಾಡ ಪೂಣಚ್ಚ, ಬೊಟ್ಟಂಗಡ ಚಿನ್ನಪ್ಪ, ಚೊಟ್ಟೆಯಂಡಮಾಡ ಗಣೇಶ್, ಪೆಮ್ಮಣಮಾಡ ಚೆಂಗಪ್ಪ, ಮುಕ್ಕಾಟಿರ ಪ್ರಭು, ಮಾಣೀರ ಮುತ್ತಪ್ಪ, ಚೊಟ್ಟೆಯಂಡಮಾಡ ಗಣಪತಿ, ತೀತಿರ ಡಿಕ್ಕಿ, ಚೊಟ್ಟೆಯಂಡಮಾಡ ವಿನೋದ್, ಉಳುವಂಗಡ ಗಣಪತಿ, ಚೊಟ್ಟೆಯಂಡಮಾಡ ಧನಂಜಯ, ಚೆಟ್ಟಂಗಡ ಬೋಪಣ್ಣ, ಚಿಮ್ಮುಣೀರ ಅರ್ಜುನ್, ಚೊಟ್ಟೆಯಂಡಮಾಡ ಉತ್ತಯ್ಯ, ಚೊಟ್ಟೆಯಂಡಮಾಡ ರಮೇಶ್, ಅಣ್ಣಳಮಾಡ ನರೇಂದ್ರ, ಚಟ್ಟಂಗಡ ರಂಜಿ, ಕಳಕಂಡ ವಿಠಲ್, ಕೊಟ್ರಮಾಡ ತಿಮ್ಮಯ್ಯ, ಕೊಟ್ರಮಾಡ ವಿಜು ಸೋಮಯ್ಯ, ಕಟ್ಟೇರ ಹರೀಶ್, ಕೊಟ್ರಮಾಡ ಮಾದಪ್ಪ ಪಾಲ್ಗೊಂಡಿದ್ದರು.
ಮುAದಿನ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವು ಮಾದಾಪುರದಲ್ಲಿ ಆ.೧೦ ರಂದು ಮತ್ತು ಆ.೧೮ ರಂದು ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.